Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಾಳೆ ಪ್ರೊ. ಎಂ.ಡಿ. ನಂಜುಂಡಸ್ವಾಮಿ – ಕೆ.ಎಸ್. ಪುಟ್ಟಣ್ಣಯ್ಯ ಸಂಸ್ಮರಣೆ

ಹಸಿರು ಸೇನೆ ಪಾಕ್ಷಿಕ ಪತ್ರಿಕೆ ಬಳಗ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ವಿಚಾರ ವೇದಿಕೆ ಇವರ ಆಶ್ರಯದಲ್ಲಿ ಮಂಡ್ಯ ರೈತರ ಸ್ವಾಭಿಮಾನಿ ದಿನ, ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹಾಗೂ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಂಸ್ಕರಣೆ ಕಾರ್ಯಕ್ರಮವನ್ನು ಮಂಡ್ಯನಗರದ ಗಾಂಧಿಭವನದಲ್ಲಿ ಫೆ.16ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಹಲ್ಲೇಗೆರೆ ಶಿವರಾಮು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮುಖಂಡರಾದ ಸುನೀತ ಪುಟ್ಟಣ್ಣಯ್ಯ ಸಮಾರಂಭ ಉದ್ಘಾಟಿಸುವರು. ಹಸಿರು ಸೇನೆ ಪತ್ರಿಕೆ ಸಂಪಾದಕ ಸೇನೆ ಶಿವರಾಮು ಪ್ರಸ್ತಾವನೆ ಮಾಡುವರು. ಇದೇ ಸಂದರ್ಭದಲ್ಲಿ ಹಿರಿಯ ಮುತ್ಸದಿ ಹೆಚ್.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಗುವುದು ಎಂದರು.

ಮಧ್ಯಾಹ್ನ 3 ಗಂಟೆಗೆ ‘ರೈತ ಮತ್ತು ಮಹಿಳೆ ಚಳವಳಿಯ ಮುಂದಿನ ನಡೆ’ ಕುರಿತು ಸಂವಾದ ನಡೆಯಲಿದ್ದು, ಕೆ.ಟಿ.ಗಂಗಾಧರ್, ದರ್ಶನ್ ಪುಟ್ಟಣ್ಣಯ್ಯ, ಸುನಂದ ಜಯರಾಮ್, ಶ್ರೀಕಾಂತ್ ಬಾಬುಗೌಡ ಪಾಟೀಲ್, ಶೋಭ ಸುಂದರೇಶ್, ಅನುಸೂಯಮ್ಮ, ನಂದಿನಿ ಜಯರಾಮ್, ಚುಕ್ಕಿ ನಂಜುಂಡಸ್ವಾಮಿ ಮತ್ತಿತರರು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಮುಖಂಡ ಪಿ.ಕೆ.ನಾಗಣ್ಣ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ