Tuesday, November 24, 2026

ಪ್ರಾಯೋಗಿಕ ಆವೃತ್ತಿ

ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ| ಶಾಲೆಗಳಿಗೆ ರಜೆ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ

ಅರವಿಂದ ಪ್ರಭು, ಚಿತ್ರಕೂಟ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲಾರದಷ್ಟು ವಿಕೋಪಕ್ಕೆ ತಿರುಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮನೆಯಿಂದಲೇ Online ಪಾಠಗಳಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಲಾಗಿದೆ.

ನಮ್ಮ ದುರಾಸೆ ಭೂಮಿಯ ಮೇಲೆ ನಮ್ಮ ಮಕ್ಕಳು ಉಸಿರಾಡಲೂ ಕಷ್ಟಪಡುವ ಸನ್ನಿವೇಶವನ್ನು ನಿರ್ಮಿಸಿದೆ.‌ ಬೀದಿಗೆ ಬರಲಾಗದೆ, ಶಾಲೆಗೆ ಹೋಗಲಾಗದೆ ಮಕ್ಕಳು ಮನೆಯಲ್ಲೇ ಬಂಧಿಯಾಗುವ ಪರಿಸ್ಥಿತಿ ನಾವೇ ಕೈಯಾರೆ ತಂದೊಡ್ಡಿದ್ದೇವೆ.

ನಾವು ನಿಸರ್ಗಕ್ಕೆ ಪೂರಕವಾಗಿ ಎಲ್ಲ ಬಗೆಯ ಮಾಲಿನ್ಯಗಳನ್ನು ನಿಯಂತ್ರಿಸಬೇಕಿದೆ. ತಿಂಗಳಿಗೆ ಒಮ್ಮೆಯಾದರೂ ನಮ್ಮ ಸುತ್ತಮುತ್ತ ಗಿಡಮರಗಳನ್ನು ಬೆಳೆಸದೇ ಹೋದರೆ ದೆಹಲಿಗೆ ಬಂದ ಪರಿಸ್ಥಿತಿ ನಮ್ಮ ನಾಡಿನ ನಗರಗಳಿಗೂ ಬರಲಿದೆ. ಎಲ್ಲೆಂದರಲ್ಲಿ ಕೆರೆಕಟ್ಟೆಗಳು, ನದಿಮೂಲಗಳಿಗೆ ಮನಸೋಇಚ್ಛೆ ತ್ಯಾಜ್ಯ ಸುರಿಯುತ್ತಿರುವ ನಮಗೆ ದೆಹಲಿಯ ಗೃಹಬಂಧನದ ಘಟನೆ ಪಾಠವಾಗಬೇಕಿದೆ.

ಇಂದು ಬೆಳಿಗ್ಗೆ ದಿ ಹಿಂದೂ ಪತ್ರಿಕೆ ನಾಲ್ಕನೇ ಪುಟ ತೆಗೆಯುತ್ತಿದ್ದಂತೆ ನಮ್ಮ ಮಕ್ಕಳ ಮುಂದಿನ ಭವಿಷ್ಯದ ಕುರಿತು ಆತಂಕವಾಯಿತು. ನಮ್ಮ ಮಕ್ಕಳಿಗಾಗಿಯಾದರೂ ಪರಿಸರವನ್ನು ಕಾಪಾಡಿಕೊಳ್ಳದಿದ್ದರೆ ಉಳಿಗಾಲವಿಲ್ಲ ಅನಿಸಿತು.

ನಮ್ಮ ಚಿತ್ರಕೂಟ ಮತ್ತು ಪರಿಸರ ಸಂಸ್ಥೆಗಳ ವತಿಯಿಂದ ಸಸ್ಯ ಸಾಕ್ಷರತಾ ಆಂದೋಲನ‌ ನಡೆಸಿ ಸುಮಾರು 120 ವಿದ್ಯಾರ್ಥಿಗಳಿಗೆ ತಲಾ ಎರಡರಂತೆ 240 ಸಸಿಗಳನ್ನು ವಿತರಿಸಿದ್ದೇವೆ. 45 ಸಸಿಗಳನ್ನು ಚಿಕ್ಕಮಂಡ್ಯ ಶಾಲೆಯ ಆವರಣದಲ್ಲಿ ನಾವು ನೆಟ್ಟಿದ್ದೇವೆ. ಇನ್ನೂ ಎಂಟು ಜಂಬು ನೆರಳೆ ಗಿಡಗಳನ್ನು ನಾಳೆ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ನೆಡುತ್ತಿದ್ದಾರೆ.

ಪ್ರಕೃತಿ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ನಾವು ಎಚ್ಚೆತ್ತುಕೊಂಡಿದ್ದೇವೆ. ನೀವೂ ಕೈಜೋಡಿಸಿ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ