Friday, September 20, 2024

ಪ್ರಾಯೋಗಿಕ ಆವೃತ್ತಿ

ಕೃಷಿಪತ್ತಿನ ಸಹಕಾರ ಸಂಘಕ್ಕೆ 5 ಲಕ್ಷ ರೂ.ಆದಾಯ

ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 2021-22ನೇ ಸಾಲಿನಲ್ಲಿ 5 ಲಕ್ಷ ಆದಾಯಗಳಿಸಿದೆ ಎಂದು ಸಂಘದ ಅಧ್ಯಕ್ಷ ಜೆ.ಪಿ.ಶಿವಶಂಕರ್ ಹೇಳಿದರು.

ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿಯಲ್ಲಿರುವ ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2700 ಮಂದಿ ಷೇರುದಾರರಿದ್ದು, ಸಂಘದಿಂದ 790 ಮಂದಿಗೆ ಸುಮಾರು 4 ಕೋಟಿ ಹಣವನ್ನು ಬಡ್ಡಿರಹಿತ ಸಾಲವಾಗಿ ವಿತರಣೆ ಮಾಡಲಾಗಿದೆ. ಸುಮಾರು 54 ಸ್ವಸಹಾಯ ಸಂಘದ ಗುಂಪಿಗೆ ಕಡಿಮೆ ಬಡ್ಡಿಯಲ್ಲಿ 50 ಲಕ್ಷ ಸಾಲ ವಿತರಣೆ ಮಾಡಲಾಗಿದೆ ಎಂದರು.

ಸಂಘದಲ್ಲಿ ರಸಗೊಬ್ಬರ ಮಾರಾಟ ಮಳಿಗೆ, ಆರ್‌ಟಿಸಿ ಕೇಂದ್ರ ಹಾಗೂ ಇ-ಸ್ಟಾಂಪಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ರಸಗೊಬ್ಬರ ಮಾರಾಟದಿಂದ ಸಂಘವು 5 ಲಕ್ಷ ಆದಾಯ ಗಳಿಕೆ ಮಾಡಿದ್ದು, ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಬ್ಯಾಂಕ್ ವತಿಯಿಂದ ವರ್ಷಕ್ಕೊಮ್ಮೆ ನಡೆಯುವ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಷೇರುದಾರರು ಕಡ್ಡಾಯವಾಗಿ ಹಾಜರಾಗಬೇಕು. ಐದು ವರ್ಷದಲ್ಲಿ ಕನಿಷ್ಠ ಎರಡು ವಾರ್ಷಿಕ ಮಹಾಸಭೆಗೆ ಹಾಜರಾಗಿ ಸಹಿ ಹಾಕಿದರೆ ಮಾತ್ರ ಷೇರುದಾರರಿಗೆ ಮತದಾನದ ಹಕ್ಕು ದೊರೆಯುತ್ತದೆ. ಹಾಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ವಾರ್ಷಿಕ ಮಹಾಸಭೆಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ಸಂಘದ ಅಭಿವೃದ್ದಿಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮಹಾಮಂಡಳಿಯಿಂದಲೂ ಅನುದಾನ ನೀಡುವ ಭರವಸೆ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಧರ್ಮರಾಜು, ನಿರ್ದೇಶಕರಾದ ಎಸ್.ಮರೀಗೌಡ, ಜವರೇಗೌಡ, ವಿ.ಬೆಟ್ಟಸ್ವಾಮಿಗೌಡ, ನಟರಾಜು, ಪುಟ್ಟರಂಗಶೆಟ್ಟಿ, ಎಂ.ಕೆ.ಮಂಜುಳ, ಕಮಲಮ್ಮ, ಎಸ್.ಡಿ.ಚಂದ್ರಶೇಖರ್, ಕಾರ್ಯದರ್ಶಿ ಎಸ್.ದೇವರಾಜು, ಸಿಬ್ಬಂದಿಗಳಾದ ಆರ್.ಶಿವಕುಮಾರ್, ಪುಟ್ಟಸ್ವಾಮಿ, ವಿನೋದ್‌ರಾಜ್, ಶಿಲ್ಪ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!