Friday, September 20, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪು ಎಕ್ಸ್‌ಪ್ರೆಸ್ ಈಗ ಒಡೆಯರ್ ಎಕ್ಸ್‌ಪ್ರೆಸ್ 

ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದ್ದು, ಮೈಸೂರಿನಿಂದ ತಾಳಗುಪ್ಪವರೆಗಿನ ಎಕ್ಸ್‌ಪ್ರೆಸ್ ಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲಾಗಿದೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೆಲ ತಿಂಗಳ ಹಿಂದೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈ ಕುರಿತಾಗಿ ಪತ್ರ ಬರೆದಿದ್ದರು. ಅವರ ಮನವಿಯನ್ನು ಅಂಗೀಕರಿಸಲಾಗಿದ್ದು, ಶುಕ್ರವಾರ ರೈಲ್ವೆ ಮಂಡಳಿಯು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದು, ರೈಲಿನ ಮರುನಾಮಕರಣದ ಆದೇಶವು ಶನಿವಾರದಿಂದ ಜಾರಿಗೆ ಬರಲಿದೆ.

ಪ್ರತಾಪ್ ಸಿಂಹರ ಈ ನಡೆಯನ್ನು ಕೆಲ ವಿಮರ್ಶಕರು ಮುಸ್ಲಿಂ ಆಡಳಿತಗಾರರ ಐತಿಹಾಸಿಕ ಪರಂಪರೆಯನ್ನು ಅಳಿಸಿಹಾಕಲು, ಬಿಜೆಪಿಯು ಹೆಸರನ್ನು ಬದಲಾಯಿಸುವ ಹುನ್ನಾರದ ಮುಂದುವರಿಕೆಯಾಗಿದೆ ಎಂದು ಈ ಕ್ರಮವನ್ನು ಟೀಕಿಸಿದ್ದಾರೆ.

ಸಂಸದ ಪ್ತತಾಪ ಸಿಂಹ ಅವರು ತಮ್ಮ ಪತ್ರದಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ರೈಲ್ವೇ ಅಭಿವೃದ್ಧಿ ಮತ್ತು ವಿಸ್ತರಣೆಗೆ ಒಡೆಯರ್‌ಗಳ ಕೊಡುಗೆಯನ್ನು ಎತ್ತಿ ತೋರಿಸಿದ್ದಾರೆ.

ಅದೇ ರೀತಿ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದ ಕವಿ ಕುವೆಂಪು ಅವರ ಹೆಸರನ್ನು ಇಡಲಾಗಿದೆ.
.
ತಾಳಗುಪ್ಪ ಎಕ್ಸ್‌ಪ್ರೆಸ್‌ಗೆ ಕುವೆಂಪು ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಯಾವುದೇ ವಿವಾದಗಳಿಲ್ಲದಿದ್ದರೂ, ಟಿಪ್ಪು ಎಕ್ಸ್‌ಪ್ರೆಸ್‌ನ ಮರುನಾಮಕರಣಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳಿಗಾಗಿ ನಿರಂತರವಾಗಿ ಕೆಲಸ ಮಾಡುವ ರೈಲ್ವೇ ಕಾರ್ಯಕರ್ತರ ಒಂದು ವಿಭಾಗವು, ಮೈಸೂರಿನ ಒಡೆಯರ್‌ಗಳು ರಾಜ್ಯದಲ್ಲಿ ರೈಲು ಸಂಪರ್ಕ ವಿಸ್ತರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಹಳೆಯ ರೈಲಿಗೆ ಮರುನಾಮಕರಣ ಮಾಡುವ ಬದಲು, ಹೊಸ ರೈಲನ್ನು ಪ್ರಾರಂಭಿಸುವ ಮೂಲಕ ಒಡೆಯರ್‌ಗಳಿಗೆ ಗೌರವ ಸಲ್ಲಿಸಬಹುದಿತ್ತು ಎಂಬುದು ಕೆಲ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಆದರೆ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಭಾರತದಲ್ಲಿ ರೈಲ್ವೆ ವ್ಯವಸ್ಥೆ ಇರಲಿಲ್ಲ ಎಂಬ ಕಾರಣಕ್ಕಾಗಿ ಸಂಸದ ಪ್ರತಾಪ ಸಿಂಹ ಅವರು ತಮ್ಮ ಪತ್ರದಲ್ಲಿ ತಮ್ಮ ಬೇಡಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಒಡೆಯರು ರೈಲ್ವೇಯನ್ನು ವೇಗದ ಸಾರಿಗೆ ಸಾಧನವಾಗಿ ಉತ್ತೇಜಿಸಲು ಮತ್ತು ಸಮಯೋಚಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಭಾರಿ ಹೂಡಿಕೆ ಮಾಡಿದ್ದರು.

ಟಿಪ್ಪು ಎಕ್ಸ್‌ಪ್ರೆಸ್ ಅನ್ನು ಏಪ್ರಿಲ್ 15, 1980 ರಂದು ಮೈಸೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಸೂಪರ್‌ಫಾಸ್ಟ್ ರೈಲು ಎಂದು ಆರಂಭಿಸಲಾಗಿತ್ತು ಮತ್ತು ರೈಲು ಏಕ-ಸಾಲಿನ ಮೀಟರ್ ಗೇಜ್ ಟ್ರ್ಯಾಕ್‌ನಲ್ಲಿ 3.15 ಗಂಟೆಗಳಲ್ಲಿ ಎರಡು ನಗರಗಳ (ಮೈಸೂರು -ಬೆಂಗಳೂರು) ನಡುವೆ 139 ಕಿ.ಮೀ. ಸಂಚರಿಸುತ್ತಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!