ವಿಜಯ್ ಸೇತುಪತಿ ಮತ್ತು ಮಾದವನ್ ಕೂಡಿ ನಟಿಸಿದ್ದ ತಮಿಳಿನ ಸೂಪರ್ ಹಿಟ್ ಸಿನಿಮಾ ‘ವಿಕ್ರಮ್ ವೇದ’ ಇದೀಗ ಹಿಂದಿಯಲ್ಲಿ ರೀಮೇಕ್ ಆಗಿ ಸದ್ದುಮಾಡುತ್ತಿದೆ.
ಮೂಲ ಸಿನಿಮಾದ ನಿರ್ದೇಶಕರಾದ ಪುಷ್ಕರ್ ಹಾಗು ಗಾಯತ್ರಿ ಹಿಂದಿಯಲ್ಲೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು,ತಮಿಳು ಭಾಷೆಗಿಂತ ಹೆಚ್ಚುಗಳಿಕೆ ಮಾಡಿ ಮುನ್ನುಗ್ಗುವ ಎಲ್ಲಾ ಮುನ್ಸೂಚನೆಯನ್ನು ಈಗಾಗಲೇ ರಿಲೀಸ್ ಮಾಡಿರುವ ಮೂರು ನಿಮಿಷದ ಟ್ರೇಲರ್ ಹೇಳುತ್ತಿದೆ.
ಮೈನವಿರೇಳಿಸುವ ಆಕ್ಷನ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುವ ಕಥಾವಸ್ತುವನ್ನೊಳಗೊಂಡ ‘ವಿಕ್ರಮ್ ವೇದ’ ಸಿನಿಮಾದಲ್ಲಿ ವಿಜಯ್ ಸೇತುಪತಿ ನಿಭಾಯಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಹೃತಿಕ್ ರೋಷನ್ ನಿಭಾಯಿಸುತ್ತಿದ್ದು ಮಾದವನ್ ಜಾಗದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ.ಈ ಇಬ್ಬರ ಜೋಡಿ ಬಾಲಿವುಡ್ ಅಂಗಳದಲ್ಲಿ ಸುನಾಮಿ ಎಬ್ಬಿಸುಲು ಸಜ್ಜಾಗಿ ನಿಂತಿದೆ.
175 ಕೋಟಿ ಬಜೆಟ್ನಲ್ಲಿ ತಯಾರಾಗಿರುವ ‘ವಿಕ್ರಮ್ ವೇದ’ ಸಿನಿಮಾವು ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಿಗೆ ಬರುವ ಬೆನ್ನಲ್ಲೇ 100ಕ್ಕೂ ಹೆಚ್ಚು ದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಈ ಹಿಂದೆ ಬಾಲಿವುಡ್ ಸಿನಿಮಾಗಳು ರಿಲೀಸ್ ಆಗಿರದ ದೇಶಗಳಲ್ಲೂ ಈ ಸಿನಿಮಾ ತೆರೆ ಕಾಣಲಿದ್ದು, ದಕ್ಷಿಣ ಸಿನಿಮಾರಂಗ ಬಾಲಿವುಡ್ ಸಿನಿ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಹೊತ್ತಲ್ಲಿ ಸಾಲು ಸಾಲು ಸೋಲುಗಳಿಂದ ಬಸವಳಿದಿರುವ ಬಾಲಿವುಡ್ ಸಿನಿರಂಗಕ್ಕೆ ವಿಕ್ರಮ್ ವೇದ ರಿಲೀಫ್ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.




