Tuesday, November 24, 2026

ಪ್ರಾಯೋಗಿಕ ಆವೃತ್ತಿ

HDK ರೈತಪರಯಿದ್ದ ಉದಾಹರಣೆಯೇ ಇಲ್ಲ, ಸುಮ್ಮನೆ ಬುಡಬುಡಿಕೆ ಮಾತು ಬೇಕಿಲ್ಲ: ಡಿ.ಕೆ.ಶಿವಕುಮಾರ್ ಟಾಂಗ್

ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವನ್ನು ರಾಜ್ಯ ಸರ್ಕಾರ ಒಪ್ಪಿಸಲಿ ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಟಾಂಗ್ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಅವರು (HDK) ಎಂದೂ ರೈತರ ಪರ ಇದ್ದ ಉದಾಹರಣೆಯೇ ಇಲ್ಲ. ಅವರ ಬುಡಬುಡಿಕೆ ಮಾತುಗಳು ಬೇಕಿಲ್ಲ. ಹೊಸದಾಗಿ ಪಂಚೆ ಹಾಕಿದ್ದನ್ನ ಬಿಟ್ರೆ ಎಂದೂ ರೈತರ ಪರ ನಿಂತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಕೆಆರ್​ಎಸ್ ಅಣೆಕಟ್ಟು​ ವೀಕ್ಷಣೆಗೆ ಮಾಡಿ ಮಾತನಾಡಿದ ಅವರು, ದೊಡ್ಡವರ ಸುದ್ದಿ ಈಗ ಬೇಡ. ಅವರೇನು ಅನುಮತಿ ಕೊಡಿಸಬೇಕಾದ ಅವಶ್ಯಕತೆಯಿಲ್ಲ. ಕಾನೂನು ಪ್ರಕಾರ ಹೋರಾಟ ಮಾಡ್ತೀವಿ. ಕಾನೂನು ಮೂಲಕ ಅನುಮತಿ ಪಡೆದುಕೊಳ್ಳುತ್ತೇವೆ. ಕಾನೂನು ನಮಗೆ ರಕ್ಷಣೆ ನೀಡಲಿದೆ. ಕೇಂದ್ರದಲ್ಲಿ ಸಚಿವರನ್ನ ಭೇಟಿ ಮಾಡಿದ್ದೇನೆ. ಕೇಂದ್ರ ಇರಿಗೇಸನ್ ಮಿನಿಸ್ಟರ್ ಭೇಟಿ ಮಾಡಿ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ. 71 TMC ಈಗಾಗಲೇ ಸಮುದ್ರಕ್ಕೆ ಹೋಗಿದೆ ಎಂದರು.

ಮೈಷುಗರ್ ಕುರಿತು ಚರ್ಚೆ

ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಇರೋದನ್ನೇ ಉಳಿಸಿಕೊಳ್ಳಬೇಕಾ? ಅಥವಾ ಹೊಸ ಕಾರ್ಖಾನೆ ಮಾಡಬೇಕಾ? ಎಂಬ ಬಗ್ಗೆ ಚರ್ಚೆ ನಡೆದಿದೆ. ಇರುವ ಕಾರ್ಖಾನೆಗೆ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಸ್ಥಳೀಯ ಶಾಸಕರು ಕೆಲವು ಸಲಹೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಮಂಡ್ಯ, KRS ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮೊದಲಿಗೆ ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಸ್ಥಳೀಯ ಶಾಸಕರು ಕೆಲವು ಸಲಹೆ ಕೊಟ್ಟಿದ್ದಾರೆ. ನಂಬಿಕೆ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಮೈಶುಗರ್ ಆಸ್ತಿ ಉಳಿಸಿಕೊಳ್ಳುವುದು. 5 ಸಾವಿರ TCD ಹೆಚ್ಚಿಸುವುದು. ಆ ನಂತರ ಡಿಸ್ಟಿಲರಿ ಇತರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು, ಹೊಸ ಕಬ್ಬಿನ ತಳಿ ಪರಿಚಯಕ್ಕೂ ತೀರ್ಮಾನ ಮಾಡಲಾಗಿದೆ. 5 ಸಾವಿರ TCDಗೆ ಅಗತ್ಯ ಇರುವ ಎಲ್ಲವನ್ನೂ ಕೊಡಿಸಲು ಟೆಕ್ನಿಕಲ್ ಟೀಂ ಸಲಹೆ ನೀಡಿದೆ. ರೈತರಿಗೆ ಉತ್ತಮ ಬೆಲೆ ಕೊಡಿಸಬೇಕು. 50 TMC ಬಿಡಬೇಕಿತ್ತು. 96 TMC ಹೆಚ್ಚುವರಿಯಾಗಿ ಬಿಟ್ಟಿದ್ದೇವೆ. 150 TMC ಈಗಾಗಲೇ ಬಿಟ್ಟಿದ್ದೇವೆ. ಕೆರೆ-ಕಟ್ಟೆಗಳನ್ನ ತುಂಬಿಸಲು ಸೂಚಿಸಿದ್ದೇನೆ. ಆ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾವೇರಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ

ಇನ್ನು ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಒಳಗೊಂಡ ತಂಡ ಕಾವೇರಿ ಆರತಿ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳುತ್ತಿದೆ. ಕಾವೇರಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಈಗ ಇರುವ ಸುಮಾರು 200 ಎಕರೆ ಜಾಗದಲ್ಲೇ ಅಭಿವೃದ್ಧಿ ಪಡಿಸಲಾಗುವುದು. ನಮ್ಮ ಪರಂಪರೆ ಉಳಿಸಿಕೊಂಡು ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ. ಟೆಂಡರ್ ಕರೆಯುತ್ತಿದ್ದೇವೆ. ಸುಮಾರು 2 ಸಾವಿರ ಕೋಟಿ ಲೆಕ್ಕಾಚಾರ ಇದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ