ಕೆ.ಆರ್.ಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲರು ಹಾಗೂ ನೋಟರಿಗಳಾದ ಎನ್.ಆರ್.ರವಿಶಂಕರ್ ಭಾರೀ ಅಂತರದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಿ.ಸಿ.ದಿನೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕೆ.ರಾಜೇಗೌಡ, ಜಂಟಿ ಕಾರ್ಯದರ್ಶಿಯಾಗಿ ಸಿ.ನಿರಂಜನ್, ಖಜಾಂಚಿಯಾಗಿ ಜಗದೀಶ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಉಳಿದಂತೆ ವಕೀಲರ ಸಂಘದ ನಿರ್ದೇಶಕರಾಗಿ ಎಂ.ರಾಣಿ, ಯೋಗೇಂದ್ರ, ಪ್ರಭಾಕರ್, ಸುಂದ್ರೇಶ್, ವಿಜಯಕುಮಾರ್, ಎಂ.ಸಿ.ಸುಜಾತ ಅವರು ಆಯ್ಕೆ ಆಗಿದ್ದಾರೆ.
ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಹಾಗೂ ನೋಟರಿ ಎಂ.ಎನ್.ರಾಮಸ್ವಾಮಿ, ಸಹಾಯಕ ಚುನಾವಣಾಧಿಕಾರಿಯಾಗಿ ವಕೀಲ ಕುಮಾರಸ್ವಾಮಿ ಮತ್ತು ಮಂಜುನಾಥ್, ಕಾರ್ಯ ನಿರ್ವಹಿಸಿದರು* .
ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ವಕೀಲರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಎಸ್.ಸಿ.ವಿಜಯಕುಮಾರ್, ಬಂಡಿಹೊಳೆ ಗಣೇಶ್, ಎಂ.ಎಲ್.ಸುರೇಶ್, ಪ್ರವೀಣ್ ಕುಮಾರ್ (ಪಪ್ಪಿ), ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪದ್ಮೇಶ್ ಮತ್ತು ಹಿರಿಯ, ಕಿರಿಯ ವಕೀಲರು ಅಭಿನಂದಿಸಿದರು.