Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಳೆ ಸಂತ್ರಸ್ತೆ ಮನೆಗೆ ಸಂಸದೆ ಸುಮಲತಾ ಭೇಟಿ

ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಸಂತ್ರಸ್ತೆ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಲು ಸಂಸದೆ ಸುಮಲತಾ ಅಂಬರೀಶ್ ನಾಳೆ ಮಧ್ಯಾಹ್ನ ಮಳವಳ್ಳಿಗೆ ಆಗಮಿಸಲಿದ್ದಾರೆ.

ಇತ್ತಿಚೇಗೆ ಮಳವಳ್ಳಿ ಪಟ್ಟಣದಲ್ಲಿ 10 ವರ್ಷದ ಬಾಲಕಿಯ ಮೇಲೆ ಆರೋಪಿಯೊಬ್ಬ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ, ಈ ಕೃತ್ಯಕ್ಕೆ ಮಂಡ್ಯ ಜಿಲ್ಲೆಯಾದ್ಯಂತವಲ್ಲದೇ ರಾಜ್ಯದಾದ್ಯಂತ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು. ಅಲ್ಲದೇ ಸುದ್ದಿಮಾದ್ಯಮಗಳು ಸಂಸದೆ ಸುಮಲತಾ ಘಟನೆ ನಡೆದು 4 ದಿನಗಳಾದರೂ ಸಂತ್ರಸ್ತೆಯ ಮನೆ ಭೇಟಿ ನೀಡಿಲ್ಲ ಎಂದು ಸುದ್ದಿ ಪ್ರಸಾರ ಮಾಡಿದ್ದವು, ಹಾಗೇಯೆ ಸುಮಲತಾ ಅವರ ನಡೆಯನ್ನು ನೆಟ್ಟಿಗರು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದರು ನಾಳೆ  ಭೇಟಿ ನೀಡುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ