ವರದಿ: ನ.ಲಿ.ಕೃಷ್ಣ
ಮಾದರಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪವಿತ್ರ ಉಪಾಧ್ಯಕ್ಷರಾಗಿ ಶಿವಲಿಂಗಯ್ಯ ಆಯ್ಕೆ ಆದರು. ವಿಜೇತರು ಹತ್ತು ಮತಗಳನ್ನು ಪಡೆದರು.

ಇವರ ಎದುರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಕ್ಷಿತ್ ಕುಮಾರ್ ಎಂಟು ಮತಗಳನ್ನು ಪಡೆದು ಪರಾಭವಗೊಂಡರು
ಚುನಾವಣಾಧಿಕಾರಿಯಾಗಿ ಅಕ್ಷರದಾಸೋಹ ಸಹಾಯಕ ನಿರ್ದೆಶಕರಾದ ರಾಜೇಶ್ವರಿ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಹಾಗು ಮಾದರಹಳ್ಳಿ ಗ್ರಾ ಪಂ ಮಾಜಿ ಅಧ್ಯಕ್ಷರಾದ ಎಮ್ ಇ ಕೃಷ್ಣ ಅಭಿನಂದಿಸಿ ಮಾತನಾಡಿ ಗ್ರಾಮಸ್ವರಾಜ್ಯದ ಆಶಯಗಳ ಜಾರಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಮಾದರಹಳ್ಳಿಗ್ರಾ.ಪಂ. ನ ಆಡಳಿತದಲ್ಲಿ ದೃಡವಾದ ಹೆಜ್ಜೆ ಗುರುತು ಮೂಡಿಸಲಿ ಎಂದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಓದುಲಿಂಗೇಗೌಡ ಹಾಜರಿದ್ದರು.




