Friday, November 20, 2026

ಪ್ರಾಯೋಗಿಕ ಆವೃತ್ತಿ

ತಾಯಿಯ ಎದೆ ಹಾಲು ಮಗುವಿಗೆ ಅಮೃತವಿದ್ದಂತೆ ; ಬೆನ್ನೂರ

ತಾಯಿಯ ಎದೆ ಹಾಲು ಮಗುವಿಗೆ ಅಮೃತವಿದ್ದಂತೆ ಆದ್ದರಿಂದ ತಾಯಂದಿರರು ಹೆರಿಗೆ ಆದ ಒಂದು ಗಂಟೆ ಒಳಗಾಗಿ ಮಗುವಿಗೆ ಹಾಲುಣಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಸಲಹೆ ನೀಡಿದರು.

ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ರಂಗನಾಥ ನಗರದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ “ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಪೌಷ್ಠಿಕ ಆಹಾರ” ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಯಿಯ ಎದೆ ಹಾಲು ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದ್ದು ಮಗುವನ್ನು ಯಾವುದೇ ರೋಗ ಬರದಂತೆ ಅನೇಕ ಸೋಂಕುಗಳಿಂದ ವಿಶೇಷವಾಗಿ ಅತಿಸಾರ ಭೇದಿಯಿಂದ ರಕ್ಷಿಸುತ್ತದೆ ಹಾಗೂ ತಡೆಗಟ್ಟುತ್ತದೆ. ಅಲ್ಲದೆ ತಾಯಿ ಮತ್ತು ಮಗುವಿನ ಮಧ್ಯ ಪ್ರೀತಿ, ಬಾಂಧವ್ಯ, ಮಮತೆ, ವಾತ್ಸಲ್ಯ ಹಾಗೂ ಕರುಣೆಗಳನ್ನು ಬೆಸೆಯುತ್ತದೆ, ಆದ್ದರಿಂದ ತಾಯಂದಿರರು ಹೆರಿಗೆ ಆದ ಆರು ತಿಂಗಳ ವರೆಗೆ ತಾಯಿಯ ಎದೆ ಹಾಲು ಬಿಟ್ಟು ಬೇರೆ ಏನನ್ನು ಕೊಡಬಾರದು ಎಂದರು.

ತಾಯಿಯ ಹಾಲು ಮಗುವಿಗಾಗಿ ಸಿದ್ಧಪಡಿಸಿದ ಆಹಾರವಾಗಿದೆ, 6 ತಿಂಗಳ ಬಳಿಕ ತಾಯಿಯ ಎದೆ ಹಾಲಿನ ಜೊತೆ ಪೂರಕ ಆಹಾರ ಪ್ರಾರಂಭಿಸಬೇಕು. ಒಟ್ಟಾರೆ ಮಗು 2 ವರ್ಷ ಆಗುವವರೆಗೆ ಸಂಪೂರ್ಣ ತಾಯಿಯ ಎದೆ ಹಾಲು ನೀಡಬೇಕು. ಇದರಿಂದ ಮಗುವಿಗೆ ಯಾವುದೇ ಕಾಯಿಲೆ ಬರುವದಿಲ್ಲ, ಜೊತೆಗೆ ಮಗು ಜಾಣ ಆಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ ಏರ್ಪಡಿಸಿ ಪೌಷ್ಠಿಕ ಆಹಾರದ ಮಹತ್ವ ಕುರಿತು ತಾಯಂದಿರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆಯರಾದ ರೇಷ್ಮಾ, ಸುಂದರಿ, ಸುಜಾತ, ಲಕ್ಷ್ಮೀ, ಆಶಾ ಕಾರ್ಯಕರ್ತೆ ಮೀನಾ ಹಾಗೂ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಪೋಷಕರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ