Friday, April 19, 2024

ಪ್ರಾಯೋಗಿಕ ಆವೃತ್ತಿ

ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ

ತಮ್ಮ ನೆಚ್ಚಿನ ನಾಯಕ ನಟ ಹಾಗೂ ನಟಿಯರ ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ ವಿಷಯ. ಆದರೆ ಮದ್ದೂರು ತಾಲ್ಲೂಕಿನ ಲಕ್ಷ್ಮೇಗೌಡನದೊಡ್ಡಿ ನಿವಾಸಿ ನಂದೀಶ್ ಎಂಬ ಯುವಕ ಉದಯ್ ಅವರ ಭಾವ ಚಿತ್ರವನ್ನು ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಇಂದು ಭಾರತೀನಗರಕ್ಕೆ ಬಂದಿದ್ದ ನಂದೀಶ್, ನಾನು ಕದಲೂರು ಉದಯ್ ಅವರ ಜನಪರ ಕಾರ್ಯಕ್ರಮಗಳಿಗೆ ಮನಸೋತು ಎದೆಯ ಮೇಲೆ ಅವರ ಹಚ್ಚೆ(ಟ್ಯಾಟೋ) ಹಾಕಿಸಿಕೊಂಡಿದ್ದೇನೆ.

ನಾನು ಇದುವರೆಗೂ ಹಲವು ರಾಜಕಾರಣಿಗಳನ್ನು ನೋಡಿದ್ದೇನೆ. ಎಲ್ಲಾ ರಾಜಕಾರಣಿಗಳು ಅವರ ಮಕ್ಕಳಿಗೆ ಮೊಮ್ಮಕ್ಕಳಿಗೆ ಆಸ್ತಿ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಆದರೆ ನಮ್ಮ ಉದಯಣ್ಣನವರು ಬಡವರಿಗೆ, ನಿರಾಶ್ರಿತರು ಸೇರಿದಂತೆ ಹಲವರಿಗೆ ತಮ್ಮ ಸ್ವಂತ ಸಂಪಾದನೆ ಹಣವನ್ನು ದಾನ ಮಾಡುತ್ತಿರುವುದರಿಂದ ಅವರ ಅಭಿಮಾನಿಯಾಗಿ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ತಿಳಿಸಿದನು.

ನಂದೀಶನ ಅಭಿಮಾನಕ್ಕೆ ಪ್ರತಿಕ್ರಿಯಿಸಿದ ಕದಲೂರು ಉದಯ್,ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ.ಅಭಿಮಾನ ಮನಸ್ಸಲ್ಲಿರಬೇಕು. ನಿಮಗೆ ನನ್ನ ಮೇಲೆ ಅಭಿಮಾನ ಇದ್ದರೆ ನಿಮ್ಮ ತಂದೆ- ತಾಯಿಯ ಟ್ಯಾಟೂ ಹಾಕಿಸಿಕೊಳ್ಳಿ. ನಿಮ್ಮ ತಂದೆ ತಾಯಿಗಿಂತ ನಾನು ದೊಡ್ಡವನಲ್ಲ.ನಿಮ್ಮ ಅಭಿಮಾನಕ್ಕೆ ನಾನು ಚಿರ ಋಣಿ ಎಂದು ಭಾವುಕರಾದರು.ನನ್ನ ಮೇಲೆ ಪ್ರೀತಿ ಇದ್ದರೆ ಯಾರು ಈ ರೀತಿ ಮಾಡಬಾರದು ಎಂದರು.ನಿಮ್ಮ ಅಭಿಮಾನವೊಂದೆ ನನಗೆ ಶ್ರೀರಕ್ಷೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!