Sunday, September 8, 2024

ಪ್ರಾಯೋಗಿಕ ಆವೃತ್ತಿ

ಈ ವ್ಯವಸ್ಥೆ ಬಡ ಮತದಾರನಿಗೆ ಇದನ್ನು ಬಿಟ್ಟು ಬೇರೆ ಏನು ಕೊಟ್ಟಿದೆ ?

ಈ ದೇಶದ ಬಡವನಿಗೆ ಚುನಾವಣೆಯ ಸಂದರ್ಭದಲ್ಲಿ ಒಂದು ಸಾವಿರವೋ ಎರಡು ಸಾವಿರವೋ ಹಣ ನೀಡಿದರೆ ಖಂಡಿತ ಕೈಚಾಚಿ ಇಸಿಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಹಣದ ಸಮಸ್ಯೆ ಇದೆ, ಪೈಸೆ ಪೈಸೆಗೂ ಕಷ್ಟ ಪಡುತ್ತಿರುತ್ತಾನೆ. ಒಂದೆರಡು ಸಾವಿರ ಸಿಕ್ಕರೆ ಕಷ್ಟ ಕಡಿಮೆ ಆಗಬಹುದು ಎಂದು. ಈ ದೇಶದ ಬಡವನಿಗೆ ಕಂಟ್ರಿ ಕಲರ್ ಸಾರಾಯಿ ಪ್ಯಾಕೆಟ್ ಕೊಟ್ಟರೆ ಖಂಡಿತ ಇಸಿಕೊಂಡು ಕುಡಿದು ಬಿಡುತ್ತಾನೆ. ಏಕೆಂದರೆ ಅವನಿಗೆ ದುಬಾರಿ ಸ್ಕಾಚ್ ಕುಡಿಯುವಷ್ಟು ಶಕ್ತಿ ಇಲ್ಲ, ಈ ದೇಶದ ಬಡವನಿಗೆ ಬಿರಿಯಾನಿ‌ಕೊಟ್ಟರು ಕೈಚಾಚುತ್ತಾನೆ ಏಕೆಂದರೆ ಒಂದು ಹೊತ್ತಿನ‌ ಊಟದ ಸಮಸ್ಯೆ ಬಗೆಹರಿಯಿತು ಎಂದುಕೊಂಡು, ಆದರೆ ಈ ವ್ಯವಸ್ಥೆ ಬಡ ಮತದಾರನಿಗೆ ಇದನ್ನು ಬಿಟ್ಟು ಬೇರೆ ಏನು ಕೊಟ್ಟಿದೆ, ಏನೋ ಸಣ್ಣ ಪುಟ್ಟ ಸರ್ಕಾರದ ಸ್ಕೀಮ್ ಉಚಿತ ಅಕ್ಕಿ, ಇಂದಿರಾ‌ ಕ್ಯಾಂಟಿನ್, ಫ್ರೀ ಬಸ್ಸು  ಇಂತಹವುಗಳನ್ನು ನೀಡಿದೆ.  ಆದರೆ ಈ ದೇಶ ಅವನ ಹೆಗಲ ಮೇಲೆ ಸಂವಿಧಾನವನ್ನು ಉಳಿಸುವ ದೇಶವನ್ನು ಉಳಿಸುವ ಜವಾಬ್ದಾರಿಹೊರಿಸಿಬಿಟ್ಟಿದೆ.

nudikarnataka.com

ಅದೇ ಇನ್ನೊಂದು‌ ಕಡೆ, ಈ ದೇಶದ ಸಂಪತ್ತನ್ನು ಐಶ್ವರ್ಯವನ್ನು, ಮನೆಗಳಲ್ಲಿ ತುಂಬಿಸಿಕೊಂಡಿರುವ, ದೊಡ್ಡ ಉದ್ದಿಮೆಗಳನ್ನು‌ ನಡೆಸುತ್ತಿರುವ , ದೊಡ್ಡ ದೊಡ್ಡ ಗುತ್ತಿಗೆಗಳನ್ನು‌ ಪಡೆಯುವ ದೊಡ್ಡ ದೊಡ್ಡ ಅಧಿಕಾರಿಗಳಾಗಿರುವ ವ್ಯಕ್ತಿಗಳ ಜವಾಬ್ದಾರಿ ಏನು ಎಂಬುದು ಯಕ್ಷ ಪ್ರಶ್ನೆಯೇ ಆಗಿದೆ. ರಾಹುಲ್ ಗಾಂಧಿ ಅವರೇನೋ ಪ್ರೆಸ್ ಕಾನ್ಫರೆನ್ಸ್ ಕರೆದು ಚುನಾವಣಾ ಗೆಲುವಿಗೆ ಸಂವಿಧಾನದ ಉಳಿವಿಗೆ ಈ ದೇಶದ ಬಡವರು, ಹಿಂದುಳಿದವರು, ದಲಿತರು ಕಾರಣ ಅವರಿಗೆ ಧನ್ಯವಾದಗಳು ಎಂದು ಹೇಳಿ ಔಪಚಾರಿಕತೆಯನ್ನು ಪೂರೈಸಿಬಿಟ್ಟರೂ, ಆದರೆ…………..

ಜಗದೀಶ್ ಕುಮಾರ್
ಮಂಡ್ಯ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!