ವಿಶ್ವಕರ್ಮ ಸಮುದಾಯದ ಕಾರ್ಯ,ಕುಶಲತೆ, ನೈಪುಣ್ಯತೆ ಹಾಗೂ ಕೌಶಲ್ಯದಿಂದ ಜಗತ್ತಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಬಣ್ಣಿಸಿದರು.
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶನಿವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮುದಾಯದ ಕುಶಲತೆಗೆ ಮನಸೋಲದ ದೇವತೆಗಳಿಲ್ಲ.ವಿಶ್ವಕರ್ಮದ ಕಸುಬನ್ನು ಮುಂದುವರೆಸಿರುವ ಕಮ್ಮಾರ, ಬಡಿಗ, ಪಂಚಕಾರ, ಶಿಲ್ಪಕಾರ ಮತ್ತು ಅಕ್ಕಸಾಲಿಗ ಜಗತ್ತಿಗೆ ನೀಡಿರುವ ಕೊಡುಗೆ ಅದ್ವಿತೀಯ ಎಂದರು.
ಹಿಂದುಗಳ ಸಂಪ್ರದಾಯದ ಪ್ರಕಾರ ಕಲಿಯುಗ,ದ್ವಾಪರಯುಗ, ಶ್ವೇತಯುಗ, ಪ್ರೇತಯುಗ ಈ ನಾಲ್ಕು ಯುಗಗಳಲ್ಲಿ ವಿಶ್ವಕರ್ಮರು ಆನೇಕ ನಗರಗಳನ್ನು ಸ್ವರ್ಗ ಇಂದ್ರ ಪ್ರಸ್ತ, ದ್ವಾರಕವನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷರಾದ ಹೆಚ್ .ಎಸ್. ಮಂಜುರವರು ಮಾತನಾಡಿ, ಬ್ರಹ್ಮಾಂಡ ಶ್ರೇಷ್ಠ ಇಂಜಿನಿಯರ್ ಎಂದು ಜನರಾಧನೆಗೆ ಪಾತ್ರರಾದವರು ಭಗವಾನ್ ವಿಶ್ವಕರ್ಮ ಅವರು,ಶಾಸ್ತ್ರ ಪುರಾಣಗಳಲ್ಲಿ ಅಗ್ರಗಣ್ಯ ಸ್ಥಾನವಿದೆ. ಶಾಸ್ತ್ರಗಳ ಪ್ರಕಾರ ಬ್ರಹ್ಮ ಸಂಪೂರ್ಣ ಸೃಷ್ಟಿಕರ್ತನಾದರೆ ಬ್ರಹ್ಮಾಂಡವನ್ನು ಅಲಂಕರಿಸಿದ್ದು ವಿಶ್ವಕರ್ಮ ಎನ್ನುತ್ತಾರೆ ಎಂದರು.
ಮಂಡ್ಯ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ ಯೋಗಾನರಸಿಂಹಚಾರ್ ರವರು ಮಾತನಾಡಿ,ವಿಶ್ವಕರ್ಮ ಸಮುದಾಯ ಕೌಶಲ್ಯಕ್ಕೆ ಒಂದು ವಿಶೇಷ ಕೊಡುಗೆಯನ್ನು ಕೊಟ್ಟಿರುವ ಸಮುದಾಯ. ಆಧುನಿಕ ಯುಗದಲ್ಲಿ ಯಂತ್ರಗಳ ಮೂಲಕ ಕೌಶಲ್ಯವನ್ನು ತರುತ್ತಿದ್ದೇವೆ ಎಂದರು.
ದ್ವಾರಕೆ, ನಳಂದ, ದೆಹಲಿಯ ಕುತುಬ್ ಮಿನಾರ್ ಕರ್ನಾಟಕದ ಐಹೊಳೆ ಹಂಪಿ ಬಾದಾಮಿ ಪಟ್ಟದಕಲ್ಲು ಇರುವ ಪ್ರವಾಸಿ ತಾಣಗಳಲ್ಲಿ ವಿಶ್ವಕರ್ಮರ ನೈಪುಣ್ಯತೆ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಶ್ರೀನಿವಾಸ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎನ್. ಉದಯ್ ಕುಮಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರ್, ನಗರ ಸಭೆಯ ಸದಸ್ಯರಾದ ಕುಮಾರ್, ಶ್ರೀನಿವಾಸ್, ಆನಂದ್, ಚಂದ್ರಕುಮಾರ್, ದೊರೆಸ್ವಾಮಿ, ಅರುಣ್ ಕುಮಾರ್,ಮುಖಾಂಡರಾದ ದೇವರಾಜ್ ಆಚಾರ್ಯ, ಶಾಮಣ್ಣ ಚಾರ್ಯ, ಎಂ ಎನ್ ಕುಮಾರ ಸ್ವಾಮಿ, ಶ್ರೀನಿವಾಸ್ ಮೂರ್ತಿ, ದೇವರಾಜ್, ಸತೀಶ್, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




