Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಶ್ವಕರ್ಮ ಪ್ರಪಂಚದ ಮೊದಲ ಇಂಜಿನಿಯರ್ : ರವಿಕುಮಾರ್

ದೇವರುಗಳಿಗೂ ಮನೆ ನಿರ್ಮಾಣ ಮಾಡಿದ ವಿಶ್ವಕರ್ಮ ಅವರನ್ನು ದೇಶದ ಮೊದಲ ಇಂಜಿನಿಯರ್ ಎನ್ನಬಹುದು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಹೇಳಿದರು.

ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಶ್ವಕರ್ಮದವರು ಇರದಿದ್ದರೆ ವಾಸವಿರಲು ಮನೆಗಳು ಇರುತ್ತಿರಲಿಲ್ಲ. ಇಂದು ಅಯೋಧ್ಯೆ , ಕನ್ಯಾಕುಮಾರಿ, ಕೇದಾರನಾಥ ಇವೆಲ್ಲಾ ದೇವಾಲಯಗಳಿಗೆ ಅಡಿಪಾಯ ಹಾಕಿದವರು ಹಾಗೂ ಜಗತ್ತಿನ ಮೊದಲ ದೇವಾಲಯವನ್ನು ನಿರ್ಮಿಸಿದವರು ವಿಶ್ವಕರ್ಮ ಎಂದರು.

ವಿಶ್ವಕರ್ಮದವರು ಇಲ್ಲವೆಂದರೆ ರೈತರಿಗೆ ಉಳಿಮೆ ಮಾಡಲು ನೇಗಿಲು ಇರುವುದಿಲ್ಲ ವಿಶ್ವಕರ್ಮ ರೈತ ಸ್ನೇಹಿ. ಮದುವೆ ಶುಭ ಸಂದರ್ಭಗಳಲ್ಲಿ ತಾಳಿ ಒಡವೆ ಮಾಡುವಂತಹ ಪೂಣ್ಯದ ಕೆಲಸವನ್ನು ವಿಶ್ವಕರ್ಮ ಸಮುದಾಯದವರು ಮಾಡಿಕೊಂಡು ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅವರ ಜೊತೆ ಇದೆ. ಮಂಡ್ಯ ನಗರದಲ್ಲಿ ವಿಶ್ವಕರ್ಮ ಭವನವಿಲ್ಲ‌. ಮಂಡ್ಯ ನಗರದ ಸುತ್ತಲಿನಲ್ಲಿ ಸರ್ಕಾರಿ ಜಾಗಗಳಿಗೆ ಕೊರತೆ ಇದೆ. ಮುಡಾದಿಂದ ಸೈಟ್ ಖರೀದಿ ಮಾಡಿದರೆ ಸರ್ಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಾಣ ಮಾಡಬಹುದಾಗಿದೆ. ಸೈಟ್ ಖರೀದಿಸಲು ನಾನು 5 ಲಕ್ಷ ರೂ ಹಣವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ ಉದಯ್ ಮಾತನಾಡಿ ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರು ಅನೇಕ ಕೊಡುಗೆಯನ್ನು ನೀಡಿದ್ದಾರೆ. ಆಧುನಿಕರಣದಲ್ಲಿ ಅನೇಕ ತಾಂತ್ರಿಕ ಮಾರ್ಪಾಡುಗಳು ಉಂಟಾಗಿವೆ ಆದರೆ ಈಗಲೂ ಕೌಶಲ್ಯಯುತವಾದ ಕಸುಬಿನೊಂದಿಗೆ ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಮದ್ದೂರಿನಲ್ಲಿ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ನೀಡುವ ಸಲುವಾಗಿ ಸರ್ವೆ ಕೆಲಸ ನಡೆಸಲಾಗುತ್ತಿದೆ ಶೀಘ್ರದಲ್ಲೇ ನಿವೇಶನ ಕೊಡಿಸಲಾಗುವುದು. ಒಂದು ರಸ್ತೆ ವೃತ್ತದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ಪ್ರತಿಮೆ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಮಾತನಾಡಿ ವಿಶ್ವಕರ್ಮ ಭವನ ನಿರ್ಮಾಣಕ್ಕೆ ಸೈಟ್ ಖರೀದಿಸಲು ಶಾಸಕರು ಸಹಾಕರ ನೀಡುವುದಾಗಿ ಭರವಸೆ ನೀಡಿದ್ದಾರೆ. ನೀವು ಸಹ ನಿಮ್ಮ ಸಮುದಾಯದವರ ಬಳಿ ಹಣ ಸಂಗ್ರಹಣೆ ಮಾಡಿದರೆ ಮುಡಾದಲ್ಲಿ ಸೈಟ್ ಖರೀದಿಸಲು ಕ್ರಮ ವಹಿಸಬಹುದು ಎಂದು ತಿಳಿಸಿದರು. ನಂತರ ವಿಶ್ವಕರ್ಮ ಸಮುದಾಯದಲ್ಲಿ ಸಾಧನೆ ಮಾಡಿದ ಹತ್ತು ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮಿಜೀ, ಯತಿರಾಜ ದಾಪರ್ ಗುರು ಪೀಠದ ಗೃಹಸ್ಥ ಪೀಠಾಧಿಪತಿ ಶ್ರೀ ಶ್ರೀನಿವಾಸ ನರಸಿಂಹಸ್ವಾಮಿ ಗುರುಜೀ. ನಗರಸಭೆ ಅಧ್ಯಕ್ಷ ನಾಗೇಶ್, ಚಲನಚಿತ್ರ ನಟ ಹಾಗೂ ನಿರ್ದೇಶಕ ಮದನ್ ಕುಮಾರ್, ಜಿಲ್ಲಾ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಸುದರ್ಶನ್, ನಗರಸಭೆ ಸದಸ್ಯರಾದ ಶ್ರೀಧರ್, ಶಿವಪ್ರಕಾಶ್, ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ಅಮ್ಜದ್ ಪಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ