Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಡುಪ್ರಾಣಿ ಹಾವಳಿ ತಡೆ ಮತ್ತು ಪರಿಹಾರ ಕುರಿತ ಪ್ರತಿಭಟನೆಗೆ ವ್ಯಾಪಕ ಪ್ರಚಾರ

ಜಿಲ್ಲೆಯಾದ್ಯಂತ ಮಿತಿ ಮೀರಿರುವಾ ಕಾಡುಪ್ರಾಣಿಗಳ ಹಾವಳಿ ತಡೆಯಲು ತೆಂಗು ಹಾಗು ಕಬ್ಬಿನ ಬೆಳೆ ನಷ್ಠಕ್ಕೆ ಪರಿಹಾರ ಕೋರಿ ಮದ್ದೂರಿನಲ್ಲಿ ದಿ 29-11-2022 ರಂದು ತಾಲ್ಲೂಕು ಕಛೇರಿ ಎದುರು ನಡೆಯಲಿರುವ ಚಳವಳಿಗೆ ಮದ್ದೂರು ತಾಲೂಕಿನಾದ್ಯಂತ ರೈತರಿಗೆ ಚಳವಳಿ ಕುರಿತು ಮಾಹಿತಿ ನೀಡುವ ಜೊತೆಗೆ ಕುರಿತು ಸಂವಹನ ನಡೆಸಿ ಚಳವಳಿಗೆ ಪ್ರೇರೆಪಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ಪ್ರತಿ ಹಳ್ಳಿಯಲ್ಲಿಯು ಮುಳ್ಳುಹಂದಿ ಕಾಡುಹಂದಿಗಳ ದಾಳಿ ಮತ್ತು ಬೆಳೆ ನಷ್ಟದ ಕುರಿತು ಆಕ್ರಂದನ ಕೇಳಿಬರುತ್ತಿದೆ.

ಕಳೆದ ಎಳೆಂಟು ವರ್ಷಗಳಿಂದ ಇಂತಹ ಹಾನಿಯಾಗುತ್ತಿದ್ದರೂ ಇಲಾಖೆಗಳು ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಪ್ರತಿ ಹಳ್ಳಿಯಲ್ಲಿಯು ರೈತರು ಒಕ್ಕೊರಲಿನಿಂದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಲೆ ನಷ್ಠದ ಬಾಬ್ತು ಆಗಿರುವ ಕೃಷಿ ಬದುಕು ಕಾಡು ಹಂದಿಗಳ ಹಾವಳಿಯಿಂದ ಮತ್ತಷ್ಠು ಶೊಚನೀಯಾವಾಗಿದೆ ಎಂಬುದು ರೈತರ ಅಳಲಾಗಿದೆ.

ಕಬ್ಬು ಬತ್ತ ರಾಗಿ ಯಂತಹ ಬೆಳೆ ಬೆಳೆಯಲು ಕೃಷಿಕಾರ್ಮಿಕರ ಸಮಸ್ಯೆ ಉಂಟಾಗಿ ಮುಂದೇನು? ಎಂಬ ಸ್ಥಿತಿಗೆ ಬಂದ ರೈತರು ಅನೀವಾರ್ಯವಾಗಿ ತಮ್ಮ ಗದ್ದೆಗಳಿಗೆ ತೆಂಗು ಅಡಿಕೆ ನೆಟ್ಟು ಬದುಕು ಕಂಡುಕ್ಕೊಳ್ಳುವ ಅನಿವಾರ್ಯದಿಂದ ದೀ ಬೆಳೆ ಮೊರೆ ಹೊದ ಹೊತ್ತಿನಲ್ಲಿ ಕಾಡುಪ್ರಾಣಿಗಳ ಹಾವಳಿ ರೈತರನ್ನು ಆತಂಕಕ್ಕೀಡುಮಾಡಿದೆ.

ರೈತರು ತಮ್ಮ ಬೆಳೆ ರಕ್ಷಣೆಗಾಗಿ ನೈಸರ್ಗಿಕ ರಕ್ಷಣಾ ಕ್ರಮಗಳಲ್ಲದೆ ರಾಸಾಯನಿಕ ಬಳಕೆ ಮಾಡಿದರೂ ಸಹ ಹಂದಿಗಳ ಹಾವಳಿ ನಿಂತಿಲ್ಲ. ಮುಂದಿನ ವರ್ಷ ಫಲ‌ಕೊಟ್ಟೀತು ಎಂಬ ಆಸೆಯಿಂದ ಇದ್ದ ರೈತನ ತೆಂಗಿನ ಗಿಡಗಳನ್ನು ರಾತ್ರೊ ರಾತ್ರಿ ಬುಡಮೇಲು ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಕೃಷಿಇಲಾಖೆ ತೊಟಗಾರಿಕೆ ಇಲಾಖೆ, ಅರಣ್ಯ ಇಲಾಖೆಗಳು ರೈತರಿಗೆ ರಕ್ಷಣಾ ಕ್ರಮಗಳನ್ನು ಕುರಿತು ಮಾಹಿತಿ ನೀಡುವ ಜೊತೆಗೆ ಸರ್ಕಾರಕ್ಕೆ ಇಂತಹ ನಷ್ಠದ ಕುರಿತು ವರದಿ ಸಲ್ಲಿಸಬೇಕಿತ್ತು.

ಇದ್ಯಾವುದನ್ನು ಮಾಡದ ಇಲಾಖೆಗಳ ಕ್ರಮ ಖಂಡಿಸಿ ಸರ್ಕಾರದ ಗಮನಸೆಳೆದು ಪರಿಹಾರಕ್ಕೆ ಆಗ್ರಹಿಸಿ ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಚಳವಳಿಗೆ ಕರೆ ನೀಡಿದ್ದು, ತೆಂಗು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತಸಂಘ,ಕರ್ನಾಟಕ ರಕ್ಷಣಾ ವೇದಿಕೆ, ಗ್ರಾ ಪಂ ಸದಸ್ಯರ ಒಕ್ಕೂಟ ಮತ್ತು ಹಾಲು ಉತ್ಪಾದಕರ ಹೊರಾಟ ಸಮಿತಿ ಬೆಂಬಲ ವ್ಯಕ್ತಪಡಿಸಿವೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!