ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಪ್ರೊ.ಕರಿಮುದ್ದೀನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಡಾ.ಸಂಜಯ್ ಕುಮಾರ್ ಮಾತನಾಡಿ, ಯಾವ ಮತಾಂತರದ ಅವಶ್ಯಕತೆಯು ಇಲ್ಲ, ಒಬ್ಬ ಹಿಂದೂ ಉತ್ತಮ ಹಿಂದೂ ಆಗಬೇಕು, ಒಬ್ಬ ಮುಸ್ಲೀಂ ಒಬ್ಬ ಉತ್ತಮ ಮುಸ್ಲೀಂ ಆಗಿರಬೇಕು. ಆಗ ಮಾತ್ರ ಮತಾಂತರದ ಪ್ರಶ್ನೆಯೇ ಇರುವುದಿಲ್ಲ, ಏಕೆಂದರೆ ಇಲ್ಲಿ ಉತ್ತಮವಾಗಿಯೇ ಆಗಿರುವುದರಿಂದ ನಿಜವಾದ ಆಧ್ಯಾತ್ಮಿಕ ವ್ಯಕ್ತಿಯಾಗಿರುತ್ತಾನೆ, ಇದು ಪ್ರೊ.ಕರಿಮುದ್ದೀನ್ ಅವರಿಗೆ ಇಂತಹ ಗುಣ ತುಂಬಾ ಕರಗತವಾಗಿತ್ತು ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸದಸ್ಯರಾದ ಸುನಂದಾ ಜಯರಾಂ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಸಮಾನತೆಯಿಂದ ನೋಡುತ್ತಿದ್ದರು. ಅದೇ ಮಾದರಿಯಲ್ಲಿ ಪ್ರೊ.ಕರಿಮುದ್ದೀನ್, ಎಚ್.ಎಲ್.ಕೇಶವಮೂರ್ತಿ ಅವರು ಸಾಗಿದ್ದರು. ಇವರಿಬ್ಬರು ನನಗೆ ತುಂಬಾ ಹತ್ತಿರವಾಗಿದ್ದರು, ಶ್ರೀರಂಗಪಟ್ಟಣ ನೆನೆಸಿಕೊಂಡರೆ ಡಾ.ಬಂದೀಗೌಡ ಮತ್ತು ಪ್ರೊ.ಕರಿಮುದ್ದೀನ್ ಅವರು ಪ್ರಮುಖರಾಗಿ ಕಾಣುತ್ತಾರೆ ಎಂದು ತಿಳಿಸಿದರು.
ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್, ಗೌರವಾಧ್ಯಕ್ಷ ತೂಬಿನಕೆರೆ ಲಿಂಗರಾಜು, ಗುರುಮೂರ್ತಿ, ಮಂಗಲ ಲಂಕೇಶ್, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್, ಗೋಪನಹಳ್ಳಿ ಕೆಂಪರಾಜು, ದುಂಡಲಿಂಗರಾಜು, ವಸಂತಮ್ಮ, ವೆಂಕಟಾಚಲಯ್ಯ, ಜಯರಾಂ, ಕಿರಂಗೂರು ಪಾಪು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.




