Saturday, March 2, 2024

ಪ್ರಾಯೋಗಿಕ ಆವೃತ್ತಿ

ಲಂಡನ್ನಲ್ಲಿ ಹರಾಜಾಗಲಿದೆ ಜಗತ್ತಿನ ದುಬಾರಿ ವಿಸ್ಕಿ… ಇದರ ಬೆಲೆಯೇ ಬರೋಬರಿ ₹12 ಕೋಟಿ….!

ಜಗತ್ತಿನಲ್ಲಿ ಅತ್ಯಂತ ದುಬಾರಿಯಾಗಿ ವಿಸ್ಕಿ ಯಾವುದಾದರೂ ಇದ್ದರೆ ಅದು 96 ವರ್ಷ ಹಳೆಯ ಮಕಲನ್ ಅದಾಮಿ(Macallan Adami) 1926 ಸಿಂಗಲ್ ಮಾಲ್ಟ್ ವಿಸ್ಕಿ..ಇದರ ಬೆಲೆಯೇ ಅಂದಾಜು ಬರೋಬರಿ ₹ 12 ಕೋಟಿಯಂತೆ, ಈ ಬಾಟಲಿಯ ಹರಾಜನ್ನು ಇದೇ ನವೆಂಬರ್ 18ರಂದು ಲಂಡನ್​​ನಲ್ಲಿ ಸೋಥೆವಿಯ ಸ್ಪಿರಿಟ್ಸ್ ಸಂಸ್ಥೆ ನಡೆಸಲಿದೆ.

ಮಕಲನ್ ಅದಾಮಿ 1926 ಪ್ರಪಂಚದ ಅತ್ಯಂತ ಬೆಲೆ ಬಾಳುವ ಸ್ಕಾಚ್ ವಿಸ್ಕಿಗಳಲ್ಲಿ ಒಂದಾಗಿದೆ. ಈ ಮೊದಲು ಇದೇ ಬ್ರಾಂಡ್​​ನ ವಿಸ್ಕಿಯನ್ನು ಸುಮಾರು 15 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಸ್ಕಾಚ್ ವಿಸ್ಕಿ ಎಂಬ ದಾಖಲೆಯನ್ನು ಮಾಡಿದೆ. ಈ ವಿಂಟೇಜ್ ಸ್ಕಾಚ್ ವಿಸ್ಕಿಯ ಬೆಲೆ ಬರೋಬ್ಬರಿ12 ಕೋಟಿಗೆ ಮಾರಾಟವಾಗುವ ನಿರೀಕ್ಷೆ ಇದೆ.

ವಿಶ್ವದ ಅಪರೂಪದ ವಿಸ್ಕಿ

ಈ ವಿಂಟೇಜ್ ಸ್ಕಾಚ್ ವಿಸ್ಕಿ ಪ್ರಪಂಚದ ಅಪರೂಪದ ಹಾಗೂ ಬೆಲೆ ಬಾಳುವ ವಿಸ್ಕಿಗಳಲ್ಲಿ ಒಂದು. ಈವರೆಗೆ ಕೇವಲ 40 ಬಾಟಲಿ ಮಕಲನ್ ಅದಾಮಿ (Macallan Adami) ಬ್ರಾಂಡ್ ವಿಸ್ಕಿಗಳನ್ನು ಮಾತ್ರ ಉತ್ಪಾದಿಸಲಾಗಿದ್ದು, ಆರು ದಶಕಗಳ ಶೆರ್ರಿ ಕಂಟೇನರ್ನಲ್ಲಿ ಪಕ್ವಗೊಳಿಸಿ ನಂತರ ಈ ವಿಸ್ಕಿಯನ್ನು 1986 ಬಾಟಲಿಗಳಿಗೆ ತುಂಬಿಸಲಾಯಿತು. 40 ಬಾಟಲಿಗಳಲ್ಲಿ ಇದುವರೆಗೆ ಕೇವಲ ಒಂದು ಬಾಟಲಿ ವಿಸ್ಕಿಯನ್ನು ಮಾತ್ರ ತೆರೆದು ಸೇವಿಸಲಾಗಿದೆ. ಇದೇ ಕಾರಣಕ್ಕಾಗಿ ಮಕಲನ್ ಅದಾಮಿ ಇಷ್ಟೊಂದು ಬೆಲೆ ಬಾಳುವ ವಿಸ್ಕಿಯಾಗಿದೆ. ಈಗ ಈ ದುಬಾರಿ ಬೆಲೆ ಬಾಳುವ ವಿಸ್ಕಿಯನ್ನು ನವೆಂಬರ್ 18ರಂದು ಲಂಡನ್​​ನಲ್ಲಿ ಸೋಥೆವಿಯ ಸ್ಪಿರಿಟ್ಸ್ ಸಂಸ್ಥೆ ಹರಾಜಿಗಿಟ್ಟಿದೆ.

ಇಟಾಲಿಯನ್ ಕಲಾವಿದ ವ್ಯಾಲೆರಿಯೊ ಅಡಾಮಿ ವಿನ್ಯಾಸಗೊಳಿಸಿದ ಲೇಬಲ್ ಹೊಂದಿರುವ ಸರಣಿಯ ಕೇವಲ 12 ಬಾಟಲಿಗಳಲ್ಲಿ ಹರಾಜು ಮಾಡಲಿರುವ ಬಾಟಲಿಯು ಒಂದಾಗಿದೆ. ಇದು ವಿಶ್ವಪ್ರ ಸಿದ್ಧ ಮಕಲನ್ ಡಿಸ್ಟಿಲರಿಯಿಂದ ಮರು ಕಂಡೀಷನಿಂಗ್ ಮಾಡಿದ ಮೊದಲ ಬಾಟಲಿಯಾಗಿದೆ. ಈ “ರೀಕಂಡಿಷನಿಂಗ್” ಕ್ಯಾಪ್ಸುಲ್ ಮತ್ತು ಕಾರ್ಕ್ ಅನ್ನು ಬದಲಿಸುವುದರ ಜೊತೆಗೆ ಬಾಟಲ್ ಲೇಬಲ್ಗಳನ್ನು ಸರಿಪಡಿಸುವುದನ್ನು ಒಳಗೊಂಡಿತ್ತು. ಬಹು ನಿರೀಕ್ಷಿತ ಹರಾಜು 2023 ನವೆಂಬರ್ 18ರಂದು ಲಂಡನ್‌ನಲ್ಲಿ ನಡೆಯಲಿದೆ‌. ಯಾರು ಮಕಲನ್ ಅದಾಮಿ ಈ ದುಬಾರಿ ವಿಸ್ಕಿಯನ್ನು ಯಾರು ಖರೀದಿಸುವರೋ ಕಾದು ನೋಡಬೇಕಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!