Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೃಷಿ ನೂತನ ತಾಂತ್ರಿಕತೆಗಳ ವರ್ಗಾವಣೆ 2022- 23 : ಗ್ರಾಮ ಕಲಿಕಾ ಕೇಂದ್ರ ಉದ್ಘಾಟನೆ

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಲಯ ಕೃಷಿ ಸಂಶೋಧನೆ ಕೇಂದ್ರ ವಿ. ಸಿ. ಫಾರಂ, ಸಹ ವಿಸ್ತರಣಾ ನಿರ್ದೇಶಕರ ಕಚೇರಿ ವಿ. ಸಿ. ಫಾರಂ ಮಂಡ್ಯ, ಪರಿವರ್ತನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಮಂಡ್ಯ, ಚಿಕ್ಕಗಂಗವಾಡಿ ಗ್ರಾಮಸ್ಥರು, ರೈತರ ಒಕ್ಕೂಟ ಸಹಕಾರದಲ್ಲಿ ”ಕೃಷಿ ನೂತನ ತಾಂತ್ರಿಕತೆಗಳ ವರ್ಗಾವಣೆ 2022- 23, ಗ್ರಾಮ ಕಲಿಕಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಚಿಕ್ಕಗಂಗವಾಡಿ ಗ್ರಾಮ ದುದ್ದ ಹೋಬಳಿ
ಮಂಡ್ಯ ತಾಲ್ಲೂಕಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಅಶೋಕ್ ರವರು ಜಂಟಿ ಕೃಷಿ ನಿರ್ದೇಶಕರು ಮಂಡ್ಯ ಇವರು ನೆರವೇರಿಸಿದರು. ಡಾ. ಅಶೋಕ್ ಮಾತನಾಡುತ್ತಾ ವಿಜ್ಞಾನಿಗಳು ಮತ್ತು ಸರ್ಕಾರಿ ನೌಕರಗಳು ತಮ್ಮ ಗ್ರಾಮಕ್ಕೆ ತಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ನೆರವಿಗೆ ನಿಂತಿರುವುದು ಇದು ತುಂಬಾ ಪ್ರಸಂಶನೀಯವಾದ ಕೆಲಸ. ಇಂಥ ಕೆಲಸವನ್ನು ವಿ. ಸಿ. ಫಾರಂ ನವರು ಮಾಡಿರೋದು ತುಂಬಾ ಒಳ್ಳೆಯದು ಜೊತೆಗೆ ನಮ್ಮಿಂದ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ನಿಮಗೆ ನಾವು ಕೊಡಲು ಸಿದ್ಧರಿದ್ದೇವೆ.

ಇಲ್ಲಿನ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರಗಳನ್ನ ಮುಂದಿನ ದಿನಗಳಲ್ಲಿ ರೈತರ ಗುಂಪು ಚರ್ಚೆಗಳನ್ನು ಮಾಡಿ, ಪ್ರತ್ಯೇಕವಾಗಿ ಆಯಾ ಬೆಳೆಗೆ ಸಂಬಂಧಪಟ್ಟ ರೈತರ ಗುಂಪುಗಳನ್ನು ಒಟ್ಟುಗೂಡಿಸಿ ಗುಂಪಿನಲ್ಲಿ ಚರ್ಚೆ ಮಾಡಿ, ಅದಕ್ಕೆ ಪೂರಕವಾದಂತ ಪರಿಹಾರಗಳನ್ನು ಕಂಡು ಹಿಡಿಯುವ ಕೆಲಸವನ್ನು ಮುಂದಿನ ದಿನಗಳಲ್ಲಿ ನಾವು ಮಾಡಲು ಬದ್ಧರಾಗಿರುತ್ತೇವೆ ಎಂದು ರೈತರಿಗೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ. ಶಿವಕುಮಾರ್, ವಲಯ ಕೃಷಿ ಸಂಶೋಧನಾ ಕೇಂದ್ರ ವಿ. ಸಿ. ಮಂಡ್ಯ ಫಾರಂ, ಶ್ರೀಮತಿ ಪೂರ್ಣಿಮಾ ಸಹ ನಿರ್ದೇಶಕರು ಮಣ್ಣು ಪರೀಕ್ಷಾ ವಿಭಾಗ, ಡಾ. ಡಿ ರಘುಪತಿ ಸಹ ವಿಸ್ತರಣಾ ನಿರ್ದೇಶಕರು ವಿ. ಸಿ. ಫಾರಂ ಮಂಡ್ಯ, ಟಿ. ಡಿ. ನಾಗರಾಜು ಕಾರ್ಯದರ್ಶಿ ಪರಿವರ್ತನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಮಂಡ್ಯ, ಬಸವರಾಜು ಪ್ರಗತಿಪರ ರೈತ, ಸ್ವಾಮಿ, ಮೋಹನ್ ಧನಂಜಯ, ಕುಳ್ಳೇಗೌಡ, ಪುಟ್ಟಸ್ವಾಮಿ, ವಿಜ್ಞಾನಿಗಳು ಅಧಿಕಾರಿ ವರ್ಗದವರು ಹಾಗೂ ಗ್ರಾಮದ ಯಜಮಾನರಗಳು ಹಾಜರಿದ್ದರು.

ಕಾರ್ಯಕ್ರಮಕ್ಕೆ ಮೊದಲು ಅಧಿಕಾರಿಗಳು,ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಸಮಸ್ಯೆಗಳಿಗೆ ಸಲಹೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ