Friday, April 19, 2024

ಪ್ರಾಯೋಗಿಕ ಆವೃತ್ತಿ

ಹಕ್ಕು ಪತ್ರ ನೀಡುವವರೆಗೂ ಹೋರಾಟ ನಿಲ್ಲದು

ಮಂಡ್ಯದ ಆರ್ ಟಿ ಓ ಕಚೇರಿ ಎದುರಿನ ಕಾಳಪ್ಪ ಬಡಾವಣೆಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡುವಂತೆ ಒತ್ತಾಯಿಸಿ ಬೈಕ್ ರ್ಯಾಲಿ ನಡೆಸಲಾಯಿತು.

ಕಾಳಪ್ಪ ಬಡಾವಣೆಯ ಶೌಚಾಲಯವನ್ನು ಕೆಡವಿ ಜಾಗ ಒತ್ತುವರಿ ಮಾಡಿದ್ದರ ಸಲುವಾಗಿ ನಡೆಸಿದ ನಿರಂತರ ಧರಣಿಯು ಇಂದಿಗೆ ನಾಲ್ಕು ದಿನ ಪೂರೈಸಿದೆ.

ಆದರೂ ಸಹ ಜಿಲ್ಲಾಡಳಿತವು ಸರಿಯಾದ ಕ್ರಮ ಕೈಗೊಂಡಿಲ್ಲದೆ ಇರುವ ಕಾರಣದಿಂದ ನಿವಾಸಿಗಳು ತೀವ್ರ ಹೋರಾಟವನ್ನು ಮುಂದುವರಿಸಿದ್ದಾರೆ.

ಬೈಕ್ ರ್ಯಾಲಿಯನ್ನು ಚಂದ್ರಶೇಖರ್ ಮತ್ತು ನಾಗರೇವಕ್ಕ ರವರು ಉದ್ಘಾಟಿಸಿದರು.

ಬೈಕ್ ರ್ಯಾಲಿಯು ಡಿಸಿ ಕಚೇರಿಯಿಂದ ಹೊರಟು ಮಂಡ್ಯ ನಗರದ ಮಹಾವೀರ ಸರ್ಕಲ್, ಬೆಂಗಳೂರು-ಮೈಸೂರು ಹೆದ್ದಾರಿ ಸೆರಿದಂತೆ ಮುಖ್ಯ ರಸ್ತೆಗಳಲ್ಲಿ ನಡೆಸಲಾಯಿತು.

ಮುಂದುವರೆದು ಹೋರಾಟದ ಜೊತೆಗೆ ಎಲ್ಲಾ ಶ್ರಮಿಕರು ಕೈಜೋಡಿಸಬೇಕೆಂದು ನಗರದ ಪಿಕೆ ಕಾಲೋನಿ, ನ್ಯೂ ತಮಿಳ್ ಕಾಲೋನಿ, ನಂದಾ ಸ್ಲಂ, ಸ್ಲಾಟರ್ ಹೌಸ್ ಹೀಗೆ ಇನ್ನೂ ಅನೇಕ ಸ್ಲಂ ನಿವಾಸಿಗಳನ್ನು ಕರಪತ್ರ ಹಂಚುವುದರ ಮೂಲಕ ಪ್ರಚಾರ ನಡೆಸಲಾಯಿತು.

ಕರ್ನಾಟಕ ಜನಶಕ್ತಿಯ ಸಿದ್ದರಾಜು, ಆರುಮುಗಂ, ಕಮಲ, ಸುಬ್ರಮಣ್ಯ, ಅಂಜಲಿ ಹಾಗೂ ಅನೇಕರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!