Thursday, September 19, 2024

ಪ್ರಾಯೋಗಿಕ ಆವೃತ್ತಿ

ಉದಯ್ ಚಾರಿಟಬಲ್ ಟ್ರಸ್ಟ್ | ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ವರದಿ : ಪ್ರಭು ವಿ ಎಸ್

ಮದ್ದೂರು ಗ್ರಾಮೀಣ ಭಾಗದ ಮಕ್ಕಳ ಬದುಕನ್ನು ಉಜ್ವಲಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಉದಯ್  ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಸೇವಾ ಕಾರ್ಯ ಕೈಗೊಂಡು ಸರಕಾರಿ ಶಾಲಾ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರಮಿಸುತ್ತಿರುವುದಾಗಿ ಉದ್ಯಮಿ ಹಾಗೂ ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ತಾಲ್ಲೂಕಿನ ಉಪ್ಪಿನಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರ. ಬಡವರ. ಕೂಲಿ ಕಾರ್ಮಿಕರ ಮಕ್ಕಳಿಗೆ ಪ್ರೊತ್ಸಾಹ ಮತ್ತು ಸ್ಪೂರ್ತಿ ತುಂಬುವ ಸದುದ್ದೇಶದಿಂದ ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪ್ರತಿಭಾ ಪುರಸ್ಕಾರ ನೀಡುವ ಜೊತೆಗೆ ಮಕ್ಕಳನ್ನು ಹುರಿದುಂಬಿಸಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತಿರುವುದಾಗಿ ಹೇಳಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು ಇದನ್ನು ಮನಗೊಂಡ ಚಾರಿಟಬಲ್ ಟ್ರಸ್ಟ್ ಸುಮಾರು 10,000 ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ ಅಗತ್ಯ ಶಾಲಾ ಪರಿಕರಗಳನ್ನು ವಿತರಿಸುವುದಾಗಿ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಅಗತ್ಯವುಳ್ಳ ಶುದ್ಧ ಕುಡಿಯುವ ನೀರಿನ ಘಟಕ. ಕಾಂಪೌಂಡ್ ನಿರ್ಮಾಣ. ಬಿಸಿಯೂಟ ತಯಾರಿಸಲು ಅಗತ್ಯ ಸಾಮಗ್ರಿಗಳ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಧನ ಮತ್ತು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಶಾಲೆಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗಿದೆ ಎಂದರು.

ತಾಲೂಕಿನ ನಗರಕೆರೆ. ಚನ್ನಸಂದ್ರ. ಗೊರವನಹಳ್ಳಿ. ಹುಲಿಗೆರೆಪುರ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಜೊತೆಗೆ ಮಕ್ಕಳು ಪೋಷಕರು ಮತ್ತು ಸ್ಥಳೀಯ ಗ್ರಾಮಸ್ಥರಿಗೆ ಸಿಹಿ ವಿತ್ತರಿಸಿದರು.

ಕಾರ್ಯಕ್ರಮದ ವೇಳೆ ಟ್ರಸ್ಟ್ ವಿಜಯ್ ವಿಕ್ರಮ್ . ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಗ್ರಾಮ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಧುಕುಮಾರ್. ಸದಸ್ಯ ರಮೇಶ್. ಸ್ಥಳೀಯ ಮುಖಂಡರಾದ ರವಿ. ರಘುನಂದನ್ .ಅರವಿಂದ. ಚಿಕ್ಕ ಬಸವಯ್ಯ. ಬೋರೇಗೌಡ. ಗಿರಿ. ಮುಖ್ಯ ಶಿಕ್ಷಕ ಶಿವಣ್ಣ. ಶಿಕ್ಷಕಿ ಲತಾ. ಸೇರಿದಂತೆ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!