Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಎಸ್.ಭಗವಾನ್ ಮೇಲೆ ದೂರು ದಾಖಲಿಸಿರುವುದು ಖಂಡನೀಯ : ವೆಂಕಟಗಿರಿಯಯ್ಯ

ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕವನ್ನು ಉಲ್ಲೇಖಿಸಿ ಸತ್ಯವನ್ನು ಹೇಳಿರುವ ವಿಚಾರವಾದಿ ಕೆ.ಎಸ್.ಭಗವಾನ್ ಅವರ ಮೇಲೆ ಶ್ರಿರಂಗಪಟ್ಟಣದಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿರುವುದು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಈ ಪ್ರಕರಣವನ್ನು ನಿಷಪಕ್ಷಪಾತ ತನಿಖೆ ನಡೆಸಿ ಪ್ರಕರಣವನ್ನು ಈ ಕೂಡಲೆ ಕೈ ಬಿಡಲು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಕದಸಂಸ ಒತ್ತಾಯಿಸುತ್ತದೆ ಎಂದರು.

ಕೆ.ಆರ್.ಪೇಟೆಯ ಸಭೆಯೊಂದರಲ್ಲಿ ಶ್ರೀರಾಮನ ಕಲ್ಯಾಣ ಗುಣಗಳನ್ನು ವಿಚಾರವಾದಿ ರಾಮಾಯಣದಲ್ಲಿ ದಾಖಲಾಗಿರುವ ಅಂಶಗಳಂತೆ ಕೆ.ಎಸ್‌.ಭಗವಾನ್‌ ಅವರು ಪ್ರಸ್ತಾಪಿಸಿದ್ದಕ್ಕೆ, ವಾಲ್ಮೀಕಿ ರಾಮಾಯಣದ ಕಥಾ ನಾಯಕ ಶ್ರೀರಾಮನಿಗೆ ಅಪಮಾನವಾಯಿತೆಂದು ಭಾವಿಸುವುದೇ ಒಂದು ವಿಚಿತ್ರದ ಸಂಗತಿಯಾಗಿದೆ ಎಂದರು.

ವಿಚಾರವಾದಿ ಕೆ.ಎಸ್‌.ಭಗವಾನ್‌ ಅವರು ಪ್ರಸ್ತಾಪಿಸಿರುವ ಅಂಶಗಳೆಲ್ಲವೂ “ವಾಲ್ಮೀಕಿ ಬರೆದ ರಾಮಾಯಣ ಗ್ರಂಥ”ದ ಉತ್ತರ, ಕಾಂಡದ, ಸರ್ಗ 42 ಶ್ಲೋಕ 18-19ರಂತೆ ಸೀತಾಮಾದಾಯ ಹಸ್ತನ ಮಧು ಮೈರೇಯಕಂ ಶುಚಿ, ಪಾಯಯಾಮಾಸಕಾಕು: ಶಚೀಮಿವ ಪುರಂದರಃ ಮಾಂಸಾನಿ ಚ ಸುಮೃಷ್ಟಾನಿ ಫಲಾನಿ ವಿವಿಧಾನಿ ಚ. ಅಂದರೆ “ಶುಚಿಯಾದ ಮೈರೇಯಕ (ಸರಾಯಿಯಂತ ಪೇಯ) ವನ್ನು ದೇವೇಂದ್ರನು ತನ್ನ ಹೆಂಡತಿ ಶಚಿಗೆ ಕುಡಿಸಿದಂತೆ, ರಾಮ ತನ್ನ ಕೈಯಿಂದ ಸೀತೆಗೆ ಕುಡಿಸಿದನು. ಅವರ ಊಟಕ್ಕೆ ಸೇವಕರು ಒಳ್ಳೆಯ ಮಾಂಸವನ್ನು, ಬಗೆ ಬಗೆಯ ಹಣ್ಣುಗಳನ್ನು ತಂದರು” ಎಂಬುದಾಗಿ ಪ್ರಸ್ತಾಪಿಸಿದ್ದಾರೆ. ವಾಲ್ಮೀಕಿ ಬರೆದದ್ದನ್ನು ಹೇಳಿದ್ದಾರೆ. ಇದು ಹೇಗೆ ಅಪಮಾನ, ಅವಮಾನ. ಈ ಬಗ್ಗೆ ಪೋಲೀಸ್ ಇಲಾಖೆ ಸಮರ್ಪಕ ತನಿಖೆ ಮಾಡಲಿ, ತಪ್ಪತಸ್ಥರು ಯಾರೆಂದು ಹೇಳಲಿ, ಆದರೆ ಬಾಬಾ ಸಾಹೇಬ್‌ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಭಾರತ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪೋಲೀಸರಾಗಲಿ, ಸರ್ಕಾರವಾಗಲಿ ಇನ್ನಾವುದೇ ಸಂಘಟನೆಯವರು ದಮನ ಮಾಡಲು ಸಾಧ್ಯವಿಲ್ಲ ಎಂದರು.

ವಾಲ್ಮೀಕಿ ರಾಮಾಯಣ ಒಂದು ಗ್ರಂಥ ಇದರ ಮೇಲೆ ಹಲವು ವಿಚಾರ ಚರ್ಚೆಯಾಗುತ್ತವೆ. ಕಥೆಯಲ್ಲಿಲ್ಲದ ವಿಚಾರವನ್ನೇನು ವಿಚಾರವಾದಿ ಕೆ.ಎಸ್.ಭಗವಾನ್ ರವರು ಹೇಳಿಲ್ಲ. ಭಗವಾನ್ ರವರಿಗೆ ವಿನಾಕಾರಣ ಕಿರುಕುಳ ಕೊಡುತ್ತಿರುವವರ ಮೇಲೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

 ಜನ ಜಾಗೃತಿ ಸಮಾವೇಶ 

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಡ್ಯನಗರದ ಗಾಂಧಿಭವನದಲ್ಲಿ ಫೆ.1ರಂದು ಬೆಳಿಗ್ಗೆ 11 ಗಂಟೆಗೆ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಸಮಾರಂಭ ಉದ್ಘಾಟಿಸುವರು. ಆರಕ್ಷಕ ಉಪ ಅಧೀಕ್ಷಕ ಶಿವಮೂರ್ತಿ ಪುಷ್ಪಾರ್ಚನೆ ಮಾಡುವರು. ದಸಂಸ ತಾಲ್ಲೂಕು ಅಧ್ಯಕ್ಷ ಮಹದೇವ ಕೊತ್ತತ್ತಿ ಅಧ್ಯಕ್ಷತೆ ವಹಿಸುವರು. ವಿಚಾರವಾದಿ ಡಾ.ಕೃಷ್ಣಮೂರ್ತಿ ಚಮರಂ ಮುಖ್ಯ ಭಾಷಣ ಮಾಡುವರು. ದಸಂಸ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಪ್ರಾಸ್ತಾವಿಕ ನುಡಿ ನುಡಿಯುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ದಸಂಸ ಜಿಲ್ಲಾ ಉಪಾಧ್ಯಕ್ಷ ಬಾಲರಾಜು, ದಸಂಸ ತಾಲ್ಲೂಕಿ ಮಹಿಳಾ ಅಧ್ಯಕ್ಷೆ ಸುಕನ್ಯ ದುದ್ದ ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಶ್ರೀನಿವಾಸ್ ಕೆ ಎಂ, ಆನಂದ್, ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!