Tuesday, November 24, 2026

ಪ್ರಾಯೋಗಿಕ ಆವೃತ್ತಿ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಧರ್ಮದೇಟು

ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಜನರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಸಂಜೆ 4.30 ರಲ್ಲಿ ನಡೆದಿದೆ.

ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್ಸಿನಲ್ಲಿ ಕುಳಿತಿದ್ದ14 ವರ್ಷದ ಅಪ್ರಾಪ್ತ ಬಾಲಕಿಯ ತುಟಿ ಕಚ್ಚಿ ಲೈಂಗಿಕ‌ ಕಿರುಕುಳ ನೀಡಿದ ಮೈಸೂರು‌ ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ನಿವಾಸಿ ನವೀನ್(34)ಗೆ ಜನರೇ ಸರಿಯಾದ ಪಾಠ ಕಲಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಜಾಹೀರಾತು

ಘಟನೆ ವಿವರ: ಆರೋಪಿ ನವೀನ್ ಪಾನಮತ್ತನಾಗಿ ಪ್ರತಿದಿನ ಬಸ್ ನಿಲ್ದಾಣಕ್ಕೆ ಬಂದು ಶಾಲಾ-ಕಾಲೇಜು‌ ಮಕ್ಕಳನ್ನು ಚುಡಾಯಿಸುವುದು,ಒಂಟಿ ಮಹಿಳೆಯರನ್ನು ರೇಗಿಸುತ್ತಾ ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವ ಅಭ್ಯಾಸ ಮಾಡಿಕೊಂಡಿದ್ದ. ಇಂದು ಕೂಡಾ ಪಾನಮತ್ತನಾಗಿ ಸಂಜೆ 4.30ಗಂಟೆ ಸಮಯದಲ್ಲಿ ಶೀಳನೆರೆ ಮಾರ್ಗವಾಗಿ ಹೋಗಲು ನಿಂತಿದ್ದ ಬಸ್ಸಿಗೆ ನುಗ್ಗಿದ ಕಾಮುಕ ನವೀನ್ ಅಪ್ರಾಪ್ತ ಬಾಲಕಿಯ ಮೈ ಕೈ ಮುಟ್ಟಿ ಎಳೆದಾಡುತ್ತಿದ್ದಾಗ ಆಕೆ ರಕ್ಷಣೆಗಾಗಿ ಕಿರುಚಿಕೊಂಡಿದ್ದಾಳೆ.

ಕೂಡಲೇ ಕಾಮುಕ ನವೀನ್ ಬಾಲಕಿಯ ಬಾಯನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿ ಕೆ.ಆರ್.ಪೇಟೆ ಪಟ್ಟಣ ಪೊಲೀಸರ ವಶಕ್ಕೆ ನೀಡಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದಿರುವ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ