Thursday, June 13, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಶೀನಪ್ಪಗೆ ಶ್ರದ್ಧಾಂಜಲಿ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗು ಪ್ರಗತಿಪರ ಸಂಘಟನೆಗಳ ಕ್ರೀಯಾಶೀಲ ಕಾರ್ಯಕರ್ತ ವಳಗೆರೆಹಳ್ಳಿ ಶೀನಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮದ್ದೂರು ಪಟ್ಟಣದ ವೇದಿಕೆ ಕಚೇರಿಯಲ್ಲಿ ಇಂದು ನಡೆಯಿತು, ಈ ಸಂದರ್ಭದಲ್ಲಿ ಮೌನಚಾರಣೆ ಮಾಡಿ, ಸೀನಪ್ಪ ಅವರ ಗುಣಗಾನ ಮಾಡಲಾಯಿತು. ಗುರುಪುತ್ರ ರಮೇಶ್ ಅವರು ಗೀತಾ ನಮನ ಸಲ್ಲಿಸಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ ನ.ಲಿ.ಕೃಷ್ಣ ಮಾತನಾಡಿ,
ತಮ್ಮೊಳಗಿನ ಕೊರತೆಗಳ ನಡುವೆಯು ಹೋರಾಟಗಾರರು ಸಮಾಜಪರತೆಯೊಂದಿಗೆ ಸಮಾಜದ ಏಳಿಗೆಗೆ ಸ್ಪಂದಿಸುವ, ಅದಕ್ಕಾಗಿ ಹೋರಾಟ ಮಾಡುವ ಕಾರ್ಯ ನಿಜಕ್ಕೂ ಆದರ್ಶವಾದದ್ದು ಎಂದು ವ್ಯಾಖ್ಯಾನಿಸಿದರು.
ಸೀನಪ್ಪ ಅವರ ಹೋರಾಟ ಹಾಗೂ ಗುಣ ಕೂಡ ಈ ದೆಸೆಯಲ್ಲಿ ಸ್ಮರಣೀಯ ಎಂದರು.

ರಾಜಕೀಯದಲ್ಲಾಗಲಿ ಸಂಘಟನೆಯಲ್ಲಾಗಲಿ ನಾಯಕರು ಸಮಾಜದ ಪರ ಕಾಳಜಿಯಷ್ಠೇ ಗಮನವನ್ನು ತಮ್ಮ ಕಾರ್ಯಕರ್ತರ ಕಡೆಗೂ ನೀಡಬೇಕು ಎಂದು ಸಲಹೆ ನೀಡಿದರು

ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾ ಶಂಕರ್ ಮಾತನಾಡಿ, ಸೀನಪ್ಪ ಅವರು ನೊಂದವರ ಪರ ದ್ವನಿಯಾಗಿದ್ದರು, ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾಗುತ್ತಿದ್ದರು, ಸೀನಪ್ಪ ಅವರ ನಿಧನ ಅವರ ಕುಟುಂಬಕಷ್ಟೇ ಅಲ್ಲ ಸಮಾಜಕ್ಕೆ ಆದ ನಷ್ಠ ಎಂದು ಹೇಳಿದರು.

ಹಿರಿಯ ಕಲಾವಿದರಾದ ಬಾಲಕೃಷ್ಣ, ವೀರಪ್ಪ, ಗ್ರಾಪಂ ಸದಸ್ಯ ಶಿವಲಿಂಗಯ್ಯ, ತಿಪ್ಪೂರು ರಾಜೇಶ್,
ಸಕ್ಕರೆ ನಾಗರಾಜು, ಮಹಲಿಂಗಯ್ಯ, ತೂಬಿನಕೆರೆ ರಾಜು, ಸೊಂಪುರ ಉಮೇಶ್, ಪಟೇಲ್ ಹರೀಶ್ ಹಾಗೂ ಶೇಖರಪ್ಪ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!