Thursday, October 10, 2024

ಪ್ರಾಯೋಗಿಕ ಆವೃತ್ತಿ

ವೆಲ್ಲೆಸ್ಲಿಗೆ ಸ್ವಾಗತ :

ಗುಡ್ ಮಾರ್ನಿಂಗ್ ಸುಲ್ತಾನರೇ
ಗುಡ್ ಮಾರ್ನಿಂಗ್ ವೇಲ್ಲೆಸ್ಲಿಯವರೇ

ಏನು ಸುಲ್ತಾನರೇ ಬಹಳ ಆರಾಮವಾಗಿ ಪೇಪರ್ ಓದುತ್ತಿದ್ದಿರಲ್ಲ, ಏನು ಸಮಾಚಾರ ?


ನೀವು ನಮ್ಮನ್ನು ಕೊಂದು ಹಾಕಿದ ಬಳಿಕ ಬೇರೆ ಕೆಲಸವೇನಿದೆ ಟೈಂ ಪಾಸ್ ಮಾಡಲು ಪತ್ರಿಕೆ ತಿರುವುತ್ತಿದ್ದೇನೆ ಅಷ್ಟೇ.

ಆದರೂ ಸುಲ್ತಾನರೇ ನೀವೂ ನಮ್ಮ ಬ್ರಿಟಿಷ್ ಚಕ್ರಾಧಿಪತ್ಯವನ್ನು ಒಪ್ಪಿದ್ದರೆ ಇಂದು ನಿಮ್ಮ ಮಕ್ಕಳು ಮರಿಮಕ್ಕಳು ಕಲ್ಕತ್ತಾದ ರಸ್ತೆಗಳಲ್ಲಿ ಸೈಕಲ್ ರೀಕ್ಷಾ ತುಳಿಯಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ ಅಲ್ಲವೇ?


ಇರಲಿ ಬಿಡಿ ವೇಲ್ಲೆಸ್ಲಿಯವರೆ ಕಲ್ಕತ್ತಾದ ರಸ್ತೆಗಳಲ್ಲಿ ನನ್ನ ಮಕ್ಕಳು ಮರಿಮಕ್ಕಳಷ್ಟೆ ಅಲ್ಲವಲ್ಲ ಸಾವಿರಾರು ಜನ ಹೊಟ್ಟೆಪಾಡಿಗಾಗಿ ಸೈಕಲ್ ರಿಕ್ಷಾ ತುಳಿಯುತ್ತಿದ್ದು ನನ್ನ ವಂಶಸ್ಥರು ರಿಕ್ಷಾ ತುಳಿದರೆ ಅಪಮಾನವೇನು?

ಆದರೂ‌‌ ಸುಲ್ತಾನರೇ ನೀವು ಫ್ರೆಂಚರಿಗೆ ವಿಶೇಷ ಆತಿಥ್ಯ ಕೊಟ್ಟು ನಿಮ್ಮ ಅರಮನೆಯಲ್ಲಿ ಫ್ರೆಂಚ್ ಕ್ರಾಂತಿಯ ನೆನಪಿನಲ್ಲಿ ಗಿಡವನ್ನು ನೆಟ್ಟಿದ್ದು ಫಲ ನೀಡಲಿಲ್ಲ ಅಲ್ಲವೇ ?

ಆಗೇನೂ ಇಲ್ಲ ವೇಲ್ಲೆಸ್ಲಿಯವರೆ ಅಂದು ನಾನು ನೆಟ್ಟ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಶಯದ ಜಾಕೋಬಿನ್ ಗಿಡ ಇಂದು ಹೆಮ್ಮರವಾಗಿ ಬೆಳೆದು ಸಂವಿಧಾನದ ರೂಪದಲ್ಲಿ ಹತ್ತು ಹಲವು ಜನರಿಗೆ ಫಲ ನೀಡುತ್ತಿದೆಯಲ್ಲ?

ಆದರೂ ಸುಲ್ತಾನರೇ ನಿಮ್ಮ ಕಮಾಂಡರ್ ಮೀರ್ ಸಾದಿಕ್, ಪೂರ್ಣಯ್ಯನಂಥವರು ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದು ನಿಮ್ಮ ಸೋಲಿಗೆ ಕಾರಣವಾಯಿತ್ತಲ್ಲವೇ ?

ಆಗೇನೂ ಇಲ್ಲ ವೇಲ್ಲೆಸ್ಲಿಯವರೆ ಮೀರ್ ಸಾದಿಕ್, ಪೂರ್ಣಯ್ಯನಂಥವರು ಬಲಿಪಶುಗಳು ನಿಮ್ಮ ಬ್ರಿಟಿಷ್‌ ಸಾಮ್ರಾಜ್ಞಿಯ ದೊಡ್ಡ ಕುತಂತ್ರದ ಸಣ್ಣ ಕಾಲಾಳುಗಷ್ಟೆ ಅಲ್ಲವೇ ?

ಆದರೂ ಸುಲ್ತಾನರೇ ನೀವು ನಮಗೆ ಎಷ್ಟೇ ಶತ್ರುವಾದರು ನಿಮ್ಮ ದೇಹವನ್ನು ಗೌರವಾನ್ವಿತವಾಗಿ ದಫನ್ ಮಾಡಿದೇವು, ಆದರೆ ನಿಮ್ಮ ಜನಗಳೇ ನಿಮ್ಮನ್ನು ಧರ್ಮಂದನೆಂದು ಬಿಂಬಿಸಿ ದಿನನಿತ್ಯ ಕೊಲ್ಲುತ್ತಿಲ್ಲವೇ?

ಆಗೇನೂ ಇಲ್ಲ ವೇಲ್ಲೆಸ್ಲಿಯವರೆ ನೀವು ನಿಮ್ಮ ಸಾಮ್ರಜ್ಯದ ವಿಸ್ತರಣೆಗಾಗಿ ಮಾಡಿದ ಓಡೆದಾಳುವ ನೀತಿಯ ಬಳುವಳಿಯನ್ನು ನಾವು ಉಣ್ಣುತ್ತಿದ್ದೆವೆ ಅಷ್ಟೇ ಅಲ್ಲವೇ ?

ಆದರೂ ‌ಸುಲ್ತಾನರೇ ನಿಮ್ಮ‌‌ ಸೋಲಿನ ನಂತರ ನಮ್ಮ ಈಸ್ಟ್ ಇಂಡಿಯಾ ಕಂಪನಿ ಹಾಗೂ ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು ನಿಮ್ಮ ದೇಶದಲ್ಲಿ ಯಶಸ್ವಿಯಾಗಿ ತಳವೂರಿಸಿದ್ದಿವಿ ಅಲ್ಲವೇ?

ಆಗೇನೂ ಇಲ್ಲ ವೇಲ್ಲೆಸ್ಲಿಯವರೆ ನಿಮ್ಮ ಹತ್ತು ಹಲವು ಕಂಪನಿಗಳನ್ನು ನಮ್ಮ ದೇಶದ ರೈತರು, ಜನರು ಗೇಟ್ ಪಾಸ್ ತೋರಿಸಿದ್ದರೆ ಅಲ್ಲವೇ ?

ಆದರೂ ಸುಲ್ತಾನರೇ ನಾನು ನಿಮ್ಮನ್ನು ಕೊಂದು ಇನ್ನೂರ ಇಪ್ಪತ್ತು ವರ್ಷಗಳೇ ಕಳೆದರು ನಿಮಗೆ ನಮ್ಮ ಬಗೆಗಿನ ಸಿಟ್ಟು, ಸೆಡವು ಸ್ವಲ್ಪವೂ ಕಡಿಮೆಯಾಗಿಲ್ಲ ಬಿಡಿ !

  • ನಿಮ್ಮ ವನು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!