Thursday, October 10, 2024

ಪ್ರಾಯೋಗಿಕ ಆವೃತ್ತಿ

ಸಾರ್ವಜನಿಕರ‌ ಕುಂದು-ಕೊರತೆ ಆಲಿಸಿದ ಶಾಸಕ ಸಿ.ಎಸ್.ಪುಟ್ಟರಾಜು

ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ಕುಂದು-ಕೊರತೆಗಳನ್ನು ಶಾಸಕ ಪುಟ್ಟರಾಜು ಆಲಿಸಿದರು.

ಪಾಂಡವಪುರ ಪಟ್ಟಣದಲ್ಲಿರುವ ಪುರಸಭೆ ಆವರಣದಲ್ಲಿ ಇಂದು ಶಾಸಕ ಸಿ.ಎಸ್.ಪುಟ್ಟರಾಜು, ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಸ್.ಎಲ್.ನಯನ, ಪುರಸಭೆ ಅಧ್ಯಕ್ಷೆ ಅರ್ಚನಾ, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಕೆಲವೊಂದು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ಪುರಸಭೆ ಮುಂಭಾಗದ ಹಳೇ ಕಟ್ಟಡಗಳ ಅಂಗಡಿ ಮಳಿಗೆಗಳಲ್ಲಿ ಮೂಲ ಮಾಲೀಕರಿಗೆ ಮಾತ್ರ ಅವಕಾಶ ಕೊಟ್ಟು, ಅಕ್ರಮವಾಗಿ ನೆಲೆಸಿರುವವರನ್ನು ತೆರವುಗೊಳಿಸಿ, ಹೊಸ ಅಂಗಡಿ ಮಳಿಗೆ ನಿರ್ಮಿಸಲಾಗುವುದು ಎಂದರು.

ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಸಂತೆಮಾಳ ಮೈದಾನವನ್ನು ಮೂಲ ಅಳತೆ ಪ್ರಕಾರ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಲಾಗುವುದು.ಯಾರು ಹೊಟ್ಟೆಪಾಡಿಗಾಗಿ ಅಂಗಡಿ ನಡೆಸುತ್ತಿದ್ದಾರೋ ಅವರಿಗೆ ಅಂಗಡಿ ನೀಡಲಾಗುವುದು. ಒಂದಕ್ಕೆರಡು ಬಾಡಿಗೆ ಕೊಟ್ಟು ಒಳ ಒಪ್ಪಂದ ಮಾಡಿಕೊಂಡವರನ್ನು ಅವರು ಯಾವ ಪಕ್ಷದವರೇ ಆಗಿರಲಿ ಮುಲಾಜಿಲ್ಲದೆ ತೆರವು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಆಟೋ ಚಾಲಕರಿಂದ ಹೆಚ್ಚುವರಿ ಸುಂಕಾ ವಸೂಲಿ ಮಾಡೋದು ಬೇಡ. ಚಾಲಕರಿಗೆ ಕಡಿಮೆ ಸುಂಕಾ ನಿಗಧಿ ಮಾಡುವುದು ಸೇರಿದಂತೆ ಅನೇಕ ಸಮಸ್ಯೆ ಕುರಿತು ಸಂಬಂಧಪಟ್ಟವರ ಜೊತೆ ಚರ್ಚಿಸಿ, ಕಾನೂನು ಬದ್ಧವಾಗಿ ಕ್ರಮ ಜರುಗಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!