Friday, September 20, 2024

ಪ್ರಾಯೋಗಿಕ ಆವೃತ್ತಿ

”ಟಿಪ್ಪು ವಿರೋಧಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು” ; ಬಿ.ಕೆ.ಹರಿಪ್ರಸಾದ್​

“ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಅವರಿಂದ ಏನನ್ನು ನೀರಿಕ್ಷೆ ಮಾಡಲು ಸಾಧ್ಯ ಇಲ್ಲ. ಇವರಿಂದ ನಾವು ಕಲಿಬೇಕಾಗಿಲ್ಲ. ನಾವು ಟಿಪ್ಪು ಸುಲ್ತಾನ ಪಾರ್ಟ್‌-2 ಅಲ್ಲ. ನಾವು ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ್ ಪರ ಅನ್ನುವವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್​ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್‌ನವರು ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

“ಬಿಜೆಪಿಗೆ ರೈತರು, ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆ ಮಾಡುತ್ತೇವೆ. ನಮ್ಮದು ಜಾತ್ಯತೀತ ರಾಷ್ಟ್ರ. ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು. ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದು ಬಿಜೆಪಿ. ಹಿಂಸೆ ಸುಳ್ಳನ್ನು ಪ್ರಚಾರ ಮಾಡುತ್ತಿರುವುದು ಬಿಜೆಪಿ. ಮೀಸಲಾತಿ ವಿಚಾರದಲ್ಲಿ ನಾಗ್ಪುರದ ಇವರ ಹಿರಿಯರು ವಿರೋಧ ಮಾಡಿದ್ದಾರೆ. ನಾಗ್ಪುರದಲ್ಲಿ ಇರುವ ಇವರ ಸೂತ್ರಧಾರರು ಜಾತಿಗಣತಿಯ ವಿರೋಧಿಗಳು. ಇವರಿಂದ ನಾವು ಕಲಿಯಬೇಕಾಗಿಲ್ಲ. ನಾವು ಟಿಪ್ಪು ಸುಲ್ತಾನ್ ಪಾರ್ಟ್ -2 ಅಲ್ಲ. ನಾವು ಬ್ರಿಟೀಷರ ವಿರುದ್ದ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವರು ಬ್ರಿಟಿಷರ ಬೂಟು ನೆಕ್ಕುವವರು. ಇವರು ನಮಗೆ ಟಿಪ್ಪು ಸುಲ್ತಾನ್ ಫಾಲೋ ಮಾಡ್ತೀವೋಮ ಬಿಡ್ತಿವೋ ಅನ್ನುವುದನ್ನು ನಮಗೆ ಹೇಳೋದು ಬೇಡ” ಎಂದು ವಾಗ್ದಾಳಿ ನಡೆಸಿದರು.

“ಸ್ವತಂತ್ರ ಹೋರಾಟದಲ್ಲಿ ಏಳು ಲಕ್ಷ ಜನ ತ್ಯಾಗ-ಬಲಿದಾನ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ ಹಿರಿಯರು ಯಾರಿದ್ದಾರೆ ಎಂಬ ಬಗ್ಗೆ ಕೇವಲ ಒಂದೇ ಒಂದು ಹೆಸರು ತಿಳಿಸಲಿ. ಎಲ್ಲೂ ಕೂಡ ಒಂದು ಹೆಸರು ಸಿಗುವುದಿಲ್ಲ. ಇವರೆಲ್ಲ ಬ್ರಿಟೀಷರ ಬೂಟು ನೆಕ್ಕುತ್ತಿದ್ದರು. ಇವರು ಕಾಂಗ್ರೆಸ್‌ನವರಿಗೆ ಹೇಳಿಕೊಡುವ ಅವಶ್ಯಕತೆ ಇಲ್ಲ” ಎಂದು ಬಿಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.

“ಆಹಾರ, ಉಡುಪಿನ ಆಯ್ಕೆ ಎಂಬುದು ಅವರವರ ವೈಯಕ್ತಿಕ. ಬಿಜೆಪಿಗೆ ರೈತರು, ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಅದಕ್ಕಾಗಿ ಹಿಜಾಬ್ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಜಾಬ್ ಮತ್ತು ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಹಿಜಾಬ್ ಅನ್ನೋದು ತಲೆ ಮತ್ತೆ ಎದೆ ಮುಚ್ಚಿಕೊಳ್ಳುವುದಕ್ಕೆ ಇರುವುದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದೆ. ಬುರ್ಖಾ ಎನ್ನುವುದು ಸಂಪೂರ್ಣ ದೇಹ ಮುಚ್ಚಿಕೊಳ್ಳುವುದು. ಶಾಲಾ ಕಾಂಪೌಂಡ್‌ವರೆಗೂ ಬುರ್ಖಾ ಆನಂತರ ಹಿಜಾಬ್ ಇರಬೇಕು ಎನ್ನುವುದು ನನ್ನ ಕಲ್ಪನೆ” ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯನವರ ಹಿಜಾಬ್ ನಿಷೇಧ ವಾಪಸ್‌ ಹೇಳಿಕೆಗೆ ಬಿಕೆ ಹರಿಪ್ರಸಾದ್ ಬೆಂಬಲ ಸೂಚಿಸಿದ್ದಾರೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!