Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಾಗತೀಕರಣದ ಹೊಡೆತಕ್ಕೆ ತತ್ತರಿಸಿದ ಭಾರತದ ಹಳ್ಳಿಗಳು…..

✍️ ನಾರಾಯಣ್ ಬೆಳಗುರ್ಕಿ
ಹೋರಾಟಗಾರರು ಸಿಂಧನೂರು

“ಭಾರತ ಹಳ್ಳಿಗಳ ದೇಶ ಹಳ್ಳಿಗಳ ಸುಧಾರಣೆ ಆಗದೇ ದೇಶದ ಸುಧಾರಣೆ ಸಾಧ್ಯವಿಲ್ಲ,” ಎಂಬುದು ಮಹಾತ್ಮ ಗಾಂಧಿಯವರ ನಿಲುವು ಗ್ರಾಮ ಅಭಿವೃದ್ಧಿ, ಸ್ವಾವಲಂಬನೆ, ಸ್ವಯಂ ಉದ್ಯೋಗ, ದೇಶೀಯ ಕೈಗಾರಿಕೆಗಳ ಸ್ಥಾಪನೆ, ಸರ್ವೋದಯ ಮುಂತಾದ ವಿಚಾರಗಳನ್ನು ಗಾಂಧೀಜಿಯವರು ಹಳ್ಳಿಗಳ ಅಭಿವೃದ್ಧಿ ವಿಷಯದಲ್ಲಿ ಹೊಂದಿದ್ದರು. ಆದಾಗ್ಯೂ ಭಾರತದ ಹಳ್ಳಿಗಳ ಮೇಲೆ ಅದರ ರಚನೆ ಬುನಾದಿ ಮೇಲೆ ನಿರಂತರ ದಾಳಿ ನಡೆಯುತ್ತಲೇ ಬಂದಿದೆ.

ವಸಾಹತುಶಾಹಿಯ ದಾಳಿಗಳು ಭಾರತದ ಹಳ್ಳಿಗಳ ಮೇಲೆ ಅದರ ಸ್ವಾವಲಂಬಿ ಜೀವನ ಪದ್ಧತಿಯ ಮೇಲೆ ಮಾರಣಾಂತಿಕ ದಾಳಿಗಳಾಗಿದ್ದವು. ಉತ್ಪಾದನೆ ಕುಸಿತ, ಕೃಷಿ ಹಿಂಬಿಳಿಕೆ, ಗೃಹ ಕೈಗಾರಿಕೆ ನಾಶ, ವಿದೇಶಿ ವಸ್ತುಗಳ ಮಾರಾಟ, ದೇಶೀಯ ಕೈಗಾರಿಕೆಗಳ ಮತ್ತು ದೇಶೀಯ ಮಾರುಕಟ್ಟೆ ನಾಶ ಮುಂತಾದ ವಸಾಹತುಶಾಹಿ ಆಡಳಿತದ ಪರಿಣಾಮಗಳು ಹಳ್ಳಿಗಳನ್ನು ನೂರಾರು ವರ್ಷಗಳ ಕಾಲ ನಲುಗುವಂತೆ ಮಾಡಿತು.

1857 ರ ಭಾರತ ಸ್ವಾತಂತ್ರ ಸಂಗ್ರಾಮ ಗ್ರಂಥ ಬರೆದ ಕಾರ್ಲ್ ಮಾರ್ಕ್ಸ್ ಅವರು ಭಾರತ ಹಳ್ಳಿಗಳ ಜೀವನ ಪದ್ಧತಿಯ ಕುರಿತು ಹೃದಯಸ್ಪರ್ಶಿ ಮಾತುಗಳನ್ನು ಹಂಚಿಕೊಂಡಿದ್ದಾರೆ ಅವರು ಇಲ್ಲಿನ ಹಳ್ಳಿಗಳನ್ನು ಸ್ವಯಂ ಪರಿಪೂರ್ಣ, ಸಂಪೂರ್ಣ ಸ್ವಾವಲಂಬಿ ಹಳ್ಳಿಗಳು ಎಂದು ವಿಶ್ಲೇಷಿಸಿದ್ದಾರೆ . ಪ್ರಪಂಚದ ಯಾವ ಮಾರುಕಟ್ಟೆಯ ಅವಶ್ಯಕತೆ ಬೀಳದೆ ದೂರದ ಊರಿನ ಮಾರುಕಟ್ಟೆ ಮತ್ತು ವಸ್ತುಗಳ ಮೇಲೆ ಸಹ ಅವಲಂಬಿತ ಆಗದೇ ಇರುವ ಪರಿಪೂರ್ಣ ಸ್ವಯಂ ಸ್ವಾವಲಂಬಿ ಆದ ಉತ್ಪಾದನೆ, ಸ್ವಾವಲಂಬಿ ಹಂಚಿಕೆ, ಪೂರ್ತಿ ಗುಣಮಟ್ಟ ಬದುಕು ಭಾರತದ ಹಳ್ಳಿಗಳದ್ದು ಎಂದೂ ಅವರು ವಿವರಿಸಿದ್ದಾರೆ. ಈ ವಿಷಯ ನಿಜಕ್ಕೂ ನಮ್ಮ ಗ್ರಾಮೀಣ ಜೀವನದ ಕುರಿತು ಹೆಮ್ಮೆ ಮೂಡುತ್ತದೆ. ದೇಶೀಯ ಲೇಖಕರು ಅಧ್ಯಾತ್ಮಿಕ ಚಿಂತಕರೂ ಸಹ ಇದೇ ಚಿಂತನೆಯನ್ನು ಹೊಂದಿದ್ದರು ಎನ್ನಲಾಗಿದೆ.

ಮಾರ್ಕ್ಸ್ ಅವರ ದೃಷ್ಟಿಯಲ್ಲಿ ಭಾರತ ಪ್ರಕೃತಿ ಸೌಂದರ್ಯ, ಬೌದ್ಧಿಕ ಶಕ್ತಿಯ ಕುರಿತು ತುಂಬಾ ಕಲಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಭೌಗೋಳಿಕವಾಗಿ ಭಾರತ ಯುರೋಪಿನ ಮಾದರಿಯಲ್ಲೇ ಇದೆಯಂತೆ ಉತ್ತರದ ಹಿಮಾಲಯವೇ ಆಲ್ಪ್ಸ್ ಪರ್ವತ ಶ್ರೇಣಿ ಗಳಂತೆ. ಫಲಭರಿತ ಗಂಗಾ ನದಿಯ ಬಯಲು ಲೊಂಬಾರ್ಡಿ ಬಯಲಂತೆ. ರಾಜಸ್ಥಾನದ ಮರುಭೂಮಿ ಯುರೋಪಿನ ಮರುಭೂಮಿಯಂತೆ.

ಬಂಗಾಳ ಬೌದ್ಧಿಕವಾಗಿ ಸಿರಿವಂತ ನಾಡಂತೆ. ಬಂಗಾಳದ ಬಾಬಾಗಳು ತುಂಬಾ ಬುದ್ದಿಶಾಲಿಗಳು, ವೈಚಾರಿಕ ದರ್ಶನ , ಚಿಕಿತ್ಸಕ ದೃಷ್ಟಿಯಿಂದ ನೋಡುವ ಗುಣ ಉಳ್ಳವರು ಎಂಬುದನ್ನು ಮಾರ್ಕ್ಸ್ ಹೇಳುತ್ತಾರೆ.
ಈ ಹೋಲಿಕೆ ಬೌಗೊಳಿಕವಾಗಿ ಸರಿಯಾಗುತ್ತದೆ. ಆದರೆ ಸಾಮಾಜಿಕ ಸಂದರ್ಭದಲ್ಲಿ ಮಾತ್ರಾ ಸಂಪೂರ್ಣ ಯುರೋಪಿನ ಜನ ಜೀವನಕ್ಕೆ ವಿರುಧ್ದ ಇದೆ ಎಂಬುದನ್ನು ಯಾರೂ ಅಲ್ಲಗಳೆುವಂತಿಲ್ಲ. ಆರ್ಥಿಕವಾಗಿ ಹಳ್ಳಿಗಳು ಬ್ರಿಟಿಷರು ಭಾರತಕ್ಕೆ ಬರುವ ತನಕ ಸ್ವಯಂ ಪರಿಪೂರ್ಣ ಆಗಿದ್ದವು ಎಂಬ ವಿಶ್ಲೇಷಣೆ ಸರಿಯಾದುದು.

ಬ್ರಿಟಿಷರು ಭಾರತವನ್ನ ಅದರ ಆರ್ಥಿಕತೆಯನ್ನು ನಾಶ ಮಾಡಿದರು. ಹಳ್ಳಿಗಳ ಆರ್ಥಿಕತೆ ನಾಶವಾಯಿತು.
ಆದರೆ ಸಾಮಾಜಿಕ ಸ್ಥರ ಮಾತ್ರ ಅಲುಗಾಡಿಲ್ಲ ಮತ್ತು ಆ ಪ್ರಯತ್ನದಲ್ಲಿ ಬ್ರಿಟಿಷರೇ ಸೋತು ಹೋದರು ಎನ್ನಬಹುದು. ವಸಾಹತು ದಾಳಿ ಗ್ರಾಮಿಣ ಭಾರತದ ಅಸ್ತಿತ್ವವನ್ನೇ ಅಲುಗಾಡುವಂತೆ ಮಾಡಿದ್ದೂ ಅಕ್ಷರಶಃ ಸತ್ಯ.

ಕಳೆದ ಮೂವತ್ತು ವರ್ಷಗಳ ಜಾಗತೀಕರಣ ಸಂದರ್ಭದಲ್ಲಿ ಹಳ್ಳಿಗಳು ಸರ್ವ ರೀತಿಯಲ್ಲೂ ನಾಶ ಆಗುತ್ತಿರುವುದು ಕಂಡು ಬರುತ್ತದೆ. ನಮ್ಮ ಗ್ರಾಮೀಣ ಜನರ ಉತ್ಪಾದನೆ ಜೀವನಾಧಾರ ಆಗಿರುವ ವ್ಯವಸಾಯವೇ ತುಂಬಾ ಬಿಕ್ಕಟ್ಟಿನಲ್ಲಿ ಇದೆ. ಗೃಹ ಕೈಗಾರಿಕೆಗಳು ಉಳಿದಿಲ್ಲ ಎಂದು ಸಂಪೂರ್ಣವಾಗಿ ಘೋಷಿಸಬಹುದು. ಜಾಗತಿಕ ಮಾರುಕಟ್ಟೆ ಇಂದು ಹಳ್ಳಿಯಲ್ಲಿ ನೆಲೆಯೂರಿದೆ. ಹಳ್ಳಿಯ ಉತ್ಪಾದನೆಯನ್ನು ಹಳ್ಳಿಗಳಲ್ಲೇ ಬಳಕೆ ಆಗದೇ ಯಾವುದೋ ಒಬ್ಬ ಕಂಪನಿಯ ಮಾಲೀಕನಿಗೆ ತಲುಪಿ ಅವನಿಂದಲೇ ಹೆಚ್ಚಿನ ಬೆಲೆ ತೆತ್ತು ಕೊಳ್ಳಬೇಕಾಗುತ್ತದೇ. ಸ್ವಯಂ ಪರಿಪೂರ್ಣ ಎಂಬುದು ಸ್ವಾವಲಂಬಿ ಎಂಬುದು ನೆನಪಿನಲ್ಲಿ ಸಹ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಈ ಬಂಡವಾಶಾಹಿ ನಿರ್ಮಿತ ಮಾರುಕಟ್ಟೆಯಿಂದನೆ ಬರಬೇಕು ಎಂಬುದು ನಿಯಮವಾಗಿದೆ.
ಕನಿಷ್ಠ ತರಕಾರಿ, ಹಾಲು, ಉಪ್ಪು ಸಹ ಬಂಡವಾಳಶಾಹಿಯಿಂದನೆ ಖರೀದಿಸಬೇಕು ಎಂಬುದನ್ನು ಗ್ರಾಮಿಣ ಜನರ ಅಂತರಾತ್ಮಕ್ಕೆ ಒಪ್ಪಿಸಲಾಗಿದೆ. ಇದರಿಂದ ದುಡಿಮೆಯ ಎಲ್ಲಾ ಭಾಗವನ್ನು ನೇರವಾಗಿ ಬಂಡವಾಳಿಗನ ಕೈಸೇರುತ್ತದೆ. ಮತ್ತು ಆ ರೀತಿಯ ನಿರಂತರ ಪ್ರಯತ್ನದಿಂದಾಗಿ ಜನರಿಗೆ ಬೇರೆ ಆಯ್ಕೆಯೂ ಸಹ ಇಲ್ಲದಂತೆ ಮಾಡಿ ಪ್ರತಿಯೊಂದಕ್ಕೂ ಅವಲಂಬತವಾಗಿರುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ .

ಕೃಷಿಯ ಬಿಕ್ಕಟ್ಟು

ಮೊದಲನೆಯದಾಗಿ ಉಳುವ ರೈತನಿಗೆ ಭೂಮಿ ಇಲ್ಲದಿರುವುದು. ಕೃಷಿ ಕಾನೂನು ಉಳುವವನೇ ಹೊಲದೊಡೆಯ ಎಂಬುದು ಇದ್ದಾಗ್ಯೂ ಭೂಮಾಲೀಕರಿಂದ ಭೂಮಿಯನ್ನು ಭೂ ಹಿನರಿಗೆ ಹಂಚಿಕೆ ಮಾಡಿಲ್ಲ. 60 – 80 ದಶಕದಲ್ಲಿ ಪ್ರಯತ್ನಗಳು ನಡೆದವು ಆದರೆ ಸಾಕಾರವಾಗಲಿಲ್ಲ. ಸರಕಾರಿ ಭೂಮಿಯ ಹಂಚಿಕೆ ಬಾಕಿ ಇರುವುದು. ಇದರಿಂದ ಉತ್ಪಾದನೆ ಮಾಡುವನು ಕೂಲಿ ಕಾರ್ಮಿಕನಾಗಿ ಉಳಿದಿದ್ದಾನೆ. ಭೂಮಿಯ ಹಂಚಿಕೆ ಅಸಮರ್ಪಕ ಆಗಿರುವ ಬೆನ್ನಲ್ಲೇ ಲಕ್ಷಾಂತರ ಎಕರೆ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳ ತೆಕ್ಕೆಗೆ ನೀಡುತ್ತಿರುವುದು. ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಉತ್ಪಾದನೆ ವಿಷಯದಲ್ಲಿ ಸರಕಾರ ತನ್ನ ಹಸ್ತವನ್ನು ಹಿಂತೆಗೆದು ಕೊಂಡಿದೆ . ರಿಯಾಯಿತಿಗಳು, ಸಬ್ಸಿಡಿ, ಸಾಲಮನ್ನಾ ಘೋಷಣೆ, ಬರಗಾಲ ನಿರ್ವಹಣೆ, ನೆರೆ ವಿಪತ್ತು ನಿರ್ವಹಣೆ ಮುಂತಾಗಿ ಕ್ರಮೇಣ ಅದು ಸಂಬಂಧವಿಲ್ಲ ಎಂಬಂತೆ ದೂರ ಉಳಿದಿದೆ.

ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಜಾಗತಿಕವಾಗಿ ಇನ್ನೂ ಹಿಂದುಳಿದಿದೆ. ಗಾಯದ ಮೇಲೆ ಬರೆ ಎಳೆದಂತೇ ಇವಗಳಿಗೆ ಮಾರಕ ಎಂಬಂತೆ ಭೂ ಸ್ವಾಧೀನ ಮಸೂದೆ ಮಂಡನೆ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಭೂ ಕಬಳಿಕೆ ಹುನ್ನಾರ ನಡೆದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರ್ಧಾರ ಮಾಡುವ ಸಲುವಾಗಿ ಕುರಿತು ಅಂತಹ ಕಂಪನಿಗಳೇ ಈ ರೀತಿಯ ಹುನ್ನಾರ ಮಾಡುತ್ತವೆ. ಸಂಪೂರ್ಣ ಕೃಷಿ ಮಾರುಕಟ್ಟೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ಏಕಸ್ವಾಮ್ಯ ಸಾಧಿಸಲು ಸರ್ವ ರೀತಿಯಲ್ಲೂ ಸಜ್ಜಾಗಿವೆ.
APMC ತಿದ್ದುಪಡಿ ಕಾಯ್ದೆ ಸಹ ಬೆಲೆ ನಿರ್ಧಾರಣ ಸ್ವಾತಂತ್ರವನ್ನು ಸರಕಾರದಿಂದ ಕಿತ್ತುಕೊಂಡು ಕಾರ್ಪೋರೇಟ್ ಗಳ ಕೈಸೇರುವಂತೆ ಮಾಡುವ ಎಲ್ಲಾ ಪ್ರಯತ್ನ ಆಗಿದೆ.

ರೈತರ ಸಾಲ ಮತ್ತು ಆತ್ಮಹತ್ಯೆ ನಿರಂತರ ಮುಂದುವರೆಯುತ್ತಿದೆ. ಸಂಪೂರ್ಣ ನೀರಾವರಿ ಕೊರತೆ ಮತ್ತು ಅಸಮರ್ಪಕ ನಿರ್ವಹಣೆ ಹಾಗೂ ಬಳಕೆ. ನೀರಾವರಿ ವಿಚಾರದಲ್ಲಿ ರಾಜಕೀಯ. ಆತಂತ್ರದಲ್ಲಿ ರೈತರು ಹೀಗೆ
ಅನೇಕ ಅಸಲಿ ವಿಷಯಗಳಲ್ಲಿ ಹಳ್ಳಿಗಳು ಅತಂತ್ರ ಆಗುತ್ತಿವೆ. ಮುಖ್ಯವಾಗಿ ಆರ್ಥಿಕ ಮಟ್ಟ ಕಡಿಮೆ ಆದರೆ ಗ್ರಾಮಿಣ ಭಾರತ ಜನರು ನಗರಗಳ ಕಡೆ ಮುಖ ಮಾಡುವುದು ಸಾಮಾನ್ಯ.

ಸಾಂಸ್ಕೃತಿಕ ಬಿಕ್ಕಟ್ಟು

ಸಾಂಸ್ಕೃತಿಕವಾಗಿ ಊಟ ಉಪಚಾರ ಕೊಡು ಕೊಳ್ಳುವ ವಿಚಾರ, ಸಾಹಿತ್ಯ ಜಾನಪದ, ಕಲಾ ಕ್ಷೇತ್ರ ಎಲ್ಲವೂ ತನ್ನ ಸೊಗಡನ್ನು ಕಳೆದುಕೊಂಡು ಅಧ್ಯಾತ್ಮ ತತ್ವಜ್ಞಾನ ಸಹ ಅಣುಕು ಆಗತ್ತಿದೆ. ಕುಡಿತ ಮೋಜು ಮಸ್ತಿ ಜೂಜು ಚಟಗಳಿಂದ ಗ್ರಾಮಿಣ ಭಾರತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿ ಇದೆ.

ಈ ಕೊಳ್ಳುಬಾಕ ಸಂಸ್ಕೃತಿ ಜಾಗತೀಕರಣ ಬಂಡವಾಳಿಗರ ಮಾರುಕಟ್ಟೆ ಲಗ್ಗೆ ಇಟ್ಟಿದ್ದರಿಂದ ಬಂಡವಾಳಿಗರ ಜೇಬು ತುಂಬುತ್ತದೆ, ಗ್ರಾಮಿಣ ರೈತರು ಬಡ ಕಾರ್ಮಿಕರು ಸಾವಿನ ಕಡೆ ಮುಖ ಮಾಡಿದ್ದಾರೆ. ಅರಾಜಕ ಮನೋಭಾವ ಉಂಟಾಗಿ ಯುವ ಜನತೆ ನಾಶದ ಕಡೆಗೆ ಹೋಗುತ್ತಿರುವುದು ದುರಂತ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!