ಸಂಯುಕ್ತ ಅರಬ್ ಒಕ್ಕೂಟ (United Arab Emirates)ದಲ್ಲಿ ‘ಒಕ್ಕಲಿಗರ ಬಳಗದ ಯುಎಇ’ ಉದ್ಘಾಟನಾ ಸಮಾರಂಭವು ಫೆ.12ರಂದು ಬೆಳಿಗ್ಗೆ 11 ಗಂಟೆಗೆ ದುಬೈನ ಮಮ್ಜಾರ್ ಉದ್ಯಾನವನದಲ್ಲಿ ನಡೆಯಲಿದೆ.
ಒಕ್ಕಲಿಗ ಸಮುದಾಯದ ಆಚಾರ ವಿಚಾರ ಸಂಸ್ಕೃತಿಯನ್ನು ಯುಎಇ ಮಣ್ಣಲ್ಲೂ ಪಸರಿಸುವ ಉದ್ದೇಶದಿಂದ ಮತ್ತು ಸರ್ವ ಯುಎಇ ಒಕ್ಕಲಿಗ ಜನಾಂಗವನ್ನು ಒಂದುಗೂಡಿಸುವ ಸಲುವಾಗಿವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಾಂಪ್ರದಾಯಿಕ ಶೈಲಿಯ ಉಡುಗೆ ಸೀರೆ ಮತ್ತು ಪಂಚೆಗಳನ್ನು ಧರಿಸಿ ಬರುವಂತೆ ತಿಳಿಸಲಾಗಿದೆ. ಅಲ್ಲದೇ ಮಧ್ಯಾಹ್ನ ಗೌಡರ ಶೈಲಿಯ ಬಾಡೂಟದ ಔತಟಕೂಟವನ್ನು ಆಯೋಜಿಸಲಾಗಿದೆ. ಅಲ್ಲದೇ ವಯಸ್ಕರು ಮತ್ತು ಮಕ್ಕಳಿಗಾಗಿ ವಿವಿಧ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ದುಬೈನಲ್ಲಿರುವ ಮೇಲುಕೋಟೆ ಮೂಲದ ರಾಜುಗೌಡ ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ. ಯುಎಇನಲ್ಲಿರುವ ಒಕ್ಕಲಿಗರು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ. 0508724479, 0526995413, 0507394039, 0505325921, 0521446860 ಹಾಗೂ 0507494924 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.
( ದುಬೈನಲ್ಲಿರುವ ಮೇಲುಕೋಟೆ ಬಳಿಯ ಸಿಂಗಾಪುರ ಗ್ರಾಮದ ರಾಜುಗೌಡ ಅವರ ಮನವಿಯ ಮೇರೆಗೆ ಈ ವರದಿಯನ್ನು ಪ್ರಕಟಿಸಲಾಗಿದೆ. ದುಬೈನಲ್ಲಿರುವ ಕನ್ನಡಿಗರು ನಿರಂತರವಾಗಿ ನುಡಿಕರ್ನಾಟಕ.ಕಾಂ ವೆಬ್ ನ್ಯೂಸ್ ಗಳನ್ನು ಓದುತ್ತಿದ್ದು, ನಾವು ರಚಿಸಿರುವ ವಾಟ್ಸಾಪ್ ಗ್ರೂಪ್ ನಲ್ಲೂ ಸೇರ್ಪಡೆಯಾಗಿ ಮಂಡ್ಯ ಜಿಲ್ಲೆಯ ಸಮಗ್ರ ಸುದ್ದಿಗಳನ್ನು ಓದುವ ಮೂಲಕ ಇಲ್ಲಿನ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದಾರೆ)




