Saturday, November 21, 2026

ಪ್ರಾಯೋಗಿಕ ಆವೃತ್ತಿ

ರಂಗೋಲಿ ಬಿಡಿಸಿ ‘ಗೃಹಲಕ್ಷ್ಮಿ”ಗೆ ಸ್ವಾಗತ: ಜೈ ಕಾಂಗ್ರೆಸ್ ಎಂದ ಮಹಿಳೆಯರು !

ಇಂದು ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಭಾಗದ ಹಲವು ಜಿಲ್ಲೆಗಳ ಮಹಿಳೆಯರು ಮನೆ ಮಂದೆ ರಂಗೋಲಿಗಳನ್ನು ಬಿಡಿಸಿ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ”ಗೃಹಲಕ್ಷ್ಮಿ”ಯನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

ಮೈಸೂರಿನ ಬಾಚಹಳ್ಳಿ ಗ್ರಾಮದಲ್ಲಿ ‘ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ’, ‘2000 ಗೃಹಲಕ್ಷ್ಮಿ’ ಹಾಗೂ ಜೈ ಕಾಂಗ್ರೆಸ್ ಎಂದು ಮಹಿಳೆಯರು ಬಿಡಿಸಿರುವ ರಂಗೋಲಿಗಳು ಗಮನ ಸೆಳೆದಿವೆ.

ಗೃಹಲಕ್ಷ್ಮಿಯ ₹2000 ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಗೃಹ ಲಕ್ಷ್ಮಿಯರೆಲ್ಲ ಸಂಭ್ರಮದಿಂದ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕುವ ಮೂಲಕ ಸ್ವಾಗತಿಸಿದ್ದಾರೆ. ಈ ಮೂಲಕ ನಮ್ಮ ಸರ್ಕಾರದ ಯೋಜನೆಗೆ ಜನತೆ ಸಂಭ್ರಮಿಸುತ್ತಿರುವುದು ನಮ್ಮಲ್ಲಿ ಸಾರ್ಥಕತೆ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮ X ನಲ್ಲಿ ಬರೆದುಕೊಂಡಿದೆ.

ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ನಮ್ಮ ಸರ್ಕಾರ, ಇಂದು ಗೃಹಲಕ್ಷಿ ಯೋಜನೆಯ ₹2000 ಹಣವನ್ನು ನಾಡಿನ ಮಹಿಳೆಯರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ಮಹಿಳಾ ಸಬಲೀಕರಣಕ್ಕೆ ಮಹತ್ತರ ಕೊಡುಗೆ ನೀಡುವ ಗೃಹಲಕ್ಷಿ ಯೋಜನೆ ಬೆಲೆ ಏರಿಕೆಯಿಂದ ನರಳುತ್ತಿರುವ ಪ್ರತಿ ಕುಟುಂಬಕ್ಕೆ ಆಧಾರವಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ