Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ದ ಮೇ 24 ರಂದು ಪ್ರತಿಭಟನಾ ಸಭೆ

ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಆಲ್‌ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಮೇ 24ರಂದು ಮಧ್ಯಾಹ್ನ 3 ರಿಂದ ಸಂಜೆ 6.30ರವರೆಗೆ ಪ್ರತಿಭಟನಾ ಸಭೆಯನ್ನು ಮಂಡ್ಯನಗರದ ಗಿರಿಜಾ ಟಾಕೀಸ್ ಮುಂಭಾಗದ ಷುಗರ್‌ಟೌನ್‌ನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬೋರ್ಡ್‌ನ ತಾಹಿರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸಲ್ಮಾನರ ವಕ್ಫ್ ಮಂಡಳಿಗಳಿಗೆ ಮುಸಲ್ಮಾನೇತರರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ತಿದ್ದುಪಡಿ ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಜಾಗೃತ ಕರ್ನಾಟಕದ ಡಾ.ವಾಸು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಅಬ್ದುಲ್ ಮಜೀದ್, ಇಫ್ತೆಖಾರ್ ಅಹ್ಮದ್ ಹಾಗೂ ನಜ್ಮಾನಜೀರ್ ಭಾಗವಹಿಸುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಮುಕ್ತಾಹ್ ಅಹ್ಮದ್, ಅಹ್ಮದುಲ್ ಹಸನ್, ಮುಡಾ ಅಧ್ಯಕ್ಷ ನಯೀಂ ಖಾನ್, ಜಬೀಉಲ್ಲಾ ಖಾನ್, ಮಹಮ್ಮದ್ ಕಾಸಿಂ, ಕಲಿಮುಲ್ಲ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ