Saturday, November 21, 2026

ಪ್ರಾಯೋಗಿಕ ಆವೃತ್ತಿ

ಕಷ್ಟ ಬಂದಾಗ ದೇವರಿಗೆ ತಲೆಬಾಗಲೇಬೇಕು

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಬಹಳಷ್ಟು ಹಣ ಸಂಪಾದಿಸಿದರೂ ಕಷ್ಟ ಬಂದಾಗ ದೇವರಿಗೆ ತಲೆ ಬಾಗಲೇಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮಂಡಲ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೆಂಕಟೇಶ್ವರ ದೇವಸ್ಥಾನ ಸುಂದರವಾಗಿ ನಿರ್ಮಾಣವಾಗಿದ್ದು. ದೇವಸ್ಥಾನಕ್ಕೆ ದಾನ ನೀಡಿದ ಎಲ್ಲರಿಗೂ ಭಗವಂತ ಒಳ್ಳೆಯದು ಮಾಡುವುದರ ಮೂಲಕ ಇನ್ನಷ್ಟು ಬಡವರಿಗೆ ಸಹಾಯ ಮಾಡಲು ಶಕ್ತಿ ನೀಡುವಂತಾಗಲಿ ಎಂದು ಆಶಿಸಿದರು.

ನಮ್ಮ ಪಕ್ಷದ ಸರ್ಕಾರ ಇರಲಿ, ಇಲ್ಲದೇ ಇರಲಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುತ್ತಿದ್ದಾರೆ. ಅಭಿವೃದ್ದಿಯಲ್ಲಿ ಮೊದಲನೇ ಸ್ಥಾನದಲ್ಲಿ ತಮ್ಮಣ್ಣನವರು ನಿಲ್ಲುತ್ತಾರೆ. ಉತ್ತಮ ಆಡಳಿತದೊಂದಿಗೆ ತಾಲ್ಲೂಕಿಗೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದರು.

ತೋಟದ ಮನೆಯಲ್ಲಿ ವಾಸವಾಗಿರುವ ನನ್ನ ಮನೆಗೆ ಅತೀ ಕಡು ಬಡವರು ಪ್ರತಿದಿನವೂ ಬರುತ್ತಾರೆ. ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತೇನೆ. ಮಂಡ್ಯ ಜಿಲ್ಲೆ ದೇವೇಗೌಡರಿಗೆ ಶಕ್ತಿ ತುಂಬಿದ ಜಿಲ್ಲೆಯಾಗಿದೆ.

ದೊಡ್ಡ ಕೊಡುಗೆ ಕೊಟ್ಟಿರುವುದು ಮಂಡ್ಯ ಜಿಲ್ಲೆಯ ಜನ ಎನ್ನುವುದನ್ನು ಮರೆಯುವುದಿಲ್ಲ. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಶಾಸಕ ತಮ್ಮಣ್ಣ ಅವರು ಪ್ರಾಮಾಣಿಕವಾಗಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿರುವುದರಿಂದ ಕೈ ಹಿಡಿಯಬೇಕೆಂದು ಮನವಿ ಮಾಡಿದರು.

ನಂತರ ಅವರು ನಿಷ್ಟಾವಂತ ಕಾರ್ಯಕರ್ತ ಕೆ.ಟಿ.ಸುರೇಶ್ ಹಾಗೂ ಮೆಡಿಕಲ್ ಬಾಬು ಅವರ ಮನೆಗೆ ಭೇಟಿ ನೀಡಿ ಅವರ ತಾಯಿಯ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ, ಜಿ.ಪಂ.ಮಾಜಿ ಸದಸ್ಯ ಎ.ಟಿ.ಬಲ್ಲೇಗೌಡ ,ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಶ್ರೀ ವೆಂಕಟೇಶ್ವರ ಸೇವಾ ಸಮಿತಿಯ ಕಾರ್ಯಧ್ಯಕ್ಷ ವೆಂಕಟೇಶ್, ಅಧ್ಯಕ್ಷ ಪೂಜೂರಿ ವೆಂಕಟೇಶ್, ಮುಖಂಡರಾದ ಅಣ್ಣೂರು ನವೀನ್, ಕೆ.ಟಿ.ಸುರೇಶ್ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ