Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕನ್ನಡ ಅಕ್ಷರ ಉಲ್ಟಾ ಬರೆಯುವ ಎಲೆಮರೆಯ ಸಾಧಕ ರವಿ

ಈತನ ಕೈಗೆ ಬಾಳೆ ಎಲೆ,ತೆಂಗಿನ ಗರಿ, ಅರಳಿ ಎಲೆ, ಬಾಳೆಹಣ್ಣು, ‘ತರಕಾರಿ, ದಾಸವಾಳ ಹೂವು ಏನೇ ಸಿಕ್ಕರೂ ಸರಿ ಅದರಲ್ಲಿ ಒಂದು ಕನ್ನಡದ ಹನಿಗವನ ಬರೆದು ಮತ್ತೆ ಅದನ್ನು ಅಷ್ಟೇ ಸರಾಗವಾಗಿ ಉಲ್ಟಾ ಬರೆಯುವ ಕಲೆ ಒಲಿದಿದೆ.ಆತ ಉಲ್ಟಾ ಬರೆದಿದ್ದನ್ನು ಕನ್ನಡಿಯಲ್ಲಿ ನೋಡಿದರೆ ಸ್ವಲ್ಪವೂ ತಪ್ಪು ಕಾಣುವುದಿಲ್ಲ.

ಅತನೇ ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗ್ರಾಮದ ರವಿ ಅಲಿಯಾಸ್ ರಿವರ್ಸ್ ರೈಟರ್ ರವಿ.

ಕನ್ನಡ ಅಕ್ಷರಗಳನ್ನು ತಪ್ಪಿಲ್ಲದಂತೆ ಹಿಂಬದಿಯಿಂದ ಬರೆಯುವ ರಿವರ್ಸ್ ರವಿ ಎಂದೇ ಖ್ಯಾತವಾಗಿರುವ ಈತ ವೃತ್ತಿಯಲ್ಲಿ ಹಾಲಿನ ಡೈರಿ ಗುಮಾಸ್ತ.ಬೆಳಗ್ಗೆಯಿಂದ ಸಂಜೆವರೆಗೆ ಹಾಲಿನ ಡೈರಿ ಕೆಲಸ ಮುಗಿಸಿಕೊಂಡು ಬಿಡುವಿನ ವೇಳೆಯಲ್ಲಿ ಉಲ್ಟಾ ಬರವಣಿಗೆ ಕೆಲಸ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಎರಡು ಮತ್ತು ನಾಲ್ಕು ಸಾಲಿನ ಸ್ವ ರಚಿತ ಹಾಗೂ ಮಂಡ್ಯ ಜಿಲ್ಲೆಯ ಅದರಲ್ಲೂ ತಮ್ಮ ಪಾಂಡವಪುರ ತಾಲ್ಲೂಕಿನ ಕವಿಗಳ ಸೂಕ್ತಿಗಳನ್ನು ಕವಿತೆಯಲ್ಲಿ ಅಳವಡಿಸಿದ್ದಾರೆ. ಕನ್ನಡ ಕಾವ್ಯ, ಕವನ, ಸೂಕ್ತಿ ಮತ್ತು ತತ್ವಪದಗಳನ್ನು ಹಿಂಬದಿಯಿಂದ ಬರೆಯುವ ಕಲೆಯನ್ನು ರೂಢಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಯುಸಿ ವ್ಯಾಸಂಗ ಮಾಡಿರುವ ರವಿ, ಯುಟ್ಯೂಬರ್ ಕೂಡ ಹೌದು. ತಮ್ಮ ರಿವರ್ಸ್ ರೈಟಿಂಗ್ ಕುರಿತು 80ಕ್ಕೂ ಹೆಚ್ಚು ವೀಡಿಯೋಗಳನ್ನು ತಮ್ಮ ‘ರವಿ ಕ್ರಿಯೇಟರ್’ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

‘ಹಣೆ ನಮ್ಮದಾದರೂ ಹಣೆ ಬರಹ ನಮ್ಮದಲ್ಲ’, “ನಾನು ಏಕಾಂಗಿಯಾದರೂ ಪರವಾಗಿಲ್ಲ, ನನಗೆ ನಕಲಿ ಸಂಬಂಧಗಳ ಅಗತ್ಯವಿಲ್ಲ.

ಸೌಮ್ಯ ಸ್ವಭಾವ ಹಾಗೂ ಸದಾ ಮೌನಿಯಾಗಿರುವ ರವಿ ವೃತ್ತಿಯ ಜತೆ ಜತೆಗೆ ಏನನ್ನಾದರೂ ಸಾಧಿಸಿ ಕೀರ್ತಿವಂತನಾಗಬೇಕು ಎಂಬ ಛಲದ ಹಿಂದೆ ಬಿದ್ದಿರುವ ರವಿಗೆ ಗೋಚರಿಸಿದ್ದು, ಉಲ್ಟಾ ಬರವಣಿಗೆ.
ಇಂತಹ ಎಲೆಮರೆಯ ಕಾಯಿ, ಅಪರೂಪದ ಸಾಧಕ ಕೆನ್ನಾಳು ರವಿಯಲ್ಲಿರುವ ಕಲೆಗೆ ಕನ್ನಡಿಗರ ಅಭಿಮಾನದ ಒಂದು ಮೆಚ್ಚುಗೆ ಇರಲಿ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ