Thursday, September 19, 2024

ಪ್ರಾಯೋಗಿಕ ಆವೃತ್ತಿ

ತಿರುಪತಿ ತಿಮ್ಮಪ್ಪನ ಆಸ್ತಿ ಮೌಲ್ಯ 2.26 ಲಕ್ಷ ಕೋಟಿ

ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ಒಟ್ಟು ಆಸ್ತಿ ಮೌಲ್ಯ 2.26 ಲಕ್ಷ ಕೋಟಿ ಇದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೇಳಿದೆ. ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 5,300 ಕೋಟಿಗೂ ಹೆಚ್ಚು ಮೌಲ್ಯದ 10.3 ಟನ್ ಚಿನ್ನದ ಠೇವಣಿ ಮತ್ತು 15,938 ಕೋಟಿ ನಗದು ಸೇರಿದೆ ಎಂದು ಟಿಟಿಡಿ ಸಂಸ್ಥೆ ತಿಳಿಸಿದೆ.

2019ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದ 13,025 ಕೋಟಿ ರೂ. ಸಂಗ್ರಹವಿತ್ತು. ಇದೀಗ 15,938 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಂಗ್ರಹ 2,900 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ” ಎಂದು ಎ.ವಿ.ಧರ್ಮರೆಡ್ಡಿ ತಿಳಿಸಿದ್ದಾರೆ.

ದೇವಸ್ಥಾನಕ್ಕೆ 960 ಕಡೆ 7,123 ಎಕರೆ ಭೂಮಿ ಇದೆ. ದೇವಸ್ಥಾನಕ್ಕೆ ಬರುವ ಭಕ್ತರ ಕಾಣಿಕೆ ಹಾಗೂ ವ್ಯಾಪಾರದ ಆದಾಯವೇ ದೇವಸ್ಥಾನದ ಆಸ್ತಿಯಾಗಿದೆ. ದೇವಾಲಯಕ್ಕೆ ಚಿನ್ನವನ್ನು ಕಾಣಿಕೆಯಾಗಿ ನೀಡುವ ಜನರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2019ರಲ್ಲಿ ಟಿಟಿಡಿ 7.3 ಟನ್ ಚಿನ್ನ ಹೊಂದಿತ್ತು. ಇದಕ್ಕೆ ಈಗ ಇನ್ನೂ 2.9 ಟನ್ ಚಿನ್ನ ಸೇರಿಕೊಂಡಿದೆ. ಇದರಿಂದ ಒಟ್ಟಾರೆ ಚಿನ್ನದ ಠೇವಣಿ ಮೂರೇ ವರ್ಷದಲ್ಲಿ 10.25 ಟನ್‌ಗಳಷ್ಟಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!