Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಳೆ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಜಯಂತಿ ಆಚರಣೆ

ಗುರುನಾನಕ್ ಜಯಂತಿ ಅಥವಾ ಗುರುಪುರಬ್ ವಿಶೇಷವಾಗಿ ಸಿಖ್ ಸಮುದಾಯದ ಜನರು ವಾರ್ಷಿಕವಾಗಿ ಆಚರಿಸುವ ಹಬ್ಬವಾಗಿದೆ. ಗುರುನಾನಕ್ ಅವರ ಪ್ರಕಾಶ್ ಉತ್ಸಬ್ ಮತ್ತು ಪ್ರಕಾಶ್ ಪರ್ವ್ ಸೇರಿದಂತೆ ಹಲವು ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ದೇವ್ ಜಿ ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಗುರುಪುರಬ್ ಅನ್ನು ಆಚರಿಸಲಾಗುತ್ತದೆ.

ಪ್ರತಿ ವರ್ಷ, ಗುರುನಾನಕ್ ಜಯಂತಿಯ ಹಬ್ಬವು ಕಾರ್ತಿಕ ಮಾಸದ (ಕಾರ್ತಿಕ ಪೂರ್ಣಿಮಾ) ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಸಿಖ್ಖರು ಪೂರ್ಣ ವೈಭವ ಮತ್ತು ಉತ್ಸಾಹದಿಂದ ಈ ದಿನವನ್ನು ಗುರುತಿಸಲ್ಪಡುತ್ತಾರೆ.

ವಿವಿಧ ಧಾರ್ಮಿಕ ಮೂಲಗಳ ಪ್ರಕಾರ, ಗುರುನಾನಕ್ ದೇವ್ ಜಿ ಅವರು 1469 ರಲ್ಲಿ ತಲ್ವಂಡಿ ನಂಕಾನಾ ಸಾಹಿಬ್‌ನಲ್ಲಿ ಜನಿಸಿದರು ಎನ್ನಲಾಗಿದೆ. ಅವರು ಸಿಖ್ ಧರ್ಮವನ್ನು ಸ್ಥಾಪಿಸಲು ಮತ್ತು ಜಗತ್ತಿಗೆ ಜ್ಞಾನೋದಯವನ್ನು ನೀಡಲು ಹೆಸರುವಾಸಿಯಾಗಿದ್ದಾರೆ. ಹಬ್ಬವು ಅವರ ಪರಂಪರೆ, ಸಾಧನೆಗಳು ಮತ್ತು ಜೀವನವನ್ನು ನೆನೆದು ಆಚರಿಸಲಾಗುತ್ತದೆ.

ಗುರು ನಾನಕ್ ದೇವ್ ಜಿ ಅವರು ಶ್ರದ್ಧೆಯಿಂದ ಪ್ರಾರ್ಥನೆ ಮಾಡುವ ಮೂಲಕ ದೇವರೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ನಂಬಿದ್ದರು. ಗುರು ಗ್ರಂಥ ಸಾಹಿಬ್ ಎಂದು ಕರೆಯಲ್ಪಡುವ ಪವಿತ್ರ ಪಠ್ಯ ಪುಸ್ತಕ – ಸಿಖ್ ಧರ್ಮದ ಪ್ರಮುಖ ಪವಿತ್ರ ಧಾರ್ಮಿಕ ಪಠ್ಯವು ಅವರ ಎಲ್ಲಾ ಬೋಧನೆಗಳಿಂದ ಕೂಡಿದೆ.

ಸಿಖ್ಖರ ಪ್ರಕಾರ, ಗುರು ಗ್ರಂಥ ಸಾಹಿಬ್ ಅಂತಿಮ, ಸರ್ವೋಚ್ಚ ಮತ್ತು ಅಮರ ಗುರು ಮತ್ತು ದೈವಿಕ ಆಶೀರ್ವಾದವನ್ನು ಪಡೆಯಲು ಶ್ರದ್ಧೆಯಿಂದ ಅದನ್ನು ಅನುಸರಿಸಬೇಕು. ಪವಿತ್ರ ವಚನಗಳು ಸಾಮಾಜಿಕ ನ್ಯಾಯ, ಸಮಾನತೆ, ಸಮೃದ್ಧಿ, ಕೋಮು ಮತ್ತು ಜನಾಂಗೀಯ ವ್ಯತ್ಯಾಸಗಳನ್ನು ಲೆಕ್ಕಿಸದೆ ಇಡೀ ಮಾನವಕುಲಕ್ಕೆ ನಿಸ್ವಾರ್ಥ ಭಕ್ತಿಯನ್ನು ಪ್ರತಿಪಾದಿಸುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!