ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಫೆ.2ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ನಡೆಯುವ ಮಂಡ್ಯನಗರದ ಮೈಷುಗರ್ ಶಾಲೆಗೆ ಶನಿವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉಪಸ್ಥಿತರಿದ್ದರು.
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಗೆ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಂಡ್ಯ ತಾಲೂಕಿನಿಂದ ಎಂ. ಎಸ್. ರಘುನಂದನ್,ಕೆ. ರಾಜು, ಬಿ.ಆರ್. ರಾಮಚಂದ್ರ, ವಿಜಯಕುಮಾರ್, ಯು.ಸಿ.ಶಿವಕುಮಾರ್ ಕಣದಲ್ಲಿದ್ದಾರೆ. ಮದ್ದೂರು ತಾಲೂಕಿನಿಂದ ಬಿ. ಅನಿಲ್ ಕುಮಾರ್, ಎಸ್.ಮಹೇಶ, ರಾಮಕೃಷ್ಣ,ಎಂ. ರೂಪ, ಎಸ್.ಪಿ.ಸ್ವಾಮಿ, ಎಂ. ಕೆ.ಹರೀಶ್ ಬಾಬು ಕಣದಲ್ಲಿದ್ದಾರೆ.
ಮಳವಳ್ಳಿ ತಾಲೂಕಿನಿಂದ ಡಿ. ಕೃಷ್ಣೇಗೌಡ,ವಿ.ಎಂ. ವಿಶ್ವನಾಥ್, ಪಾಂಡವಪುರ ತಾಲೂಕಿನಿಂದ ಕೆ. ರಾಮಚಂದ್ರ,ಸಿ. ಶಿವಕುಮಾರ್, ಶ್ರೀರಂಗಪಟ್ಟಣದಿಂದ ಎಂ ಕಿಶೋರ್(ಕಿರಣ್), ಎಚ್.ಎಂ. ಪುಟ್ಟಸ್ವಾಮಿಗೌಡ, ಬಿ. ಬೋರೇಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಎನ್. ಎಸ್. ಮಹೇಶ, ಎಚ್. ಟಿ. ಮಂಜು, ಕೆ. ರವಿ, ಎಂ.ಬಿ. ಹರೀಶ್ ಹಾಗೂ ನಾಗಮಂಗಲ ತಾಲೂಕಿನಿಂದ ಅಪ್ಪಾಜಿಗೌಡ, ಲಕ್ಷ್ಮಿನಾರಾಯಣ, ದೇವೇಗೌಡ ಹಾಗೂ ನೆಲ್ಲಿಗೆರೆ ಬಾಲು ಕಣದಲ್ಲಿದ್ದಾರೆ.




