Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿಂಗ್ ಕಮಾಂಡರ್ ಶಿಲಾದಿತ್ಯ V/s ಕನ್ನಡಿಗ ಸಾಪ್ಟ್ ವೇರ್ ಇಂಜಿನಿಯರ್ : ನಡೆದಿದ್ಧೇನು… ?

ಸಂಜು ಆಲಕೆರೆ

ಹಿಂದಿಯವನ ಪರವಾಗಿ ಬರುವ ಸಾಮಾನ್ಯ ಮಾತುಗಳು ಮತ್ತು ಕನ್ನಡ ಹೋರಾಟಗಾರರ ಬಗ್ಗೆ ಕನ್ನಡ ನಾಡಿನಲ್ಲಿರುವವರೇ ಇಟ್ಟುಕೊಂಡಿರುವ ಅಸಮಾಧಾನದ ಮಾತುಗಳು

ಸಂಚು : ಕನ್ನಡ ನಾಡಿನ ಜನರಿಗೆ ಒಬ್ಬ ಸೈನಿಕನಿಗೆ ಹೇಗೆ ಬೆಲೆ ಕೊಡ್ಬೇಕು ಅಂತನೇ ಗೊತ್ತಿಲ್ಲ..
ಪಂಚು: ಒಬ್ಬ ವಿಂಗ್ ಕಾಮೆಂಡರ್ ಹೇಗೆ ವರ್ತಿಸಬೇಕು ಅಂತ ಅರಿವಿಲ್ಲ ಅವನಿಗೆ..

ಸಂಚು : ಆ ಸೈನಿಕ ತಪ್ಪೇ ಮಾಡಿರಲಿ, ಅವರ ಸೇವೆಯನ್ನು ಗುರುತಿಸಿ ಬಿಟ್ಟು ಅಭಿಮಾನ ಮೆರೆಯಬಹುದಿತ್ತು ..
ಪಂಚು : ನಾಡಿಗೆ ಅವಮಾನ ಮಾಡುವವನು ಯಾವನೇ ಆಗಿದ್ರು ಬಿಡೋ ಮಾತಿಲ್ಲ.

ಸಂಚು : ದೇಶ ಕಾಯೋ ಸೈನಿಕರ ಮೇಲೆ ಹಲ್ಲೆ ಮಾಡಿದ್ದೂ ಆ ಹುಡುಗನ ತಪ್ಪು
ಪಂಚು : ಬಲ ಪ್ರದರ್ಶನ ಎಲ್ಲಿ ತೋರಿಸ ಬೇಕು ಅಲ್ಲಿ ತೋರಿಸಬೇಕು, ಎಲ್ಲ ಕಡೆ ತೋರಿಸಿದ್ದು ತಪ್ಪೇ, ವಿಡಿಯೋ ನೋಡು ಯಾರು ಯಾರಿಗೆ ಹೇಗೆ ಹೊಡೆದಿದ್ದಾರೆ ಅನ್ನೋದು ಗೊತ್ತಾಗುತ್ತೆ..

“>

 

ಸಂಚು : FIR ಹಾಕಿಸುವ ಅನಿವಾರ್ಯ ಏನಿತ್ತು, ಈ ಕನ್ನಡ ಹೋರಾಟಗಾರರು ಕನ್ನಡದ ಹೆಸರಿನಲ್ಲಿ ನಾಡಿಗೆ ಕೆಟ್ಟ ಹೆಸರು ತರುತಿದ್ದಾರೆ,
ಪಂಚು : ಕಾನೂನಿನ ಮುಂದೆ ಎಲ್ಲರು ಸಮಾನರು ಅನ್ನೋದು ಜಗತ್ತಿಗೆ ಗೊತ್ತಾಗಬೇಕಿತ್ತು..

ಸಂಚು : ಕನ್ನಡಿಗರು ಕೆಟ್ಟವರು ಭಾಷೆ ಭಾಷೆ ಅಂತ ಸಾಯೋ ಜನ, ರೌಡಿಗಳು ಗುಂಡಾಗಳ ರೀತಿ ವರ್ತನೆ ಮಾಡ್ತಾರೆ..
ಪಂಚು : ಕನ್ನಡಿಗರು ನ್ಯಾಯ ಕೇಳಿದ್ರೆ ಕೆಲವರು ನಮಗೆ ಕೋಡುವ ಬಿರುದುಗಳು ಇವು..

ಸಂಚು : ದುಡ್ಡಿಗಾಗಿ ಹೀಗೆಲ್ಲ ಮಾಡ್ತಾರೆ, ರೋಲ್ ಕಾಲ್ಗಳು, ಚಿಲ್ಲರೆ ಬುದ್ಧಿ ಇರೋರು ಈ ಹೋರಾಟಗಾರರು..
ಪಂಚು : ದುಡ್ ಮಾಡೋಕೆ ಕನ್ನಡ ಹೋರಾಟದ ಹೆಸರನ್ನು ಬಳಸಿ ಕೊಂಡಿಲ್ಲ, ಕನ್ನಡ ಹೋರಾಟಗಾರರನ್ನು ಬಳಸಿಕೊಂಡು ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಅಷ್ಟೇ..

ಸಂಚು : ದುಡಿಯೋಕೆ ಅಂತ ಇಲ್ಲಿಗೆ ಬರೋ ಜನರ ಮೇಲು ದರ್ಪ ತೋರಿಸ್ತಾರೆ…
ಪಂಚು : ಇಲ್ಲಿನ ರೀತಿ ನೀತಿನ ಕಾಲಲ್ಲಿ ತುಳಿದ್ರೆ ನೋಡ್ಕೊಂಡು ಯಾವನು ಸುಮ್ನೆ ಇರಲ್ಲ..

ಸಂಚು : ತಕ್ಕತ್ತು ಅನ್ನೋದ್ ಇದ್ರೆ ಸರ್ಕಾರದಿಂದ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳುವಂತೆ ಮಾಡ್ಬೇಕು ಅದ್ಬಿಟ್ಟು ನಕಲಿ ಪೊಲೀಸ್ ಗಿರಿ ಸರಿಯಲ್ಲ…
ಪಂಚು : ಎಲ್ಲ ಉತ್ತರದ ಪಕ್ಷಗಳು ಕನ್ನಡಿಗರ ಗೋಳು ಕೇಳೋರು ಯಾರು ಇಲ್ಲ, ಹಾಗಂತ ಕೈ ಕಟ್ಟಿಕೊಂಡು ಕೂರೋದಿಲ್ಲ..

ಸಂಚು : ಬೇರೆ ರಾಜ್ಯದವರ ಮುಂದೆ ತಲೆ ತಗ್ಗಿಸುವ ಕೆಲಸ ಆಗೋಯ್ತು,
ಪಂಚು : ಸುಳ್ಳು ಸುದ್ಧಿ ಹಂಚಿರೋದು ಆ ಹಿಂದಿಯಾವನು ಅದು ಯಾರಿಗೂ ಕಾಣಲ್ವ..

ಸಂಚು : FIR ವಾಪಸ್ಸು ತಗೊಂಡು ಆ ಸೈನಿಕನಿಗೆ ಕ್ಷಮೆ ಕೇಳ್ಬೇಕು..
ಪಂಚು : ಸ್ವಾಭಿಮಾನ ಬಿಟ್ಟು ಬದುಕೋಕೆ ಕನ್ನಡಿಗರು ಗುಲಾಮರಲ್ಲ ಸಾರ್ವಭೌಮರು, ಅವನು ಮಾಡಿರೋ ಡ್ರಾಮಾ ಮೆಚ್ಚಿ ಟೀವಿ ರಿಯಾಲಿಟಿ ಶೋ ನಲ್ಲಿ ಒಂದ್ ಚಾನ್ಸ್ ಕೊಡ್ತಾರೆ ಹೋಗಿ ನಟನೆ ಮಾಡೋಕೆ ಹೇಳು..

ಸಂಚು : ಅನ್ಯ ಭಾಷೆಯ ಚಾನೆಲ್ ನಲ್ಲಿ ಕನ್ನಡ ನಾಡಿನ ಬಗ್ಗೆ ಹೇಗೇಗೋ ಮಾತಾಡ್ತಿದ್ದಾರೆ..
ಪಂಚು : ನೀನು ಕರ್ನಾಟಕದಲ್ಲೇ ಇದ್ಯಾ ತಾನೇ ನಿನಗೂ ಕನ್ನಡ ನಾಡಿನ ಮೇಲೆ ಅಭಿಮಾನ ಹುಟ್ಟುವವರೆಗೂ ನಮಗೆ ಹೀಗೆಲ್ಲ ಆಗೋದು ಸಹಜ.. ಕನ್ನಡ ನಾಡಿನಲ್ಲಿ ಬದುಕಿರುವ ಎಲ್ಲರು ಕನ್ನಡಿಗರಾಗುವ ತನಕ ಇವನಂತೋರು ಇನ್ನೂ ಜಾಸ್ತಿ ಆಗ್ತಿರ್ತಾರೆ..

ಸಂಚು : ಲೋ ನಮಗೂ ಅಭಿಮಾನ ಆಯ್ತೆ ನಿಮ್ ತರ ತೋರಿಸಿ ಕೊಂಡಿಲ್ಲ..
ಪಂಚು : ಎಲ್ಲಿಂದನೋ ಬಂದವರು ಈ ನಾಡಿನ ಬಗ್ಗೆ, ಇಲ್ಲಿನ ಭಾಷೆ ಬಗ್ಗೆ ಕೆಟ್ಟದಾಗಿ ಮಾತಾಡೋದ್ನು ಮನ್ಸಿಗೆ ಹಾಕೊಂಡು ಸುಮ್ನಿರಿ ಥು ನಿಮ್ ಜನ್ಮಕ್ಕೆ ನಾಚಿಕೆ ಆಗ್ಬೇಕು ನಿಮ್ಗೆ, ನಮ್ ನಾಡ ದ್ರೋಹಿಗಳನ್ನ ಮೆರೆಸೋದು, ನಮ್ಮವರನ್ನೇ ಕಡೆಗಣಿಸೋದನ್ನು ಇನ್ನಾದ್ರೂ ನಿಲ್ಸ್ರೋ..🤦🏻‍♂️

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ