ವಾಹನ ಸೇವೆ ಒದಗಿಸುವ ಉಬರ್ ಕಂಪನಿಯು ಕನ್ನಡಿಗ ಡ್ರೈವರ್ ಗಳು ಹಾಗೂ ಮಂಡ್ಯ ಜಿಲ್ಲೆಯ ಡ್ರೈವರ್ ಗಳಿಗೆ ಹೆಚ್ಚು ಬಾಡಿಗೆ ನೀಡದೇ ಅನ್ಯಾಯ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಕಂಪನಿಯು ಇದೇ ರೀತಿಯ ವರ್ತನೆ ಮುಂದುವರಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಮಂಡ್ಯ ಶಾಸಕ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಉಬರ್ ಕಂಪನಿಯು ಹೊರ ರಾಜ್ಯದ ಡ್ರೈವರ್ ಗಳಿಗೆ ಹೆಚ್ಚು ಬಾಡಿಗೆ ನೀಡಿ, ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ. ಅದರಲ್ಲೂ ಮಂಡ್ಯ ಭಾಗದವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಮ್ಮ ಕನ್ನಡನಾಡಿನವರಿಗೆ ಕೆಲಸ ನೀಡದೇ ಅನ್ಯ ರಾಜ್ಯದವರಿಗೆ ಬಾಡಿಗೆ ನೀಡುವುದು ಅನ್ಯಾಯದ ಪರಮಾವಧಿಯಲಾಗಿದೆ. ಕೂಡಲೇ ಕಂಪನಿಯು ತನ್ನ ನಡವಳಿಕೆಯನ್ನು ತಿದ್ದುಕೊಂಡು ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೇ ನನ್ನ ನೇತೃತ್ವದಲ್ಲೇ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.




