Friday, September 20, 2024

ಪ್ರಾಯೋಗಿಕ ಆವೃತ್ತಿ

ಸೃಷಿಯಾಗಲಿದೆಯೇ ಉಪ ಪ್ರಧಾನಿ ಹುದ್ದೆ !!

ಇಂಡಿಯಾ ಅಥವಾ ಎನ್‌ಡಿಎ ಯಾವುದೇ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಸಹ ಈ ಬಾರಿ ಕಡ್ಡಾಯವಾಗಿ ಉಪಪ್ರಧಾನಿ ಹುದ್ದೆ ಸೃಷ್ಟಿಸಲ್ಪಡುತ್ತವೆ ಎಂದು ದೆಹಲಿ ಮೂಲಗಳು ಹೇಳುತ್ತಿವೆ.

ಮೈತ್ರಿಕೂಟದ ಹಲವು ಪಕ್ಷ ಮತ್ತು ನಾಯಕರಿಗೆ ಸ್ಥಾನಮಾನ ನೀಡಬೇಕಾದ ಅನಿವಾರ್ಯತೆ ಇರುವುದರಿಂದ, ಈ ಬಾರಿ ಉಪಪ್ರಧಾನಿ ಹುದ್ದೆ ಸೃಷ್ಟಿಯಾಗಲಿದೆ ಎಂದೇ ರಾಜಕೀಯ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಉಪ ಪ್ರಧಾನಿ ಹುದ್ದೆ ಸೃಷ್ಟಿಯಾದರೆ ಪ್ರಾದೇಶಿಕ ಪಕ್ಷಗಳು ಸಹ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆಯಲಿವೆ.

ಈಗಾಗಲೇ ಇಂಡಿಯಾ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಅವರು ಬಂದರೆ ಉಪ ಪ್ರಧಾನಿ ಪಟ್ಟ ನೀಡುವುದಾಗಿ ಆಫರ್ ನೀಡಿದ್ದು, ಚಂದ್ರಬಾಬು ನಾಯ್ಡುರವರು ಇಂಡಿಯಾ ಮೈತ್ರಿಕೂಟಕ್ಕೆ ಬಂದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಆಫರ್ ನೀಡಿದೆ.ಈ ಹಿನ್ನಲೆಯಲ್ಲಿ ಎನ್‌ಡಿಎ ಅಥವಾ ಇಂಡಿಯಾ ಇವೆರಡರಲ್ಲಿ ಯಾವ ಮೈತ್ರಿ ಕೂಟ ಕೇಂದ್ರ ಸರ್ಕಾರ ರಚನೆ ಮಾಡುವುದೋ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!