Tuesday, November 24, 2026

ಪ್ರಾಯೋಗಿಕ ಆವೃತ್ತಿ

ಅವೈಜ್ಞಾನಿಕ ಚರಂಡಿ ನಿರ್ಮಾಣ: ನಿವಾಸಿಗಳ ಆಕ್ರೋಶ

ಮಂಡ್ಯ ನಗರದ ಗುತ್ತಲು ಬಡಾವಣೆಯ ಬಸವೇಶ್ವರ ನಗರದ 32ನೇ ವಾರ್ಡಿನಲ್ಲಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ನಿವಾಸಿಗಳು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಚರಂಡಿ ಸುತ್ತಳತೆ ಮಾಡಿ‌ ಬಹಳ ವಿಶಾಲವಾಗಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಚರಂಡಿ ನೀರು ಮನೆಗಳಿಗೆ ನುಗ್ಗಿ ಜನರು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಜ್ಞಾನಿಕವಾಗಿ ಚರಂಡಿ ಮಾಡಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು.ಇಲ್ಲದಿದ್ದರೆ ಚರಂಡಿ ನೀರು ಮನೆಗೆ ನುಗ್ಗುತ್ತದೆ ಎಂದು ಸೈಯದ್, ಸುಹೇಲ್ ಮುನಾವರ್ ಪಾಷ ವಿವರಿಸಿದರು.

ಮಳೆ ಬಂದಾಗ ಮಳೆ ನೀರು ಹಾಗೂ ಚರಂಡಿ ನೀರು ಒಟ್ಟಿಗೆ ಹೋಗುತ್ತಿದೆ. ಇಲ್ಲಿನ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಬಂದು ಅಂದಾಜು ವೆಚ್ಚದ ಪಟ್ಟಿ ತೋರಿಸಿ ಕೆಲಸ ಆರಂಭಿಸಬೇಕು ಎಂದು ಒತ್ತಾಯಿಸಿದರು.

ನಿವಾಸಿಗಳಾದ ಈಸೂಫ್‌ಖಾನ್‌, ಸೈಯದ್‌ ಇಸೂ ಆಲಿ, ಸೈಯದ್‌ ಆಲಿಂ, ಸೈಯದ್‌ ಆದಿಲ್‌, ಸುಹೇಲ್‌ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ