Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮಿತ್ ಶಾ ಹೇಳಿಕೆಗೆ ಉದಯನಿಧಿ ಸ್ಟಾಲಿನ್ ಪ್ರಬಲ ವಿರೋಧ

ಹಿಂದಿ ಭಾರತದ ಒಗ್ಗೂಡಿಸುವ ಶಕ್ತಿ ಮತ್ತು ಅದು ಇತರ ಪ್ರಾದೇಶಿಕ ಭಾಷೆಗಳನ್ನು ಸಬಲೀಕರಣಗೊಳಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ.

“>

ದೇಶದ ನಾಲ್ಕೈದು ರಾಜ್ಯಗಳಲ್ಲಿ ಮಾತ್ರ ಹಿಂದಿ ಮಾತನಾಡುತ್ತಿದ್ದು, ಅಮಿತ್ ಶಾ ಹೇಳಿಕೆ ಸಂಪೂರ್ಣ ಅಸಂಬದ್ಧವಾಗಿದೆ. ಇದು ಜೀವನೋಪಾಯವನ್ನು ಸೃಷ್ಟಿಸುವ ನೆಪದಲ್ಲಿ ಹಿಂದಿಯನ್ನು ಹೇರುವ ಮತ್ತೊಂದು ಆವೃತ್ತಿಯಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತಿರುಗೇಟು ನೀಡಿದ್ದಾರೆ.

ನಾವು ಇಲ್ಲಿ ತಮಿಳು ಮಾತನಾಡುತ್ತಿದ್ದರೆ, ಕೇರಳ ಮಲೆಯಾಳಂ ಮಾತನಾಡುತ್ತದೆ. ಹಿಂದಿ ಎಲ್ಲಿ ವಿಲೀನಗೊಳ್ಳುತ್ತದೆ ಮತ್ತು ನಮಗೆ ಅಧಿಕಾರ ನೀಡುತ್ತದೆ? ಹಿಂದಿಯೇತರ ಭಾಷೆಗಳನ್ನು ಕೇವಲ ಪ್ರಾದೇಶಿಕ ಭಾಷೆ ಎಂದು ಕರೆಯುವ ಮೂಲಕ ದಬ್ಬಾಳಿಕೆ ಮಾಡುವುದನ್ನು ಅಮಿತ್ ಶಾ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!