Friday, September 20, 2024

ಪ್ರಾಯೋಗಿಕ ಆವೃತ್ತಿ

ವಿನೇಶ್ ಫೋಗಟ್‌ ಅನರ್ಹತೆ ರದ್ದತಿಗಾಗಿ ಹರಸಾಹಸ: ಕೂದಲಿಗೂ ಬಿತ್ತು ಕತ್ತರಿ !

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರ ಅನರ್ಹತೆಯನ್ನು ರದ್ದುಗೊಳಿಸುವುದಕ್ಕಾಗಿ ಆಕೆಯ ತೂಕವನ್ನು 50 ಕೆ.ಜಿ ಒಳಗೆ ತರಲು ಹಲವಾರು ‘ಕಠಿಣ ಕ್ರಮ’ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲಿ, ಆಕೆಯ ಕೂದಲನ್ನು ಕತ್ತರಿಸುವುದು ಕೂಡ ಸೇರಿದೆ ಎಂದು ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯ ವೈದ್ಯಾಧಿಕಾರಿ ಡಾ. ದಿನ್‌ಶಾ ಪರ್ದಿವಾಲಾ ಹೇಳಿದ್ದಾರೆ.
 

50 ಕೆ.ಜಿ ತೂಕದ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಫೋಗಟ್‌ ಅವರು ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಪಂದ್ಯವಾಡಲು ಸಿದ್ದತೆ ನಡೆಸುತ್ತಿದ್ದರು. ಫೋಗಟ್‌ ಅವರ ತೂಕವನ್ನು ಬುಧವಾರ ಬೆಳಗ್ಗೆ ಪರಿಶೀಲನೆ ಮಾಡಲಾಗಿದೆ. ಅವರ ತೂಕವು 50 ಕೆ.ಜಿ.ಗಿಂತ 100 ಗ್ರಾಂ ಹೆಚ್ಚಾಗಿದೆ ಎಂದು ಹೇಳಲಾಗಿದ್ದು, ಅವರನ್ನು ಪಂದ್ಯದಿಂದ ಅನರ್ಹಗೊಳಿಸಲಾಗಿದೆ.

“ಮಂಗಳವಾರ ನಿರಂತರವಾಗಿ ಮೂರು ಪಂದ್ಯಗಳನ್ನು ಆಡಿದ್ದ ಫೋಗಟ್‌, ನಿರ್ಜಲೀಕರಣಕ್ಕೆ (ಡಿ-ಹೈಡ್ರೇಷನ್‌) ಒಳಗಾಗಿದ್ದರು. ಅದಕ್ಕಾಗಿ, ಅವರಿಗೆ ಸ್ವಲ್ಪ ನೀರು ಕೊಡಬೇಕಾಗಿತ್ತು. ಬಳಿಕ, ಆಕೆಯ ತೂಕ ಹೆಚ್ಚಾಗಿದ್ದು, ಅವರು ತೂಕ ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಅನುಸರಿಸಿದ್ದರು. ತೂಕ ಕಡಿಮೆ ಮಾಡಿಕೊಳ್ಳುವ ವಿಶ್ವಾಸ ಹೊಂದಿದ್ದರು. ಆದರೆ, ಅವರ ತೂಕದಲ್ಲಿ 50 ಕೆ.ಜಿ.ಗಿಂತ 100 ಗ್ರಾಂ ಹೆಚ್ಚಾಗಿರುವುದು ಕಂಡುಬಂದಿದೆ. ಆದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ” ಎಂದು ಪರ್ದಿವಾಲಾ ತಿಳಿಸಿದ್ದಾರೆ.

“ತೂಕ ಕಡಿಮೆ ಮಾಡುವಲ್ಲಿ ಆಹಾರ ಮತ್ತು ನೀರು ಸೇವನೆಯ ಲೆಕ್ಕಾಚಾರವೂ ಇರುತ್ತದೆ. ತೂಕ ಕಡಿತವು ದೌರ್ಬಲ್ಯ ಮತ್ತು ಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತದೆ. ಶಕ್ತಿಯ ಮರುಸ್ಥಾಪನೆಗಾಗಿ, ಸೀಮಿತ ನೀರು ಮತ್ತು ಹೆಚ್ಚಿನ ಶಕ್ತಿಯ ಆಹಾರವನ್ನು ತೂಕ ಹಾಕಿದ ಬಳಿಕ ನೀಡಲಾಗುತ್ತದೆ” ಎಂದು ಡಾ. ಪಾರ್ದಿವಾಲಾ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!