Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕಳಪೆ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ಗ್ರಾ.ಪಂ. ಸದಸ್ಯರ ಒಕ್ಕೂಟದ ಧರಣಿ

ವರದಿ: ನ.ಲಿ.ಕೃಷ್ಣ

ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿರುವ ಹಲವು ಕಳಪೆ ಕಾಮಗಾರಿಗಳ ತನಿಖೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟವು ಬುಧವಾರ ಮದ್ದೂರು ತಾ.ಪಂ.ಎದುರು ಧರಣಿ ನಡೆಸಿತು.

ಒಂದು ವರ್ಷದಿಂದ ತಾಲ್ಲೂಕು ವ್ಯಾಪ್ತಿಯ ಗ್ರಾ. ಪಂ.ಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪಟ್ಟಿ ಮಾಡಿ ತಾ ಪಂ ಮುಂದೆ ಮಂಡಿಸಿದರೂ ಕಾರ್ಯ ನಿರ್ವಹಣಾಧಿಕಾರಿಗೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆಂದು ಆರೋಪಿಸಿದರು. ರಾಜ್ಯಮಟ್ಟದ ಅಧಿಕಾರಿಗಳು ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ಮುಂದುವರಿಸುವುದಾಗಿ ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಬೇಡಿಕೆಗಳು

  • ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಕಳಪೆ ಕಾಮಗಾರಿ ಆಗಿದ್ದು ತನಿಖೆ ಆಗಬೇಕು
  • ಶುದ್ದ ಕುಡಿಯುವ ನೀರಿನ ಘಟಕ ದ ಕಾಮಗಾರಿ ಕಳಪೆ ಆಗಿದ್ದು, ನಿಯಾಮವಳಿ ಪಾಲನೆ ಆಗದ ಬಗ್ಗೆ ತನಿಖೆ ಆಗಬೇಕು
  • ಜಿ.ಪಂ. ಸಿಇಓ ನೇತೃತ್ವದಲ್ಲಿ ಚೆಸ್ಕಾಂ ಅಧಿಕಾರಿಗಳ ಜೊತೆ ನಡೆದ ಸಭೆಯ ಬೇಡಿಕೆ ಕೂಡಲೆ ಜಾರಿ ಅಗಬೇಕು
  • ಗ್ರಾ ಪಂ ಹಂತದ ನೌಕರರನ್ನು ಅಯಾ ಗ್ರಾ ಪಂ ಗೆ, ತಾ ಪಂ ನಿಂದ ಬಿಡುಗಡೆ ಗೊಳಿಸಿ ಮೂಲ‌ಸ್ಥಳಕ್ಕೆ ಕಳುಹಿಸಲು ಕ್ರಮ ವಹಿಸಬೇಕು
  • ಗ್ರಾ ಪಂ ವ್ಯಾಪ್ತಿಯ ಕೆರೆಗಳ ಮೀನುಗಾರಿಕೆ ಹಕ್ಕಿನ ಕುರಿತು ಮೀನುಗಾರಿಕೆ ಇಲಾಖೆ ಹಸ್ತಕ್ಷೇಪ ನಿಲ್ಲಬೇಕು. ನಿಯಮ ಬಾಹಿರವಾಗಿ ಟೆಂಡರ್ ಕರೆದು ಹಕ್ಕು ನೀಡಿದ ಮೀನುಗಾರಿಕೆ ಇಲಾಖಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು
  • ಮನರೇಗಾ ಯೋಜನೆ ಪ್ರಗತಿ ಕುಂಠಿತಗೊಂಡಿದ್ದು ಅದರ ನೈಜ ಪ್ರಗತಿಗೆ ಕ್ರಮ ವಹಿಸಬೇಕು
  • ಮಂಡ್ಯ ಜಿಲ್ಲೆ ಬರಕ್ಕೆ ತುತ್ತಾಗಿರುವುದನ್ನ ಪರಿಗಣಿಸಿ ಮನರೇಗಾ (ಉದ್ಯೊಗ ಖಾತರಿ) ಯೊಜನೆಯಡಿ ಮಾನವ ದಿನಗಳ ಹೆಚ್ಚಳ ಹಾಗು ವಿಶೇಷ ಕ್ರಿಯಾ ಯೋಜನೆ ತುರ್ತಾಗಿ ಸಿದ್ದಪಡಿಸಬೇಕು
  • ಕಾಡುಕೊತ್ತನಹಳ್ಳಿ ಗ್ರಾ ಪಂ ಪಿ ಡಿ ಓ ಕರ್ತವ್ಯ ಲೋಪ ಅಧಿಕಾರ ದುರುಪಯೋಗದ ಕಾರಣಕ್ಕೆ ಕೂಡಲೇ ಆಮನತ್ತುಗೊಳಿಸಬೇಕು
  • ತಾ ಪಂ ವ್ಯವಸ್ಥಾಪಕ ರಾಮಕೃಷ್ಣ ಅವರ ಮೇಲೆ ಹೀಗಾಗಲೇ ಒಕ್ಕೂಟ ನೀಡಿರುವ ದೂರು ಆಧರಿಸಿ ಆಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು
  • ಕಾಡುಕೊತ್ತನಹಳ್ಳಿ ಪಿ‌ಡಿಓ ಹಾಗೂ ತಾ ಪಂ ವ್ಯವಸ್ಥಾಪಕರ ಕಾನೂನು ಬಾಹಿರ ಕೆಲಸವನ್ನು ಪೋಷಿಸಿ ಅವರ ರಕ್ಷಣೆಗೆ ನಿಂತಿರುವ, ಆ ಮೂಲಕ ಕರ್ತವ್ಯ ದುರುಪಯೊಗಪಡೆಸಿಕೊಂಡಿರುವ ತಾ ಪಂ ಇ ಓ ಸಂದೀಪ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಬೇಕೆಂದು ಆಗ್ರಹಿಸಿದರು.

ಧರಣೆಯಲ್ಲಿ ಒಕ್ಕೂಟದ ಅಧ್ಯಕ್ಷ ಜಿ ಎನ್ ಸತ್ಯ, ಕಾರ್ಯದರ್ಶಿ ಮಾದರಹಳ್ಳಿ ಕೃಷ್ಣ, ಗೌರವಾಧ್ಯಕ್ಷ ದಯಾನಂದ್, ಉಪಾಧ್ಯಕ್ಷರಾದ ನಳಿನ ಶಿವಲಿಂಗಯ್ಯ, ಮಹೇಶ್, ಪದಾಧಿಕಾರಿಗಳಾದ ಮಾದೇಶ್ ಬೊಮ್ಮನದೊಡ್ಡಿ, ಕೃಷ್ಣ, ಮಹಾಲಕ್ಷ್ಮಿ, ಗುಡಿಗೆರೆ ಮಂಜುನಾಥ್, ಬಿದರಕೊಟೆ ಕೃಷ್ಣ, ಬೆಕ್ಕಳಲೆ ವೆಂಕಟೇಶ್ ಗ್ರಾ ಪಂ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!