Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಯೆಟ್ನಾಂ ಪ್ರವಾಸ : ಕಾರಸವಾಡಿ ಮಹದೇವುಗೆ ಅಭಿನಂದನೆ

ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ಪ್ರಭ ಸಮೂಹ ಸಂಸ್ಥೆಯು ವಿಯಟ್ನಾಂನಲ್ಲಿ ಇಂದಿನಿಂದ 16ರವರೆಗೆ ನಡೆಯಲಿರುವ “ಭಾರತ – ವಿಯೆಟ್ನಾಂ ಸ್ನೇಹ ಸಮ್ಮಿಲನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳಲಿರುವ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಕಾರಸವಾಡಿ ಮಹದೇವ್ ಅವರನ್ನು ಹಲವು ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಲಾಯಿತು. ಕಲಾವಿದರು ಹಾಗೂ ಯುವಜನ ಬಂಧುಗಳ ಪರವಾಗಿ ಅಭಿನಂದಿಸಿ ಶುಭ ಹಾರೈಕೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೇಗೌಡ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಸುರೇಶ್, ಮಂಗಲ ಲಂಕೇಶ್, ಪತ್ರಕರ್ತ ದ.ಕೊ.ಹಳ್ಳಿ ಚಂದ್ರಶೇಖರ್, ಯುವ ಮುಂದಾಳುಗಳಾದ ಜಿ.ಎನ್ ಕೆಂಪರಾಜು, ಪಣ್ಣೇದೊಡ್ಡಿ ಧನಂಜಯ, ಬೆಳಕು ವೆಲ್ನೆಸ್ ಸೆಂಟರ್ ನ ಮಾಲೀಕರಾದ ಅರುಣ ಕೆಂಪರಾಜು, ಗುತ್ತಿಗೆದಾರರಾದ ಮಹೇಶ್, ಹರಿಣಿ ಮಹದೇವ್, ದಡಮಳ್ಳಿ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ