Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾಡು ಹಂದಿ – ಮುಳ್ಳು ಹಂದಿಗಳ ಮಿತಿ ಮೀರಿದ ಹಾವಳಿ

ವರದಿ : ನ.ಲಿ.ಕೃಷ್ಣ. ಕೃಷಿಕರು.


  • ತೆಂಗಿನ ಗಿಡ ಕಬ್ಬುನಾಶ, ಕಂಗಾಲಾದ ಜಿಲ್ಲೆಯ ರೈತರು
  • ಆರಣ್ಯ ಇಲಾಖೆ ತೊಟಗಾರಿಕೆ ನಿರ್ಲಕ್ಷ್ಯ, ನಷ್ಠದ ಅಂಕಿ ಸಂಖ್ಯೆ ವಿವರ ಇಲ್ಲಾ
  • ಜನಪ್ರತಿನಿಧಿಗಳ ಮಹಾಮೌನ ತೆಂಗು ಕಬ್ಬಿಗೆ ಪರಿಹಾರಕ್ಕೆ ಆಗ್ರಹ

ಮಂಡ್ಯ ಜಿಲ್ಲೆಯಾದ್ಯಂತ ಕಾಡು ಹಂದಿ ಮುಳ್ಳು ಹಂದಿಗಳ ಕಾಟ ಮಿತಿ ಮೀರಿದ್ದು ತೆಂಗಿನ ಗಿಡದ ತಿರುಳಿನ ಆಸೆಗಾಗಿ ನೆಟ್ಟ ಸಸಿಯಿಂದ ಮೂರು ವರ್ಷದ ಗಿಡಗಳನ್ನು ಬುಡ ಕೊರೆದು ತಿಂದು ಉರುಳಿಸುತ್ತಿದ್ದು ಕಷ್ಠ ಪಟ್ಟು ಬೆಳೆದ ಗಿಡಗಳು ವರ್ಷ ಒಪ್ಪತ್ತಿನಲ್ಲಿ ಫಲ ಕೊಡಬೇಕಾಗಿದ್ದ ಗಿಡಗಳು ದಿನ ಬೆಳಗಾಗುವುದರೊಳಗೆ ನೆಲಕ್ಕೆ ಒರಗುವುದನ್ನ ಕಂಡು ರೈತರು ಆಘಾತಗೊಂಡಿದ್ದಾರೆ.

ಕಟಾವು ಹಂತಕ್ಕೆ ಬಂದ ಕಬ್ಬಿನ ಗದ್ದೆಯನ್ನು ನಾಶ ಮಾಡುತ್ತಿರುವ ಕಾಡು ಹಂದಿ ಮುಳ್ಳು ಹಂದಿಗಳು ಕಬ್ಬನ್ನು ಕಡಿದು ನಾಶಗೊಳಿಸಿ ರೈತರ ಬದುಕಿಗೆ ಕೊಳ್ಳಿ ಹಿಡುತ್ತಿವೆ. ಈ ನಷ್ಠ ಕುರಿತು ರೈತರು ತೊಟಾಗಾರಿಕೆ ಇಲಾಖೆಯ ಅಧಿಕಾರ ಬಳಿ ದೂರು ಸಲ್ಲಿಸಲು ಹೋದರೆ ತೋಟಗಾರಿಕೆ ಅಧಿಕಾರಿಗಳು ಅರಣ್ಯ ಇಲಾಖೆ ಕಡೆ ಕೈ ತೊರುತ್ತಾರೆ, ಅರಣ್ಯ ಇಲಾಖೆಗೆ ದೂರು ಹೇಳಿದರೆ ತೋಟಗಾರಿಕೆ ಇಲಾಖೆ ಕಡೆ ಕೈ ತೊರುತ್ತಾರೆ.

ಹಂದಿ ಆರಣ್ಯ ಇಲಾಖೆಗೆ, ತೆಂಗಿನ ಗಿಡ ತೋಟಗಾರಿಕಾ ಇಲಾಖೆಗೆ ಸೇರುತ್ತವೆ. ಇದರಿಂದ ಅಧಿಕಾರಿಗಳು ಕೈ ಆತ್ತಿತ್ತಾ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಹೀಗಿದ್ದರು ಆರಣ್ಯ ಇಲಾಖೆಯವರು ಹಂದಿಗಳಿಂದ ಆದ ತೆಂಗಿನ ಬೆಳೆಯ ನಷ್ಠದ ವಿವರ ಸರ್ವೆಮಾಡಬೇಕಾದದ್ದು, ಹಾಗೆಯೇ ತೋಟಗಾರಿಕೆ ಇಲಾಖೆಯವರು ತೆಂಗಿನ ಗಿಡಗಳ ನಷ್ಠದ ಅಂದಾಜು ಮತ್ತು ಸಂಖ್ಯೆ ದಾಖಲಿಸಬೇಕಾದದ್ದು ಅವರವರ ಜವಾಬ್ದಾರಿ. ಇದನ್ನು ಮಾಡದೆ ಕೈ ಚೆಲ್ಲುತ್ತಾ ಕುಳಿತ ಅಧಿಕಾರಿಗಳು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಮೊದಲೆ ನಷ್ಠದ ಬಾಬ್ತು ಆಗಿದ್ದು, ಕೃಷಿ ಬದುಕು ಹಂದಿಗಳ ಹಾವಳಿಯಿಂದ ಮತ್ತಷ್ಠು ಸಂಕಟಕ್ಕೆ ದೂಡಲ್ಪಟ್ಟಿವೆ. ಕಟಾವಿಗೆ ಬಂದ ಕಬ್ಬಿನ ಬುಡ ಕತ್ತರಿಸಿ ಕಬ್ಬು ಒಣಗಿ ನಷ್ಠ ಆಗುತ್ತಿದೆ.

ಹೀಗೆ ಹಂದಿ ಹಾವಳಿಗೆ ತುತ್ತಾದ ಕಬ್ಬಿನ ಗದ್ದೆ ಕಟಾವಿಗೆ ಇಳುವರಿ ಬಾರದ ಕಾರಣ ಕೆಲಸಗಾರರು ಬರುತ್ತಿಲ್ಲಾ. ಇಂತಹ ಗದ್ದೆ ಕಟಾವು ಮಾಡಿಸಲು ದುಪ್ಪಟ್ಟು ಹಣ ಕೊಟ್ಟು ಕಬ್ಬು ಕಟಾವು ಮಾಡಿಸಬೇಕಾಗಿದೆ. ಇದರಿಂದ ರೈತರು ಇಂತಹ ಸಂಕಟಕ್ಕೆ ರೈತರು ಸಿಲುಕಿದ್ದಾರೆ.

ಹಂದಿ ಹಾವಳಿ ತಡೆಗಾಗಲಿ, ಸುರಕ್ಷತೆಗಾಗಲಿ ತೋಟಗಾರಿಕೆ ಇಲಾಖೆ ಬಳಿ ಆಗಲಿ, ಆರಣ್ಯ ಇಲಾಖೆ ಬಳಿ ಆಗಲಿ ಪರಿಣಾಮಕಾರಿ ಪರಿಹಾರೋಪಾಯಗಳು ಇಲ್ಲಾವಾಗಿದೆ.

ಹೀಗಾಗಲೆ ಕೃಷಿ ವಲಯ ಕಷ್ಟ-ನಷ್ಠ ದಲ್ಲಿರುವಾಗಲೇ ಹಂದಿಗಳ ಹಾವಳಿ ರೈತರ ಬದುಕನ್ನು ಶೊಚನೀಯಗೊಳಿಸಿದೆ. ಈ ಕುರಿತು ಪರಿಹಾರ ಮತ್ತು ಪರ್ಯಾಯಗಳನ್ನು ರೈತರಿಗೆ ಒದಗಿಸುವಲ್ಲಿ ಶ್ರಮಿಸಬೇಕಾದ ಜನಪ್ರತಿನಿಧಿಗಳು ಮಹಾ ಮೌನಕ್ಕೆ ಶರಣಾಗಿದ್ದಾರೆ. ವಿಧಾನಸಭೆಯಲ್ಲಿ ಇಂತಹ ವಿಷಯಗಳು ಚರ್ಚೆಗೆ ಬರದಿರುವುದು ವಿಷಾದನೀಯವಾಗಿದೆ.

ಆಹಾರ ಸರಪಳಿ ತುಂಡರಿಸಿದ ಪರಿಣಾಮ, ಹಿಂದೆಲ್ಲಾ ಹಕ್ಕಿ ಪಿಕ್ಕಿ ಜನಾಂಗದವರು ಸ್ಥಳಿಯಾ ಬೇಟೆಗಾರರು ತಮ್ಮ ಅಹಾರಕ್ಕಾಗಿ ಬೇಟೆ ಮಾಡುತ್ತಾ ಬರುತ್ತಿದ್ದರು. ಇದರಿಂದ ಕಾಡುಪ್ರಾಣಿಗಳ ಸಮತೋಲನ ಸಾಧ್ಯವಾಗುತ್ತಿತ್ತು.

ಕಾಡುಪ್ರಾಣಿಗಳ ಬೇಟೆ ನಿಷೇಧ ಮಾಡಿದ ಪರಿಣಾಮ ಕಾಡು ಪ್ರಾಣಿಗಳ ಸಂತತಿ ಹೆಚ್ಚಿದ್ದರ ಪರಿಣಾಮ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೂಡಲೆ ರೈತರ ನೆರವಿಗೆ ಬಂದು ಕಾಡುಪ್ರಾಣಿಗಳಿಂದ ರೈತರ ಬೆಳೆ ರಕ್ಷಿಸಬೇಕಾಗಿದೆ ಎಂದು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷಣ್ ಆಗ್ರಹಿಸಿ ಈ ಕೂಡಲೆ ಆರಣ್ಯ ಇಲಾಖೆ ಮತ್ತು ತೊಟಗಾರಿಕೆ ಇಲಾಖೆಯವರು ಹಾಗು ಕೃಷಿ ಇಲಾಖೆಯವರು ತೆಂಗು ಹಾಗು ಕಬ್ಬಿನ ಬೆಳೆ ನಷ್ಠದ ಸರ್ವೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸಾಲದ ಭಾದೆಯಿಂದ, ರೈತರ ಆತ್ಮಹತ್ಯೆಯ ಸರಣಿಯ ನಡುವೆ ಬಂದರೆಗಿದ ಹಂದಿಹಾವಳಿಯಿಂದ ರೈತರು ಕಂಗಾಲಿಗಿದ್ದು ಸರ್ಕಾರ ಕೂಡಲೆ ರೈತರ ನೆರವಿಗೆ ನಿಲ್ಲಬೇಕು ಪ್ರತಿ ತೆಂಗಿನ ಗಿಡಕ್ಕೆ ಇಪ್ಪತ್ತು ಸಾವಿರ ಪರಿಹಾರ ನೀಡಬೇಕು ಕಬ್ಬಿನ ಬೆಳೆಗೆ ಪ್ರತಿ ಎಕರೆಗೆ ಐವತ್ತುಸಾವಿರ ರೂ ನೀಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿ. ಸಿ. ಉಮಾಶಂಕರ್ ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ