Friday, September 20, 2024

ಪ್ರಾಯೋಗಿಕ ಆವೃತ್ತಿ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಲಕ್ಷ ರೂ.ವಶ

ದಾಖಲೆ ಇಲ್ಲದೆ ಬೈಕ್ ನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ. ನಗದನ್ನು ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೋಲಿಸ್ ಠಾಣಾ ವ್ಯಾಪ್ತಿಯ ಬೆಂಡರವಾಡಿ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಂದು ಬೆಂಡರವಾಡಿ ಚೆಕ್ ಪೋಸ್ಟ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಶಿವಸ್ವಾಮಿ, ಸುರೇಶ್, ಪಿಎಸ್ಐ ಸತೀಶ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿತ್ತು.

ಈ ವೇಳೆ ಮೈಸೂರು ಮೂಲದ ವ್ಯಕ್ತಿಯೊಬ್ಬನ ಬೈಕ್ ತಪಾಸಣೆ ಮಾಡುತ್ತಿದ್ದಾಗ 10 ಲಕ್ಷ ರೂ. ಹಣ ಸಾಗಿಸುತ್ತಿದ್ದದ್ದು ಪತ್ತೆಯಾಗಿದೆ.

ಬೈಕ್ ಸವಾರ ಹಣದ ಬಗ್ಗೆ ಯಾವುದೇ ಸೂಕ್ತ ದಾಖಲೆ ನೀಡದ ಹಿನ್ನಲೆಯಲ್ಲಿ ಹಣವನ್ನು ವಶಕ್ಕೆ ಪಡೆದುಕೊಂಡು ತಾಲ್ಲೂಕು ಕಚೇರಿಯಲ್ಲಿ ಇಡಲಾಗಿದೆ.

ಈ ಸಂಬಂಧ ತಹಶೀಲ್ದಾರ್ ಕೆ.ಎನ್.ಲೋಕೇಶ್ ಮಾತನಾಡಿ, ಬೆಂಡರವಾಡಿ ಚೆಕ್ ಪೋಸ್ಟ್ ಬಳಿ ನಮ್ಮ ಅಧಿಕಾರಿಗಳು ತಪಾಸಣೆ ಮಾಡುವ ಸಂದರ್ಭದಲ್ಲಿ ಸೂಕ್ತ ದಾಖಲೆ ಇಲ್ಲದ 10 ಲಕ್ಷ ಹಣ ವಶ ಪಡಿಸಿಕೊಂಡಿದ್ದೇವೆ. ಈ ಹಣವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!