ದೇವ ಲೋಕದ ಅಪ್ಸರೆ…
ಇಳೆಗಿಳಿಯಬೇಡ
ಭೂರಮೆಯ ಗಾಳಿಗೆ ನಸು ಬಾಡಬಹುದು ಕೋಮಲೆ
ದಯವಿಟ್ಟು ಬರಬೇಡ ನನ್ನ ಮೇಲೊಂದು ಆಣೆ
ನಾನು ಲಯತಪ್ಪಬಹುದು
ಅಬ್ದಿಯಿಮೋರ್ಮೆಕಾಲವಶದಿಂ ಮರ್ಯಾದೆಯಂದಾಂಟದೇ?
ಅಲ್ಲಿಂದಲೇ ಸ್ವಲ್ಪ ನಗು ಚೆಲ್ಲು
ಇಲ್ಲೀ ಸ್ವಲ್ಪ ಜನ ಸಾಯಲಿ
ಭೂಮಿ ಭಾರ ಆಗಿದೆ
ಇಲ್ಲಿ ಸೌಂದರ್ಯ ಮಾರಾಟಕ್ಕಿದೆ
ದಯಾಮಾಡಿ ಬರಬೇಡ
ನಾವೆಲ್ಲ ಸೌಂದರ್ಯ ಆಸ್ವಾದಿಸುವದ ಬಿಟ್ಟು ಯುಗಗಳೇ ಕಳೆದವು
ನೀನು ಅಲ್ಲೇ ಇರು
ಹಾಗೇ ಇರು
ನಗು ಮಾಸದಂತೆ
ನಯನ ಧೂಳಾಗದಂತೆ
ತನು ಲತಿಕೆ ಬಾಡದಂತೆ
ಯುಗ ಯುಗಗಳಲ್ಲೂ ನಿನ್ನ ಸೌಂದರ್ಯ ತಗ್ಗದಂತೆ
ನಾಣಿ