Thursday, June 13, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಶಿಂಷಾ ನದಿ ತಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ದಡ್ಡ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಹೆಬ್ಬಾವು ಈಗ ಮಂಡ್ಯ ಜಿಲ್ಲೆಯಲ್ಲಿಯೂ ಪತ್ತೆಯಾಗಿ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ.

ಮಂಡ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದೆ. ಬೇಸಿಗೆ ಧಗೆಯಿಂದ ಆಹಾರ ಅರಸಿ ಕಾಡು ಪ್ರಾಣಿಗಳು ಮನೆ, ಕೊಟ್ಟಿಗೆ ಮತ್ತು ಮತ್ತಿತರ ಕಡೆಗಳಲ್ಲಿ ಬೇಟೆಗಿಳಿದಿವೆ.

ಇದೇ ಸಾಲಿಗೆ ಈಗ ಹೆಬ್ಬಾವು ಕೂಡ ಸೇರಿಕೊಂಡಿದೆ. ಕುರಿ ಮರಿ ನುಂಗಲು ಯತ್ನಿಸುತ್ತಿದ್ದ ಭಾರಿ ಗಾತ್ರದ ಹೆಬ್ಬಾವಿನ ಯತ್ನ ವಿಫಲವಾಗಿದ್ದು, ಉರಗ ತಜ್ಞರ ಸಹಾಯದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.

nudikarnataka.com

ಮದ್ದೂರು ಪಟ್ಟಣದ ಶಿವಪುರದ ಶಿಂಷಾ ನದಿ ಸಮೀಪ ಚಾಮನಹಳ್ಳಿ ಗ್ರಾಮದ ತಗಡಯ್ಯ ಎಂಬುವವರು ಬುಧವಾರ ಸಂಜೆ 20 ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸುಮಾರು 14 ಅಡಿ ಉದ್ದ, 45 ಕೆಜಿ ತೂಕದ ಬೃಹತ್ ಗಾತ್ರದ ಹೆಬ್ಬಾವು ಕುರಿ ಮಂದೆಯ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಿತು. ಕುರಿ ಮರಿ ನುಂಗಲು ಯತ್ನಿಸುತ್ತಿದ್ದ ವೇಳೆ, ಇದನ್ನು ಗಮನಿಸಿದ ಮಾಲೀಕ ತಗಡಯ್ಯ ಕುರಿ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಾಡಿದ್ದಾರೆ.

ಜನರ ಕಿರುಚಾಟಕ್ಕೆ ಬೆದರಿದ ಹೆಬ್ಬಾವು ಅಲ್ಲೆ ಪಕ್ಕದಲ್ಲಿದ್ದ ಬೇಲಿಗೆ ಸೇರಿ ಅವಿತುಕೊಂಡಿದೆ. ಕೂಡಲೇ ಸ್ಥಳೀಯರು ಛಾಯಾಗ್ರಾಹಕ ಮತ್ತು ಉರಗ ತಜ್ಞ ಚಾಮನಹಳ್ಳಿ ರವಿ ಅವರಿಗೆ ಸುದ್ದಿ ಮುಟ್ಟಿಸಿ ಸ್ಥಳಕ್ಕೆ ಕರೆಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರವಿ ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಹೆಬ್ಬಾವು ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿ ಬಿದ್ದರು. ಬಳಿಕ ಶಿಂಷಾ ನದಿಯ ದಡದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಬಿಟ್ಟು ಬರಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!