Friday, September 20, 2024

ಪ್ರಾಯೋಗಿಕ ಆವೃತ್ತಿ

ಅನಗತ್ಯ ಕೌಟುಂಬಿಕ ಮುಜುಗರ ತಪ್ಪಿಸಿದ ನಾಯಕ: ವರುಣ್ ಗಾಂಧಿ

ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿ ಅವರ ಮಗನಾದ ವರುಣ್ ಗಾಂಧಿಯ ರಾಜಕೀಯ ನಡೆ ಉತ್ತರ ಪ್ರದೇಶದಲ್ಲಿ ಉಂಟಾಗಬಹುದಾಗಿದ್ದ ಅತ್ಯಂತ ಹೈ-ವೋಲ್ಟೇಜ್ ಸ್ಪರ್ಧೆಯನ್ನು ತಪ್ಪಿಸಿದೆ.

ಇದು ಎನ್‌ಡಿಎ ಮೈತ್ರಿ ಕೂಟಕ್ಕೆ ರಾಜಕೀಯ ನಷ್ಟವಾದರೆ, ಇಂಡಿಯಾ ಕೂಟಕ್ಕೆ ರಾಜಕೀಯ ಲಾಭವಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಉತ್ತರ ಪ್ರದೇಶದ ಸುಲ್ತಾನ್ ಪುರದಿಂದ ಬಿಜೆಪಿ ಅಭ್ಯರ್ಥಿ ಆಗಿ ಮೇನಕಾ ಗಾಂಧಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಫಿಲಿಬಿಟ್ ನಿಂದ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ‌ನಿರಾಕರಿಸಿತು.ಬಿಜೆಪಿ ಹೈಕಮಾಂಡ್ ದೃಷ್ಟಿಯಲ್ಲಿ ಇದ್ದದ್ದು ರಾಯಬರೇಲಿ ಯಿಂದ ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ಅಭ್ಯರ್ಥಿ ಆಗಲಿದ್ದು, ಅವರ ವಿರುದ್ಧ ವರುಣ್ ಗಾಂಧಿಯನ್ನು ನಿಲ್ಲಿಸುವ ಮೂಲಕ ಪರಸ್ಪರ ಗಾಂಧಿ ಕುಟುಂಬದ ಜನರೇ ಗುದ್ದಾಡುವಂತೆ ಮಾಡಿ ಅತ್ಯಂತ ಹೆಚ್ಚಿನ ರಾಜಕೀಯ ಲಾಭ ಪಡೆಯುವ ಬಿಜೆಪಿಯ ತಂತ್ರಗಾರಿಕೆಗೆ ವರುಣ್ ಗಾಂಧಿ ಒಪ್ಪಲಿಲ್ಲ.

ಗಾಂಧಿ ಕುಟುಂಬದ ನಡುವೆ ಅನಗತ್ಯ ಸಂರ್ಘಷಕ್ಕೆ ಎಡೆ ಮಾಡಿ ಕೊಡದೆ, ಬಿಜೆಪಿಯ ಸರ್ವ ಪ್ರಯತ್ನಗಳ ನಡುವೆಯೂ ಸಹ ರಾಯ್ ಬರೇಲಿಯಿಂದ ಬಿಜೆಪಿ ಅಭ್ಯರ್ಥಿ ಆಗಲು ವರುಣ್ ಗಾಂಧಿ ಒಪ್ಪದೆ ಅತ್ಯಂತ ಪ್ರಬುದ್ಧ ರಾಜಕೀಯ ನಡೆ ಪ್ರದರ್ಶಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!