ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ, ಹಿರಿಯ ವಕೀಲ ದಿವಂಗತ ಎಂ. ಲಿಂಗಯ್ಯನವರ ಧರ್ಮಪತ್ನಿ ಶಾರದಾ ಲಿಂಗಯ್ಯ (88)ವರ್ಷ ಇಂದು ಬೆಳಿಗ್ಗೆ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಡ್ಯ ನಗರದ ಆಶೋಕನಗರ 3ನೇ ಕ್ರಾಸ್ ನಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಿಧನರಾದರು.
ತಮ್ಮ ಜೀವಿತಾವಧಿಯಲ್ಲಿ ಹಲವಾರು ಸಾಮಾಜಿಕ ಸೇವೆ ಸಲ್ಲಿಸಿದ್ದ ಇವರು ಪುತ್ರ ಡಾ. ಎಂ.ಎಲ್. ವೆಂಕಟೇಶ್, ಪುತ್ರಿಯರಾದ ಎಂ.ಎಲ್.ಅರುಣಾ, ವೀಣಾ ಸೇರಿದಂತೆ ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಡಾ.ಸುಜಯ್ ಕುಮಾರ್, ಎಂ.ಕೃಷ್ಣ,ಆನಂದ್,ಕೆ.ಸಿ.ಮಂಜುನಾಥ್,ಹೊಸಹಳ್ಳಿ ಶಿವಲಿಂಗೇಗೌಡ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಮೃತರ ಅಂತ್ಯಕ್ರಿಯೆ ಶನಿವಾರ ಸಂಜೆ ಮಂಡ್ಯ ನಗರದ ಶ್ರೀರಾಮನಗರದಲ್ಲಿರುವ ಅವರ ತೋಟದಲ್ಲಿ ನೆರವೇರಿತು.




