Wednesday, September 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೊರವಲಯದಲ್ಲಿ ಜಲಕ್ರೀಡೆ, ಬೋಟಿಂಗ್ ; ಶಾಸಕರಿಂದ ಸ್ಥಳ ಪರಿಶೀಲನೆ

ಮಂಡ್ಯನಗರದ ಹೊರವಲಯದ ಕಲ್ಲಹಳ್ಳಿ-ಕೋಣನಹಳ್ಳಿ ಹಾಗೂ ಬೂದನೂರು ಕೆರೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಹಾಗೂ ಬೋಟಿಂಗ್ ಪಾಯಿಂಟ್ ಮತ್ತು ಜಲಕ್ರೀಡೆಗಳನ್ನು ಅಳವಡಿಸುವ ಸಂಬಂಧ ಶಾಸಕ ರವಿಕುಮಾರ್’ಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದರು.

ಬೂದನೂರು ಕೆರೆ ವೀಕ್ಷಣೆ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ, ಕಾನೀನಿದ ಕಾರ್ಯಪಾಲಕ ಎಂಜಿನಿಯರ್ ನಂಜುಂಡೇಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಜಲತಜ್ಞರು ಭಾಗವಹಿಸಿದ್ದರು.

nudikarnataka.com

ಈ ವೇಳೆ ಮಾತನಾಡಿದ ಶಾಸಕ ರವಿಕುಮಾರ್’ಗೌಡ ಅವರು, ಬೂದನೂರು ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ.‌ಅದರಲ್ಲಿ ಕೆರೆ ಏರಿ ಮೇಲೆ ವಾಕಿಂಗ್ ಪಾಥ್, ಕೆರೆ ಕಳೆ ತೆಗೆದು ದ್ವೀಪ‌ ನಿರ್ಮಾಣ ಮಾಡಿ ಜಲಕ್ರೀಡೆ, ಬೋಟಿಂಗ್ ನಡೆಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಕೆರೆ ಅಭಿವೃದ್ಧಿ ಮೂಲಕ ಸ್ಥಳೀಯವಾಗಿ ಉದ್ಯೋಗಸೃಷ್ಟಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದ ಅವರು, ಅಧಿಕಾರಿಗಳು ಕೂಡಲೇ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದರು.

ಈ ವೇಳೆ ಗ್ರಾಮದ ಮುಖಂಡರಾದ ಶೇಖರ್, ಚಂದ್ರಶೇಖರ್, ಅಂಕೇಶ್, ಚಂದ್ರಣ್ಣ, ಮಧುಕುಮಾರ್ ಸೇರಿದಂತೆ ಹಲವರಿದ್ದರು‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!